ರಾಯಚೂರು: ಮಕ್ಕಳ ಕಳ್ಳಿಯೆಂದು ಮರಕ್ಕೆ ಕಟ್ಟಿಹಾಕಿ ಬಡಪಾಯಿ ಮಹಿಳೆಗೆ ಥಳಿಸಿದ ಪಾಪಿಗಳು!
ಮಕ್ಕಳ ಕಳ್ಳಿ ಎಂಬ ಅನುಮಾನದ ಮೇಲೆ ಸ್ಥಳೀಯ ಗುಂಪೊಂದು ಮಾನಸಿಕ ಅಸ್ವಸ್ಥ ಮಹಿಳೆಯನ್ನು ಹಗ್ಗದಿಂದ ಮರಕ್ಕೆ ಕಟ್ಟಿಹಾಕಿ ಅಮಾನುಷವಾಗಿ ಹಲ್ಲೆ ನಡೆಸಿದ ಘಟನೆ ರಾಯಚೂರು ನಗರದ ಮಕ್ತಲಪೇಟೆಯಲ್ಲಿ ಘಟನೆ ನಡೆದಿದೆ.
ರಾಯಚೂರು (ಅ.6): ಮಕ್ಕಳ ಕಳ್ಳಿ ಎಂಬ ಅನುಮಾನದ ಮೇಲೆ ಸ್ಥಳೀಯ ಗುಂಪೊಂದು ಮಾನಸಿಕ ಅಸ್ವಸ್ಥ ಮಹಿಳೆಯನ್ನು ಹಗ್ಗದಿಂದ ಮರಕ್ಕೆ ಕಟ್ಟಿಹಾಕಿ ಅಮಾನುಷವಾಗಿ ಹಲ್ಲೆ ನಡೆಸಿದ ಘಟನೆ ರಾಯಚೂರು ನಗರದ ಮಕ್ತಲಪೇಟೆಯಲ್ಲಿ ಘಟನೆ ನಡೆದಿದೆ.
ಹಲ್ಲೆಗೊಳಗಾದ ಮಹಿಳೆ ತಾಲೂಕಿನ ವಡವಟ್ಟಿ ಗ್ರಾಮದ ನಿವಾಸಿಯೆಂದು ಗುರುತಿಸಲಾಗಿದೆ. ಮಾನಸಿಕ ಅಸ್ವಸ್ಥಳಾಗಿರುವುದರಿಂದ ನಗರದಲ್ಲಿ ಅಲೆದಾಡುವ ಮಹಿಳೆ. ಅಲೆದಾಡುತ್ತಾ ಮಕ್ತಲಪೇಟೆಗೆ ಹೋಗಿದ್ದಾಳೆ. ಈ ವೇಳೆ ಅಲ್ಲಿನ ಮಕ್ಕಳನ್ನು ಮುಟ್ಟಿದಕ್ಕೆ ಮಕ್ಕಳ ಕಳ್ಳಿಯೆಂದು ಅನುಮಾನಗೊಂಡ ಸ್ಥಳೀಯರು, ಆಕೆಯನ್ನ ಹಿಡಿದು ಹಗ್ಗದಿಂದ ಮರಕ್ಕೆ ಕಟ್ಟಿಹಾಕಿ ಮನಬಂದಂತೆ ಥಳಿಸಿದ್ದಾರೆ.
ಶಾಲೆ ಮುಗಿಸಿ, ಬಸ್‌ಸ್ಟ್ಯಾಂಡ್‌ನಲ್ಲಿ ಹಣ್ಣು ಮಾರುವ 4 ಕ್ಲಾಸ್ ಹುಡುಗ, ಬದುಕು ಕಲಿಸೋದೇ ನಿಜವಾದ ಪಾಠ!
ಮಹಿಳೆಗೆ ಚಿತ್ರಹಿಂಸೆ ನೀಡಿದ ಬಳಿಕ ಪೊಲೀಸರಿಗೆ ಮಾಹಿತಿ ನೀಡಿರುವ ಸ್ಥಳೀಯರು. ಸ್ಥಳಕ್ಕೆ ಬಂದ 112 ಪೊಲೀಸ್ ವಾಹನ ಪೊಲೀಸ್ ಸಿಬ್ಬಂದಿ ಸ್ಥಳೀಯರಿಂದ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಸದ್ಯ ಘಟನೆ ಸಂಬಂಧ ನೇತಾಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸುವ ಉದ್ದೇಶದಿಂದ ಸರ್ಕಾರ ಶಕ್ತಿ ಯೋಜನೆ ಜಾರಿಯಾದ ಬಳಿಕ ಸುತ್ತಲಿನ ಗ್ರಾಮೀಣ ಭಾಗದ ಮಹಿಳೆಯರು ತರಕಾರಿ, ಹಣ್ಣು, ಮೊಸರು ಮಾರಾಟ ಮಾಡಲು ನಗರಕ್ಕೆ ಬರುತ್ತಿದ್ದಾರೆ. ನಗರದಲ್ಲಿ ಮನೆಮನೆಗೆ ತೆರಳಿ ಮಾರಾಟ ಮಾಡುವುದು ಸಾಮಾನ್ಯವಾಗಿದೆ. ಇದೇ ವೇಳೆ ಗ್ರಾಮದಲ್ಲಿ ಕೆಲಸ ಸಿಗದ ಬಡಪಾಯಿ ಮಹಿಳೆಯರು ನಗರಕ್ಕೆ ಬಂದು ಹೋಟೆಲ್‌ಗಳಲ್ಲಿ ದಿನಗೂಲಿ, ಮನೆಯಲ್ಲಿ ದುಡಿಯುತ್ತಿದ್ದಾರೆ. ಹೀಗಿರುವಾಗ ಅಪರಿಚಿತ ಮಹಿಳೆಯರನ್ನ ಮಕ್ಕಳ ಕಳ್ಳರೆಂದು ಭಾವಿಸಿ ಥಳಿಸುತ್ತಿರುವ ಪ್ರಕರಣಗಳ ಹೆಚ್ಚುತ್ತಿರುವುದು ಅಪರಿಚಿತ ಸ್ಥಳಗಳಿಗೆ ಹೋಗಲು ಮಹಿಳೆಯರು ಹೆದರುವಂತಾಗಿದೆ.