ರೈತನ ಜಮೀನಿನಲ್ಲಿ ಬೆಳೆದಿದ್ದ 400ಕ್ಕೂ ಅಧಿಕ ಅಡಿಕೆ ಸಸಿಗಳು ದುಷ್ಮರ್ಮಿಗಳು ಕಿತ್ತು ಹಾಕಿರುವ ಘಟನೆ ತುಮಕೂರಿನ ಶಿರಾ ತಾಲೂಕಿನ ಯರಗಕಟ್ಟೆ ಗ್ರಾಮದಲ್ಲಿ ನಡೆದಿದೆ.

ತುಮಕೂರು (ಜು.4) ರೈತನ ಜಮೀನಿನಲ್ಲಿ ಬೆಳೆದಿದ್ದ 400ಕ್ಕೂ ಅಧಿಕ ಅಡಿಕೆ ಸಸಿಗಳು ದುಷ್ಮರ್ಮಿಗಳು ಕಿತ್ತು ಹಾಕಿರುವ ಘಟನೆ ತುಮಕೂರಿನ ಶಿರಾ ತಾಲೂಕಿನ ಯರಗಕಟ್ಟೆ ಗ್ರಾಮದಲ್ಲಿ ನಡೆದಿದೆ.

ಗಿಣ್ಣಪ್ಪನಹಟ್ಟಿ ಗ್ರಾಮದ ರೈತ ಹನುಮಂತಯ್ಯ ಸೇರಿದ ಅಡಿಕೆ ಮರಗಳು. 1100 ಕ್ಕೂ ಹೆಚ್ಚು ಅಡಿಕೆ ಸಸಿಗಳನ್ನ ಎರಡು ವರ್ಷಗಳ ಹಿಂದೆ ನೆಟ್ಟಿದ್ದ ರೈತ. ಈ ಪೈಕಿ 400 ಕ್ಕೂ ಹೆಚ್ಚು ಅಡಿಕೆ ಸಸಿಗಳನ್ನ ಕಡಿದು ಹಾಕಿರುವ ದುಷ್ಕರ್ಮಿಗಳು. ಶ್ರಮವಹಿಸಿ ಬೆಳೆದಿದ್ದ ಅಡಿಕೆ ಸಸಿಗಳು ಕತ್ತರಿಸಿರುವುದು ನೋಡಿ ಕಂಗಾಲಾಗಿರುವ ರೈತ ಹನಮಂತಯ್ಯ. 

ಸ್ಥಳಕ್ಕೆ ಬುಕ್ಕಾಪಟ್ಟಣ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುಷ್ಕರ್ಮಿಗಳ ಪತ್ತೆಗೆ ತಂಡ ರಚನೆ ಮಾಡಿ ಹುಡುಕಾಟ ನಡೆಸಿರುವ ಪೊಲೀಸರು. ಬುಕ್ಕಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಕೋತಿಗಳ ನಿರಂತರ ಹಾವಳಿ : ಬೆಳೆ ರಕ್ಷಣೆಗೆ ಕರಡಿ ವೇಷ ತೊಟ್ಟ ರೈತರು

ಚಿನ್ನದ ಸರ ಕಸಿದು ದುಷ್ಕರ್ಮಿಗಳು ಪರಾರಿ

ಮದ್ದೂರು: ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಪಾದಾಚಾರಿ ಮಹಿಳೆ ಕತ್ತಿನಲ್ಲಿದ್ದ ಚಿನ್ನದ ಸರ ಕಸಿದು ಪರಾರಿಯಾಗಿರುವ ಘಟನೆ ತಾಲೂಕಿನ ಸಾದೊಳಲು - ಬಿ. ಗೌಡಗೆರೆ ಮಾರ್ಗದಲ್ಲಿ ನಡೆದಿದೆ. 

ಸಾದೊಳಲು ಗ್ರಾಮದ ಶಿವಲಿಂಗಯ್ಯರ ಪತ್ನಿ ಜಯಲಕ್ಷ್ಮಮ್ಮ ಚಿನ್ನದ ಮಾಂಗಲ್ಯ ಸರ ಕಳೆದುಕೊಂಡವರು. ಭಾನುವಾರ ಸಂಜೆ ಸ್ವಗ್ರಾಮದಿಂದ ಕೆಲಸದ ನಿಮಿತ್ತ ಬಿ.ಗೌಡಗೆರೆಗೆ ರಸ್ತೆಯಲ್ಲಿ ಜಯಲಕ್ಷ್ಮಮ್ಮ ನಡೆದುಕೊಂಡು ಹೋಗುತ್ತಿದ್ದಾಗ ಇಬ್ಬರು ದುಷ್ಕರ್ಮಿಗಳು ಬೈಕಿನಲ್ಲಿ ಹಿಂಬಾಲಿಸಿ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರವನ್ನು ಕಸಿದಿದ್ದಾರೆ. 

Chitradurga rains: ಚಳ್ಳಕೆರೆಯಲ್ಲಿ ಭಾರೀ ಮಳೆಗೆ ಬೆಳೆ ನಾಶ: ಲಕ್ಷಾಂತರ ರು. ನಷ್ಟ!

ಮಹಿಳೆ ತಕ್ಷಣ ಕೂಗಿಕೊಂಡಿದ್ದಾರೆ. ಆದರೆ, ಸುತ್ತಮುತ್ತಲ ಜಮೀನುಗಳಲ್ಲಿ ಯಾರು ಇರದ ಹಿನ್ನೆಲೆಯಲ್ಲಿ ರಕ್ಷಣೆ ಸಾಧ್ಯವಾಗಲಿಲ್ಲ ಎಂದು ಮಹಿಳೆ ಅಳಲು ತೋಡಿಕೊಂಡರು. ಈ ಸಂಬಂಧ ಮದ್ದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.