ಅಬ್ಬಬ್ಬಾ..! ಕೇವಲ 6 ತಿಂಗಳಲ್ಲಿ 21 ಕೋಟಿ ಗಳಿಸಿದ ತರಕಾರಿ ವ್ಯಾಪಾರಿ!

27 ವರ್ಷದ ತರಕಾರಿ ವ್ಯಾಪಾರಿಯೊಬ್ಬರು ಮನೆಯಿಂದ ಕೆಲಸ ಮಾಡುವುದಾಗಿ ಜನರನ್ನು ನಂಬಿಸಿ 21 ಕೋಟಿ ರೂಪಾಯಿ ಗಳಿಸಿದ್ದಾರೆ. 10 ರಾಜ್ಯಗಳಲ್ಲಿ ವರದಿಯಾದ 37 ವಂಚನೆ ಪ್ರಕರಣಗಳಲ್ಲಿ ತರಕಾರಿ ವ್ಯಾಪಾ ರಿಷಬ್ ಶರ್ಮಾ ನೇರ ಕೈವಾಡವಿದೆ ಎಂದು ತಿಳಿದುಬಂದಿದೆ.

meet vegetable seller who earned rs 21 crore on just 6 months by crypto fraud investment scam ash

ನವದೆಹಲಿ (ನವೆಂಬರ್ 5, 2023):  27 ವರ್ಷದ ತರಕಾರಿ ವ್ಯಾಪಾರಿಯೊಬ್ಬರು ಕೇವಲ 6 ತಿಂಗಳಲ್ಲಿ 21 ಕೋಟಿ ರೂ. ಗಳಿಸಿದ್ದಾರೆ. ಅದು ಹೇಗಪ್ಪಾ ಯಾವುದೋ ಬ್ಯಾಂಕ್‌ ದರೋಡೆ ಇಲ್ಲ ಮನೆ ಕಳ್ಳತನ ಮಾಡಿರ್ಬೇಕು ಅಂತೀರಾ..?  ಮುಂದೆ ಓದಿ..

27 ವರ್ಷದ ತರಕಾರಿ ವ್ಯಾಪಾರಿಯೊಬ್ಬರು ಮನೆಯಿಂದ ಕೆಲಸ ಮಾಡುವುದಾಗಿ ಜನರನ್ನು ನಂಬಿಸಿ 21 ಕೋಟಿ ರೂಪಾಯಿ ಗಳಿಸಿದ್ದಾರೆ. ಸದ್ಯ ಇವರು ಪೊಲೀಸರ ಅತಿಥಿಯಾಗಿದ್ದು, ಈ ನಂತರವೇ ಇವರ ರೋಚಕ ಕಹಾನಿ ಬಯಲಿಗೆ ಬಂದಿದೆ. 

ಇದನ್ನು ಓದಿ: ಎಕ್ಸಾಂ ಬರೆಯಲು ಹೋಗಿ ಶಾಲೆಯಲ್ಲೇ ಹೃದಯ ಸ್ತಂಭನದಿಂದ ಮೃತಪಟ್ಟ 15 ವರ್ಷದ ಬಾಲಕಿ!

10 ರಾಜ್ಯಗಳಲ್ಲಿ ವರದಿಯಾದ 37 ವಂಚನೆ ಪ್ರಕರಣಗಳಲ್ಲಿ ತರಕಾರಿ ವ್ಯಾಪಾ ರಿಷಬ್ ಶರ್ಮಾ ನೇರ ಕೈವಾಡವಿದೆ ಮತ್ತು ಹೆಚ್ಚುವರಿ 855 ಪ್ರಕರಣಗಳಲ್ಲಿಯೂ ಪಾತ್ರವನ್ನು ಹೊಂದಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ.

