Hosakote ಪೊಲೀಸರ ಭರ್ಜರಿ ಕಾರ್ಯಾಚರಣೆ: ಕೋಟ್ಯಾಂತರ ರೂ. ಮೌಲ್ಯದ ರಕ್ತ ಚಂದನ ವಶ
650ಕ್ಕೂ ಅಧಿಕ ಕೆಜಿಯ ಕೋಟ್ಯಾಂತರ ರೂಪಾಯಿ ಮೌಲ್ಯದ ರಕ್ತ ಚಂದನವನ್ನು ಪೊಲೀಸರು ವಶಕ್ಕೆ ಪಡೆದಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಕಟ್ಟಿಗೇನಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಹೊಸಕೋಟೆ (ಜೂ.17): 650ಕ್ಕೂ ಅಧಿಕ ಕೆಜಿಯ ಕೋಟ್ಯಾಂತರ ರೂಪಾಯಿ ಮೌಲ್ಯದ ರಕ್ತ ಚಂದನವನ್ನು ಪೊಲೀಸರು ವಶಕ್ಕೆ ಪಡೆದಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಕಟ್ಟಿಗೇನಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ನೀಲಗಿರಿ ತೋಪಿನಲ್ಲಿ ರೆಡ್ ಸ್ಯಾಂಡಲ್ ಸ್ಮಗ್ಲಿಂಗ್ ಮಾಡಲಾಗುತ್ತಿತ್ತು. ನೀಲಗಿರಿ ಮರಗಳ ನಡುವೆ ಭೂಮಿಯಲ್ಲಿ ರಕ್ತಚಂದನ ಬಚ್ಚಿಟ್ಟು ಖದೀಮರು ಸ್ಮಗ್ಲಿಂಗ್ ಮಾಡಲು ಯತ್ನಿಸಿದ್ದಾರೆ.
ಹೊಸಕೋಟೆ ಡಿವೈಎಸ್ಪಿ ಉಮಾಶಂಕರ್ ನೇತೃತ್ವದಲ್ಲಿ ಮಧ್ಯರಾತ್ರಿವರೆಗೂ ಕಾರ್ಯಾಚರಣೆ ನಡೆಸಿ ಕೆಜಿಗಟ್ಟಲೆ ರಕ್ತಚಂದನ ವಶಕ್ಕೆ ಪಡೆಯಲಾಗಿದೆ. ನೆರೆಯ ಆಂಧ್ರದ ನಲ್ಲಮಲ್ಲ ಅರಣ್ಯ ಪ್ರದೇಶದಿಂದ ರಕ್ತ ಚಂದನ ತಂದಿದ್ದು , ಪೊಲೀಸರು ದಾಳಿ ನಡೆಸುತ್ತಿದ್ದಂತೆ ಖದೀಮರು ಎಸ್ಕೆಪ್ ಆಗಿದ್ದಾರೆ. ರಕ್ತಚಂದನ ಬಚ್ಚಿಟ್ಟಿದ್ದ ಅಯಾಜ್ ಖಾನ್, ಜಮೀರ್ ಮತ್ತು ಇರ್ಪಾನ್ ಎಸ್ಕೆಪ್ ಆಗಿದ್ದು, ಹೀಗಾಗಿ ಮೂವರ ವಿರುದ್ಧ ತಿರುಮಲ ಶೆಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ . ಹೊಸಕೋಟೆ ಪೊಲೀಸರಿಂದ ಆರೋಪಿಗಳ ಬಂಧನಕ್ಕೆ ಶೋಧಕಾರ್ಯ ನಡೆದಿದೆ.