ಮಧ್ಯರಾತ್ರಿ ಸೆಕೆಂಡ್ ಮುಳ್ಳು 12ರತ್ತ ಬಂದು ಸರಿದು ಹೋಗುತ್ತಿದ್ದಂತೆ ಸಿಲಿಕಾನ್‌ ಸಿಟಿಯಲ್ಲಿ ‘ಹ್ಯಾಪಿ ನ್ಯೂ ಇಯರ್‌’ ಕೇಕೆ ಮುಗಿಲುಮುಟ್ಟಿತ್ತು. ಆಗಸದಲ್ಲಿ ಪಟಾಕಿ ಸಿಡಿಯುತ್ತಿದ್ದರೆ, ಕೇಕ್‌ ಕತ್ತರಿಸಿ, ಶ್ಯಾಂಪೇನ್‌ ಬಾಟಲ್‌ ಸಿಡಿಸಿ, ಆಲಂಗಿಸಿಕೊಳ್ಳುತ್ತ 2024ರ ಶುಭಾಶಯವನ್ನು ಜನರು ಪರಸ್ಪರ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.

ಬೆಂಗಳೂರು (ಜ.1): ಮಧ್ಯರಾತ್ರಿ ಸೆಕೆಂಡ್ ಮುಳ್ಳು 12ರತ್ತ ಬಂದು ಸರಿದು ಹೋಗುತ್ತಿದ್ದಂತೆ ಸಿಲಿಕಾನ್‌ ಸಿಟಿಯಲ್ಲಿ ‘ಹ್ಯಾಪಿ ನ್ಯೂ ಇಯರ್‌’ ಕೇಕೆ ಮುಗಿಲುಮುಟ್ಟಿತ್ತು. ಆಗಸದಲ್ಲಿ ಪಟಾಕಿ ಸಿಡಿಯುತ್ತಿದ್ದರೆ, ಕೇಕ್‌ ಕತ್ತರಿಸಿ, ಶ್ಯಾಂಪೇನ್‌ ಬಾಟಲ್‌ ಸಿಡಿಸಿ, ಆಲಂಗಿಸಿಕೊಳ್ಳುತ್ತ 2024ರ ಶುಭಾಶಯವನ್ನು ಜನರು ಪರಸ್ಪರ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.

ನಗರದ ಎಂ.ಜಿ.ರೋಡ್‌, ಕಮರ್ಷಿಯಲ್‌ ಸ್ಟ್ರೀಟ್, ಬ್ರೀಗೇಡ್‌ ರೋಡ್‌, ಚರ್ಚ್ ಸ್ಟ್ರೀಟ್ ಸೇರಿದಂತೆ ಇಂದಿರಾನಗರ, ಕೋರಮಂಗಲ, ವೈಟ್‌ಫೀಲ್ಡ್‌, ಎಲೆಕ್ಟ್ರಾನಿಕ್‌ ಸಿಟಿ ಸೇರಿ ಎಲ್ಲೆಡೆ ಜನ ಕಿಕ್ಕಿರಿದು ನೆರೆದಿದ್ದರು. ಇಲ್ಲಿರುವ ಹೋಟೆಲ್‌, ಪಬ್‌, ರೆಸ್ಟೋರೆಂಟ್‌ಗಳಲ್ಲಿ ಯುವಜನತೆಯ ಪಾರ್ಟಿಗೆ ಎಲ್ಲೆಯಿರಲಿಲ್ಲ. ಕಿಕ್ಕೇರಿಸಿಕೊಂಡು 2023ಕ್ಕೆ ಗುಡ್‌ಬೈ ಹೇಳಿ ಹೊಸ ವರ್ಷವನ್ನು ಬರಮಾಡಿಕೊಂಡರು. ಮದ್ಯದ ನಶೆಯಲ್ಲಿದ್ದ ಯುವಕ-ಯುವತಿಯರು ಕಣ್ಣು ಹಾಯಿಸಿದಲ್ಲೆಲ್ಲ ಕುಣಿದರು. ಕೇಕೆ ಹಾಕುತ್ತ ಸಂಭ್ರಮದಲ್ಲಿ ಮುಳುಗೆದ್ದರು. ಪಾರ್ಟಿಗೆ ಸೇರಿದ ಎಲ್ಲರೂ ಶ್ರೀಮಂತ ವರ್ಗದ ಯುವಕರೇ. ಎಲ್ಲರ ಕೈಗಳಲ್ಲೂ ದುಬಾರಿ ಮೊಬೈಲ್‌ಗಳು. ಇದನ್ನೇ ಟಾರ್ಗೆಟ್‌ ಮಾಡಿಕೊಂಡ ಮೊಬೈಲ್ ಕಳ್ಳರು ನಿನ್ನೆ ಸುಮಾರು 10ಕ್ಕೂ ಹೆಚ್ಚು ಮೊಬೈಲ್ ಕಳ್ಳತನ ನಡೆದಿವೆ.

ರಾಜ್ಯದಲ್ಲಿ 'ಬೀರ್‌'ಬಲ್ಲರ ಸಂಖ್ಯೆ ಹೆಚ್ಚಳ; ವರ್ಷದಲ್ಲೇ ದ್ವಿಗುಣವಾದ ಬೀಯರ್ ಮಾರಾಟ!

ಪಾನಮತ್ತರಾಗಿ ತೂರಾಡುತ್ತಿದ್ದ ಯುವ ಸಮೂಹದ ಜನಸಂದಣಿಯಲ್ಲಿ ನುಗ್ಗಿ. ಪ್ಯಾಂಟ್, ಜೇಬುಗಳಲ್ಲಿದ್ದ ಮೊಬೈಲ್ ಎಗರಿಸಿರುವ ಖದೀಮರು. ಕಳ್ಳರ ಕೈಚಳಕಕ್ಕೆ ಮೊಬೈಲ್ ಕಳೆದುಕೊಂಡು ಶಾಕ್ ಆಗಿದ್ದಾರೆ. ಎಂಜಿ ರೋಡ್, ಚರ್ಚ್‌ಸ್ಟ್ರೀಟ್, ಬ್ರಿಗೇಡ್ ರೋಡ್‌ನಲ್ಲಿ ಹೆಚ್ಚು ಕಳ್ಳತನವಾಗಿದ್ದು, ಮೊಬೈಲ್ ಕಳುವು ಪ್ರಕರಣ ಸಂಬಂಧ ದೂರುಗಳು ಬರುತ್ತಿವೆ. ಅಶೋಕ್ ನಗರ ಹಾಗೂ ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ 

ಪ್ರತಿದಿನ ಸ್ವಲ್ಪ ಸ್ವಲ್ಪ ಬಿಯರ್ ಕುಡಿದ್ರೆ ಏನೂ ಆಗಲ್ಲ ಅಂತಾ ಅಂದ್ಕೊಡಿರೋರು ಇದನ್ನ ಓದಿ