ಡೆಹ್ರಾಡೂನ್‌ನ ಉದ್ಯಮಿಯೊಬ್ಬರು 20 ಲಕ್ಷ ರೂಪಾಯಿ ವಂಚನೆಗೆ ಒಳಗಾಗಿದ್ದು, ಈ ಸಂಬಂಧ ಅಕ್ಟೋಬರ್ 28 ರಂದು, ರಿಷಬ್ ಶರ್ಮಾ ರನ್ನು ಉತ್ತರಾಖಂಡ್ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಆರೋಪಿ ಕೆಲವು ವರ್ಷಗಳ ಹಿಂದೆ ಹರ್ಯಾಣದ ಫರಿದಾಬಾದ್‌ನಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು ಮಾರಾಟ ಮಾಡುತ್ತಿದ್ದ. ಬಹುಪಾಲು ಉದ್ಯಮಿಗಳಂತೆ, ಕೋವಿಡ್‌ - 19 ಸಾಂಕ್ರಾಮಿಕ ಸಮಯದಲ್ಲಿ ಅಪಾರ ನಷ್ಟವನ್ನು ಅನುಭವಿಸಿದ ನಂತರ ತಮ್ಮ ವ್ಯವಹಾರವನ್ನು ಕೊನೆಗೊಳಿಸಬೇಕಾಯಿತು. 

ಇದನ್ನೂ ಓದಿ: ಛತ್ತೀಸ್‌ಗಢ ಸಿಎಂ ಭೂಪೇಶ್‌ ಬಾಘೇಲ್‌ಗೂ ಮಹದೇವ ‘ಪ್ರಸಾದ’ ವಿತರಣೆ: ಬೆಟ್ಟಿಂಗ್ ಆ್ಯಪ್ ಪ್ರವರ್ತಕರಿಂದ 508 ಕೋಟಿ ಲಂಚ!

ಈ ವೇಳೆ, ತನ್ನ ಕುಟುಂಬವನ್ನು ಬೆಂಬಲಿಸುವ ಸಲುವಾಗಿ ಹಲವಾರು ವರ್ಕ್‌ ಫ್ರಂ ಹೋಮ್‌ ಜಾಬ್‌ ಒಪ್ಪಿಕೊಂಡಿದ್ದರು. "ಅದರ ನಂತರ, ಈಗಾಗಲೇ ಇಂಟರ್ನೆಟ್ ಹಗರಣಗಳನ್ನು ಪ್ಲ್ಯಾನ್‌ ಮಾಡ್ತಿದ್ದ ಸ್ನೇಹಿತನ ಜತೆ ಸೇರಿಕೊಂಡ. ಆಗ ರಿಷಬ್ ಶರ್ಮಾ ಕೇವಲ ಆರು ತಿಂಗಳಲ್ಲಿ 21 ಕೋಟಿ ರೂ. ಗಳಿಸಿದ್ದಾನೆ ಎಂದು ಉತ್ತರಾಖಂಡದ ಉನ್ನತ ಪೊಲೀಸ್ ಅಧಿಕಾರಿ ಅಂಕುಶ್ ಮಿಶ್ರಾ ಹೇಳಿದ್ದಾರೆ.

ಆರಂಭದಲ್ಲಿ, ರಿಷಬ್ ಶರ್ಮಾ ಪ್ರಸಿದ್ಧ ಹೋಟೆಲ್ ಮೂಲ ವೆಬ್‌ಸೈಟ್, marriot.com ಅನ್ನು ಹೋಲುವ "Marriot Bonvoy" (marriotwork.com) ಎಂಬ ನಕಲಿ ವೆಬ್‌ಸೈಟ್ ಅನ್ನು ಮಾಡಿದ್ದಾನೆ. ನಂತರ, ಆಗಸ್ಟ್ 4 ರಂದು, ಉದ್ಯಮಿಯೊಬ್ಬರು ವಾಟ್ಸಾಪ್ ಸಂದೇಶವನ್ನು ಸ್ವೀಕರಿಸಿದ್ದು, ಇದು ಅರೆಕಾಲಿಕ ಆಧಾರದ ಮೇಲೆ "ಮ್ಯಾರಿಯಟ್ ಬೊನ್ವಾಯ್" ಹೋಟೆಲ್‌ ಬಗ್ಗೆ ವಿಮರ್ಶೆಗಳನ್ನು ಬರೆಯಲು ಮನೆಯಿಂದ ಕೆಲಸದ ಅವಕಾಶವನ್ನು ನೀಡುತ್ತದೆ ಎಂದಿತ್ತು.

