ಅನಿಲ್ ಶ್ರೀರಾಮ ಸೇನೆಯ ಸಕ್ರಿಯ ಕಾರ್ಯಕರ್ತನಾಗಿದ್ದು, ಈತನನ್ನೇ ಟಾರ್ಗೆಟ್ ಮಾಡಿ ಹಲ್ಲೆ ನಡೆದಿರುವ ಬಗ್ಗೆ ಕುಟುಂಬಸ್ಥರು ಆರೋಪಿಸ್ತಿದ್ದಾರೆ. ಇನ್ನು ಧಾರವಾಡ ಎಸ್‌ಡಿಎಂ ಭೇಟಿ ನೀಡಿ, ಅನಿಲ್‌ನ ಆರೋಗ್ಯ ವಿಚಾರಿಸಿದ ಆಸ್ಪತ್ರೆಗೆ ಶ್ರೀರಾಮಸೇನೆ ಮುಖಂಡ ಪ್ರಮೋದ್‌ ಮುತಾಲಿಕ್ 

ಗದಗ(ಡಿ.27):  ಜಗಳ ಬಿಡಿಸಲು ಬಂದ ಯುವಕನ ಕುತ್ತಿಗೆಗೆ ಸ್ಕ್ರೂಡ್ರೈವರ್ ಚುಚ್ಚಿ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಗದಗ ನಗರದ ಜುಮ್ಮಾ ಮಸೀದಿ ಬಳಿ ನಿನ್ನೆ(ಗುರುವಾರ) ಸಂಜೆ ನಡೆದಿದೆ.

ಘಟನೆಯಲ್ಲಿ ಅನಿಲ್ ಮುಳ್ಳಾಳ್ (27) ಸೇರಿದಂತೆ ಆರು ಯುವಕರಿಗೆ ಗಾಯವಾಗಿದ್ದು, ಸ್ಕ್ರೂಡ್ರೈವರ್ ನಿಂದ‌ ಇರಿತಕ್ಕೊಳಗಾಗಿರುವ ಅನಿಲ್ ನನ್ನ ಧಾರವಾಡ ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನುಳಿದ ಐವರಿಗೆ ಗದಗ ಜಿಮ್ಸ್ ಆಸ್ಪತ್ರೆಯಲ್ಲೇ ಚಿಕಿತ್ಸೆ‌ ನೀಡಲಾಗ್ತಿದೆ. ಘಟನೆಯಲ್ಲಿ ಅನಿಲ್, ಚೇತನ್ ಮುಳ್ಳಾಳ, ವಿನಾಯಕ್ ಮುಳ್ಳಾಳ, ಅಭಿಷೇಕ್ ಹರ್ಲಾಪುರ, ಕಿರಣ್ ಸಾಲಿಮಠ, ಶಾರುಖ್ ಮುಲ್ಲಾ ಅನ್ನೋ ಯುವಕರೆಲ್ಲರಿಗೂ ಗಾಯಗಳಾಗಿವೆ. 

ಕಾರವಾರ: 10,000 ಹಣಕ್ಕೆ ವೃದ್ಧೆಯ ಕತ್ತು ಹಿಸುಕಿ ಹತ್ಯೆಗೈದ ದುಷ್ಕರ್ಮಿಗಳು

ಆರು ದಿನದ ಹಿಂದೆ ನಡೆದಿದ್ದ ಗಲಾಟೆ ವಿಷಯವಾಗಿ ನಡೀತು ಸ್ಕ್ರೂಡ್ರೈವರ್ ಇರಿತ..!

