ವಿಚಾರಕ್ಕೆ ನಡೆದ ಜಗಳದಲ್ಲಿ ಮಕ್ಕಳಿಂದಲೇ ತಂದೆಯ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಕೊಂದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ವಿವೇಕಾನಂದ ಕರಿಯಲ್ಲಪ್ಪನವರ (52) ಹತ್ಯೆಗೀಡಾದ ದುರ್ದೈವಿ. ಪ್ರಕಾಶ, ಮಲ್ಲೇಶ ತಂದೆಯನ್ನ ಕೊಂದ ಆರೋಪಿಗಳು.

ಗದಗ (ಮಾ.14): ಹಣದ ವಿಚಾರಕ್ಕೆ ನಡೆದ ಜಗಳದಲ್ಲಿ ಮಕ್ಕಳಿಂದಲೇ ತಂದೆಯ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಕೊಂದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.

ವಿವೇಕಾನಂದ ಕರಿಯಲ್ಲಪ್ಪನವರ (52) ಹತ್ಯೆಗೀಡಾದ ದುರ್ದೈವಿ. ಪ್ರಕಾಶ, ಮಲ್ಲೇಶ ತಂದೆಯನ್ನ ಕೊಂದ ಆರೋಪಿಗಳು. ಮೃತ ವಿವೇಕಾನಂದ ಕರಿಮಲ್ಲಪ್ಪಗೆ ಇಬ್ಬರು ಹೆಂಡತಿಯರು, ಮೊದಲನೇ ಹೆಂಡತಿ ಮೃತ ಕಸ್ತೂರಮ್ಮ. ಎರಡನೇ ಹೆಂಡತಿ ರೇಖಾ.

ಗದಗ ಕಾಂಗ್ರೆಸ್ ಕಾರ್ಯಕರ್ತನ ಅಟ್ಟಾಡಿಸಿ ಕೊಂದು ಮರಕ್ಕೆ ನೇತುಹಾಕಿದ ದುಷ್ಕರ್ಮಿಗಳು!

ಘಟನೆ ಹಿನ್ನೆಲೆ

6 ಎಕರೆ ಜಮೀನು ಹೊಂದಿದ್ದ ಮೃತ ವಿವೇಕಾನಂದ ಕರಿಮಲ್ಲಪ್ಪ. 6 ಎಕರೆ ಜಮೀನು ಪೈಕಿ 3 ಎಕರೆ ಮಾರಾಟ ಮಾಡಿದ್ದ. ಜಮೀನು ಮಾರಾಟದಿಂದ ಬಂದಿದ್ದ 1.30 ಲಕ್ಷ ರೂಪಾಯಿ ಹಣ ಹಂಚಿಕೆ ವಿಷಯಕ್ಕೆ ತಗಾದೆ ತೆಗೆದಿದ್ದ ಮೊದಲ ಹೆಂಡತಿಯ ಪುತ್ರರು. ಆದರೆ ಹಣ ಹಂಚಿಕೆ ಮಾಡಲು ಒಪ್ಪಿರಲಿಲ್ಲ. ಹೀಗಾಗಿ ಎರಡನೇ ಪತ್ನಿ ರೇಖಾ ಜಮೀನಿಗೆ ತೆರಳಿದ್ದ ವೇಳೆ ಮನೆಗೆ ನುಗ್ಗಿರುವ ಪುತ್ರರು. ಮನೆಯೊಳಗೆ ಕೂಡಿಹಾಕಿ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಗಂಭೀರ ಗಾಯಗೊಂಡ ವಿವೇಕಾನಂದ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾರೆ. 

ಬೆಂಗಳೂರು: ಏರಿಯಾದಲ್ಲಿ ಹವಾ ಸೃಷ್ಟಿಸಲು ಯತ್ನಿಸಿದ್ದೇ ರೌಡಿ ಹತ್ಯೆಗೆ ಕಾರಣ

ಹಣದ ಹಂಚಿಕೆ ವಿಚಾರವೇ ಹಲ್ಲೆಗೆ ಕಾರಣವೆಂದು ಪತ್ನಿ ರೇಖಾ ತಿಳಿಸಿದ್ದಾರೆ. ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