ಶಾಸಕ ಮುನಿರತ್ನ ಇಬ್ಬರು ಮಾಜಿ ಮುಖ್ಯಮಂತ್ರಿಗಳನ್ನು ಹನಿಟ್ರ್ಯಾಪ್ ಮಾಡಿದ್ದಾರೆ: ಸಂತ್ರಸ್ತೆ ಹೇಳಿಕೆ!
ರಾಜ್ಯದಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳನ್ನು ಶಾಸಕ ಮುನಿರತ್ನ ಹನಿಟ್ರ್ಯಾಪ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸಂತ್ರಸ್ತ ಮಹಿಳೆ ಸುದ್ದಿಗೋಷ್ಠಿಯಲ್ಲಿ ಈ ಆರೋಪ ಮಾಡಿದ್ದಾರೆ.
ಬೆಂಗಳೂರು (ಅ.09): ರಾಜ್ಯದಲ್ಲಿ ಶಾಸಕ ಮುನಿರತ್ನ ಅವರು ಇಬ್ಬರು ಮಾಜಿ ಮುಖ್ಯಂತ್ರಿಗಳನ್ನು ಹನಿಟ್ರ್ಯಾಪ್ ಮಾಡಿದ್ದಾರೆ. ನನಗೆ ಸರ್ಕಾದಿಂದ ಭದ್ರತೆ ಕೊಟ್ಟಲ್ಲಿ ನಾನು ಮಾಜಿ ಮುಖ್ಯಮಂತ್ರಿಗಳ ಹೆಸರನ್ನು ಹಾಗೂ ಸಂಬಂಧಿತ ವಿಡಿಯೋವನ್ನು ಕೊಡುವುದಾಗಿ ಮುನಿರತ್ನ ಅವರಿಂದ ಅತ್ಯಾಚಾರಕ್ಕೆ ಒಳಗಾಗಿದ್ದಾರೆಂದು ಹೇಳಲಾದ ಸಂತ್ರಸ್ತ ಮಹಿಳೆ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸತ್ರ ಮಹಿಳೆ ಅವರು, ಮುನಿರತ್ನ ಅವರ ಬಳಿ ಯಾವುದೇ ಮಾಧ್ಯಮಗಳ ಬಳಿಯೂ ಇಲ್ಲದಂತಹ ತುಂಬಾ ಅಡ್ವಾನ್ಸ್ಡ್ ಕ್ಯಾಮೆರಾಗಳಿವೆ. ಆ ಕ್ಯಾಮೆರಾಗಳನ್ನು ಬಳಸಿ ಬೇರೆ ಮಹಿಳೆಯರನ್ನು ಬಳಸಿಕೊಂಡು ಇಬ್ಬರು ಮಾಜಿ ಮುಖ್ಯಮಂತ್ರಿಗಳ ಹನಿಟ್ರ್ಯಾಪ್ ಮಾಡಿ ಪೆನ್‌ಡ್ರೈವ್ ಅನ್ನು ಇಟ್ಟುಕೊಂಡಿದ್ದಾರೆ. ಆದರೆ, ಹನಿಟ್ರ್ಯಾಪ್ ಮಾಡುವುದಕ್ಕೆ ನನ್ನನ್ನು ಬಳಕೆ ಮಾಡಿಕೊಂಡಿಲ್ಲ, ಬೇರೆ ಮಹಿಳೆಯರನ್ನು ಬಳಸಿಕೊಂಡಿದ್ದಾರೆ.