ಶುಕ್ರವಾರ ನಡೆದಿದ್ದ ಗಲಾಟೆ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಹಲ್ಲೆ ನಡೆದಿದ್ಯಾ ಅನ್ನೋ ಚರ್ಚೆ ಕೇಳಿ ಬರ್ತಿದೆ.. ಅನಿಲ್ ಸಹೋದರ ಚೇತನ್ ಮುಳ್ಳಾಳ್ ಬೈಕ್ ಗೆ ಏರ್ ಫಿಲ್ ಮಾಡಿಸಲು ಶುಕ್ರವಾರ 20 ನೇ ತಾರೀಕು ನಗರದ ಭಗತ್ ಸಿಂಗ್ ವೃತ್ತದ ಬಳಿಯ ಪಂಕ್ಚರ್ ಅಂಗಡಿಗೆ ಹೋಗಿದ್ದ. ಅಲ್ಲಿ ಹಣಕೊಡುವ ವಿಷಯಕ್ಕೆ ಪಂಕ್ಚರ್ ಅಂಗಡಿಯ ಹುಡುಗರ ಜೊತೆ ಗಲಾಟೆ ನಡೆದಿತ್ತು. ಗಲಾಟೆ ಮಾಡಿಕೊಂಡು ಸುಮ್ಮನಾಗಿದ್ದ ಚೇತನ್. ಆರು ದಿನದ ನಂತರ 26 ನೇ ತಾರೀಕು ಗುರುವಾರ ಜುಮ್ಮಾ ಮಸೀದಿ ಪಂಕ್ಚರ್ ಅಂಗಡಿ ಹುಡುಗರನ್ನ ನೋಡಿದ್ದ. ಹುಡುಗರನ್ನ ತೋರಿಸಿ ಇವನೇ ಗಲಾಟೆ ಮಾಡಿದ್ದ ಅಂತಾ ಅಣ್ಣ ಅನಿಲ್ ಗೆ ಚೇತನ್ ತೋರಿಸಿದ್ದ. ಹುಡುಗರ ಬಳಿ ತೆರಳಿದ್ದ ಅನಿಲ್ ಶುಕ್ರವಾರ ಯಾಕೆ ಗಲಾಟೆ ಮಾಡಿದ್ದು ಅಂತಾ ಪ್ರಶ್ನೆ ಮಾಡಿದ್ರು. 

ಯಾದಗಿರಿ: ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಕೊಲೆ

ಇಷ್ಟಕ್ಕೆ ಮಾತಿಗೆ ಮಾತು ಬೆಳೆದು ಚೇತನ್ ಹಾಗೂ ಸ್ಥಳಕ್ಕೆ ಬಂದಿದ್ದ ವಿನಾಯಕ್ ಮೇಲೆ ಹಲ್ಲೆ ಮಾಡ್ಲಾಗಿತ್ತು.. ಮಾರಾಮಾರಿಯಲ್ಲಿ ಕೆಳಗೆ ಬಿದ್ದಿದ್ದ ವಿನಾಯಕ್ ನನ್ನ ರಕ್ಷಿಸಲು ಬಂದ ಅನಿಲ್ ಕುತ್ತಿಗೆಗೆ ಸ್ಕ್ರೂ ಡ್ರೈವರ್ ನಿಂದ ಅಪರಿಚಿತರು ಚುಚ್ಚಿದ್ರು. ಉನ್ಮಾದದಲ್ಲಿದ್ದ ಗುಂಪು ಸ್ಥಳದಲ್ಲಿದ್ದ ಐದು ಜನರಿಗೂ ಚಾಕು ಇರಿದಿದೆ.. 20 ರಿಂದ 30 ಯುವಕರ ಗ್ಯಾಂಗ್ ನಿಂದ ಗಲಾಟೆ ಮಾಡಿದೆ ಎನ್ನಲಾಗ್ತಿದೆ. 

ಅನಿಲ್ ಶ್ರೀರಾಮ ಸೇನೆಯ ಸಕ್ರಿಯ ಕಾರ್ಯಕರ್ತನಾಗಿದ್ದು, ಈತನನ್ನೇ ಟಾರ್ಗೆಟ್ ಮಾಡಿ ಹಲ್ಲೆ ನಡೆದಿರುವ ಬಗ್ಗೆ ಕುಟುಂಬಸ್ಥರು ಆರೋಪಿಸ್ತಿದ್ದಾರೆ. ಇನ್ನು ಧಾರವಾಡ ಎಸ್ ಡಿಎಂ ಆಸ್ಪತ್ರೆಗೆ ಶ್ರೀರಾಮಸೇನೆ ಮುಖಂಡ ಪ್ರಮೋದ ಮುತಾಲಿಕ್ ಭೇಟಿ ನೀಡಿ, ಅನಿಲ್ ನ ಆರೋಗ್ಯದ ಕುರಿತು ವಿಚಾರಿಸಿದ್ದಾರೆ. ಗದಗ ಶಹರ್‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಹೆಚ್ಚಿನ‌ ತನಿಖೆ ಕೈಗೊಂಡಿದ್ದಾರೆ.