ಬಳಿಕ, ಅದು ಮೋಸವಲ್ಲ ಎಂದುಕೊಂಡು ಆರಂಭದಲ್ಲಿ ಎರಡು ಬಾರಿ 10,000 ರೂ. ಹೂಡಿಕೆ ಮಾಡಿದೆ. ಆದರೆ, ಹೂಡಿಕೆಯು ಶೀಘ್ರದಲ್ಲೇ ಅಗಾಧವಾಗಿ ಬೆಳೆಯಲು ಪ್ರಾರಂಭಿಸಿದ ಹಿನ್ನೆಲೆ ಕಾನೂನುಬದ್ಧತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿತು. ಅಲ್ಲದೆ, ನಾನು ರಿಟರ್ನ್ಸ್ ಕೇಳಿದಾಗಲೆಲ್ಲಾ ಗಳಿಕೆಯು ಒಂದು ಕೋಟಿ ತಲುಪಬಹುದು ಎಂದು ಹೇಳುವ ಮೂಲಕ ಹೆಚ್ಚು ಹೂಡಿಕೆ ಮಾಡುವಂತೆ ರಿಷಭ್‌ ಶರ್ಮಾ ಹಾಗೂ ಸೋನಿಯಾ ಎಂಬುವರು ನನಗೆ ಮನವರಿಕೆ ಮಾಡಿದ್ದರು. ಆದರೆ, ಒತ್ತಾಯಿಸಿದ ಬಳಿಕ ಅವರು ಫೋನ್‌ ಸ್ವಿಚ್‌ ಆಫ್‌ ಮಾಡಿದರು ಮತ್ತು ಸ್ವಲ್ಪ ಸಮಯದ ನಂತರ ನನ್ನ ಕರೆಗಳು ಮತ್ತು ಸಂದೇಶಗಳಿಗೆ ಉತ್ತರಿಸುವುದನ್ನು ನಿಲ್ಲಿಸಿದರು. ಆ ಸಮಯದಲ್ಲಿ, ನಾನು 20 ಲಕ್ಷ ರೂ. ಕಳೆದುಕೊಂಡಿದ್ದೇನೆ ಎಂದು ಉದ್ಯಮಿ ಹೇಳಿದ್ದಾರೆ.

ಅವರು ಜನರನ್ನು ಸಂಪರ್ಕಿಸುತ್ತಾರೆ, ಸಂದೇಶಗಳನ್ನು ಕಳುಹಿಸುತ್ತಾರೆ ಮತ್ತು ವಂಚನೆಗೆ ಬೀಳುವಂತೆ ಪ್ರಯತ್ನಿಸುತ್ತಾರೆ ಎಂದು ಅಂಕುಶ್ ಮಿಶ್ರಾ ತಿಳಿಸಿದ್ದಾರೆ. ಹಾಗೆ, ಹಣವನ್ನು ಚೀನಾಕ್ಕೆ ಕ್ರಿಪ್ಟೋ ರೂಪದಲ್ಲಿ ಕಳುಹಿಸಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಅಂತಾರಾಷ್ಟ್ರೀಯ ಗ್ಯಾಂಗ್‌ ಏಜೆಂಟ್‌ ಆಗಿದ್ದರು. ಸಾಮಾನ್ಯವಾಗಿ, ಈ ಏಜೆಂಟ್‌ಗಳಿಗೆ ನಿಜವಾದ ಮಾಸ್ಟರ್‌ಮೈಂಡ್ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ ಎಂದು ಸಹ ಪೊಲೀಸ್‌ ಅಧಿಕಾರಿ ಮಾಹಿತಿ ನೀಡಿದ್ದಾರೆ. 

Latest Videos
Follow Us:
Download App:
  • android
  • ios