ಇದರಲ್ಲಿ ಯಾವುದೇ ಸಿನಿಮಾ ನಟಿಯರು ಇಲ್ಲ. ಇನ್ನು ಹನಿಟ್ರ್ಯಾಪ್‌ಗೆ ಬಳಸಿಕೊಳ್ಳಲಾದ ಸುಮಾರು ಐದಾರು ಸಂತ್ರಸ್ತ ಮಹಿಳೆಯರು ಹೆದರಿಕೊಂಡು ಸುಮ್ಮನಾಗಿದ್ದಾರೆ. ಅವರು ಕೂಡ ನನ್ನಂತೆಯೇ ಹೊರಗೆ ಬಂದರೆ ಎಲ್ಲ ಸತ್ಯಗಳೂ ಹೊರಗೆ ಬರಲಿವೆ ಎಂದು ಹೇಳಿದರು. ಅನೇಕ ಮಹಿಳೆಯರನ್ನು ಶಾಸಕ ಮುನಿರತ್ನ ಮಾಜಿ ಮುಖ್ಯಮಂತ್ರಿಗಳು ಹಾಗೂ ಹಲವು ರಾಜಕೀಯ ನಾಯಕರ ಮೇಲೆ ಹನಿಟ್ರ್ಯಾಪ್ ಮಾಡಲು ಬಳಕೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಶಾಸಕ ಮುನಿರತ್ನ ದೇವಸ್ಥಾನ ಸ್ವರೂಪಿ ವಿಕಾಸ ಸೌಧದಲ್ಲೂ, ನನ್ನ ಮೇಲೆ ಅತ್ಯಾಚಾರ ಮಾಡಿದ ಎಂದ ಸಂತ್ರಸ್ತೆ!
6 ಮಂದಿಗೆ ಏಡ್ಸ್ ರೋಗಿಗಳಿಂದ ಹನಿಟ್ರ್ಯಾಪ್: ರಾಜ್ಯದಲ್ಲಿ ತುಂಬಾ ಮಹಿಳೆಯರನ್ನು ಬಳಸಿಕೊಂಡು ಶಾಸಕ ಮುನಿರತ್ನ ಹನಿಟ್ರ್ಯಾಪ್ ಮಾಡಿದ್ದಾರೆ. ಸರ್ಕಾರದಿಂದ ನನಗೆ ಭದ್ರತೆಯನ್ನು ಕೊಟ್ಟರೆ ಉಳಿದ ಮಹಿಳೆಯರೂ ಕೂಡ ಹೊರಗೆ ಬಂದು ತಮ್ಮ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಹೇಳಲಿದ್ದಾರೆ. ಇನ್ನು ರಾಜ್ಯದಲ್ಲಿ ಬರೋಬ್ಬರಿ 6 ಮಂದಿಗೆ ಏಡ್ಸ್ ರೋಗವುಳ್ಳ ಮಹಿಳೆಯರನ್ನು ಬಳಸಿಕೊಂಡು ಹನಿಟ್ರ್ಯಾಪ್ ಮಾಡಿಸಿದ್ದಾರೆ. ಅದರಲ್ಲಿ ಶಾಸಕರು, ಪೊಲೀಸ್ ಅಧಿಕಾರಿಗಳು, ಸರ್ಕಾರದ ಉನ್ನತ ಅಧಿಕಾರಿಗಳು ಕೂಡ ಇದ್ದಾರೆ. ಇನ್ನು ಸುಮಾರು 20 ರಿಂದ 30 ರಾಜಕೀಯ ಮುಖಂಡರನ್ನು ಹನಿಟ್ರ್ಯಾಪ್ ಮಾಡಿ ಪೆನ್‌ಡ್ರೈವ್ ಇಟ್ಟುಕೊಂಡಿದ್ದಾರೆ ಎಂದು ಸಂತ್ರಸ್ತೆ ತಿಳಿಸಿದ್ದಾರೆ.
ಎಸ್‌ಐಟಿ ಮಾಹಿತಿ ಕೇಳಿದರೆ ಮಾಜಿ ಸಿಎಂ ವಿಡಿಯೋ ಕೊಡ್ತೇನೆ: ರಾಜ್ಯದಲ್ಲಿ ಶಾಸಕ ಮುನಿರತ್ನ ಅವರಿಂದ ಅತ್ಯಾಚಾರಕ್ಕೆ ಒಳಗಾಗಿದ್ದಾಗಿ ದೂರು ಕೊಟ್ಟಿರುವ ಸಂತ್ರಸ್ತ ಮಹಿಳೆಯು, ಈ ಕೇಸಿನ ತನಿಖೆಗೆ ಸರ್ಕಾರ ನೇಮಕ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಿದೆ. ಆದರೆ, ಎಸ್ಐಟಿ ಅವರು ಯಾರಾರ ಮೇಲೆ ಹನಿಟ್ರ್ಯಾಪ್ ಆಗಿದೆ ಎಂಬ ಮಾಹಿತಿ ಕೇಳಿಲ್ಲ. ಸರ್ಕಾರದಿಂದ ಭದ್ರತೆ ಸಿಕ್ಕಲ್ಲಿ ಹಾಗೂ ಎಸ್‌ಐಟಿಯವರು ಮಾಜಿ ಸಿಎಂಗಳ ಹನಿಟ್ರ್ಯಾಪ್ ವಿಡಿಯೋ ಕೇಳದರೆ ಅದನ್ನು ಅವರ ಮುಂದಿಡುತ್ತೇನೆ ಎಂದು ಹೇಳಿದರು. ಮುಂದುವರೆದು, ಹನಿಟ್ರ್ಯಾಪ್‌ಗೆ ಬಳಸಲಾದ ಮೊಬೈಲ್‌ಗಳನ್ನು ಹಾಗೂ ಕ್ಯಾಮೆರಾಗಳನ್ನು ಅವರ ಸೋದರ ಸಂಬಂಧಿಯೇ ಹ್ಯಾಂಡಲ್ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸಚಿವರ ಕಚೇರಿ, ಸರ್ಕಾರಿ ಕಾರು, ಜೆಪಿ ಪಾರ್ಕ್‌ನ ಗೋಡೌನ್‌ನಲ್ಲೂ ಮುನಿರತ್ನ ಅತ್ಯಾಚಾರ: ಸಂತ್ರಸ್ಥೆಯ ಹೇಳಿಕೆ
ಮುನಿರತ್ನ ಜಾಮೀನು ಅರ್ಜಿ ತೀರ್ಪು ಅ.15ಕ್ಕೆ: ಬೆಂಗಳೂರು: ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಮುನಿರತ್ನ ಸಲ್ಲಿಸಿದ ಜಾಮೀನು ಅರ್ಜಿಯ ತೀರ್ಪನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇದೇ ತಿಂಗಳು 15ಕ್ಕೆ ಕಾಯ್ದಿರಿಸಿದೆ. ಮಂಗಳವಾರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ವಾದ-ಪ್ರತಿವಾದ ಆಲಿಸಿತು. ಬಳಿಕ ಜಾಮೀನು ಅರ್ಜಿಯ ತೀರ್ಪನ್ನು ಕಾಯ್ದಿರಿಸಿ ಅ.15ಕ್ಕೆ ಮುಂದೂಡಿಕೆ ಮಾಡಿತು. ಸರ್ಕಾರಿ ಅಭಿಯೋಜಕರು ವಾದ ಮಂಡಿಸಿ, ಆರೋಪಿ ಸ್ಥಾನದಲ್ಲಿರುವ ವ್ಯಕ್ತಿಯು ಪ್ರಭಾವಶಾಲಿಯಾಗಿದ್ದು, ಸಾಕ್ಷಿ ನಾಶ ಮಾಡುವ ಸಾಧ್ಯತೆ ಇದೆ. ಪ್ರಕರಣ ಗಂಭೀರ ಸ್ವರೂಪವಾಗಿರುವುದರಿಂದ ಜಾಮೀನು ಮಂಜೂರು ಮಾಡಬಾರದು ಎಂದು ಹೇಳಿದರು. ಇದೇ ವೇಳೆ ಮುನಿರತ್ನ ರಕ್ತ ಮಾದರಿ ಪರೀಕ್ಷೆಯ ಅನುಮತಿ ವಿಚಾರವನ್ನು ಗುರುವಾರಕ್ಕೆ ಮುಂದೂಡಿಕೆ ಮಾಡಲಾಗಿದೆ.