Asianet Suvarna News Asianet Suvarna News

ಮದರಸಾ ವಿದ್ಯಾರ್ಥಿನಿಯರಿಗೆ ಅಮಲು ಆಹಾರ ನೀಡಿ ರೇಪ್, ಮೌಲ್ವಿ ಕಾಮಕೇಳಿ ವಿಡಿಯೋ ರೆಕಾರ್ಡ್!

ಮದರಸಾಗೆ ಬರುವ ಬಾಲಕಿಯರನ್ನು ಟಾರ್ಗೆಟ್ ಮಾಡುವ ಈ ಮೌಲ್ವಿ, ಆಹಾರದಲ್ಲಿ ಅಮಲು ಔಷದಿ ನೀಡಿ ರೇಪ್ ಮಾಡುತ್ತಿದ್ದ. ಇದನ್ನು ವಿಡಿಯೋ ರೆಕಾರ್ಡ್ ಮಾಡಿ ವಿಕೃತ ಆನಂದ ಪಡುತ್ತಿದ್ದ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪೋಷಕರು ರೊಚ್ಚಿಗೆದ್ದಿದ್ದಾರೆ. ಇತ್ತ ಮೌಲ್ವಿ ನಾಪತ್ತೆಯಾಗಿದ್ದಾನೆ

Maulana rapes madrasa female student after giving Intoxicating Food record video in Uttar Pradesh ckm
Author
First Published Jun 29, 2023, 6:30 PM IST

ಲಖನೌ(ಜೂ.29): ಮಹಿಳೆ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಸಾಲಿಗೆ ಮತ್ತೊಂದು ಭೀಕರ ಘಟನೆ ಸೇರಿಕೊಂಡಿದೆ. ಮದರಸಾದಲ್ಲಿನ ವಿದ್ಯಾರ್ಥಿನಿಯರಿಗೆ ಅಮಲಿನ ಆಹಾರ ನೀಡಿ ಮೌಲ್ವಿಯೊಬ್ಬ ರೇಪ್ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಅತ್ಯಾಚಾರದ ವಿಡಿಯೋವನ್ನು ರೆಕಾರ್ಡ್ ಮಾಡಿ ವಿಕೃತ ಆನಂದ ಪಡುತ್ತಿದ್ದ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಮೌಲ್ವಿ ನಾಪತ್ತೆಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.  

ಪ್ರತಿಷ್ಠಿತ ಮದರಸಾದಲ್ಲಿ ವಿದ್ಯಾರ್ಥಿನಿಯರನ್ನು ಟಾರ್ಗೆಡ್ ಮಾಡುತ್ತಿದ್ದ ಮೌಲ್ವಿ, ಮಧ್ಯಾಹ್ನ ಆಹಾರದಲ್ಲಿ ಅಮಲೇರಿಸುವ ಔಷದಿ ಹಾಕಿ ನೀಡುತ್ತಿದ್ದ. ಪ್ರತಿ ದಿನ ಒಂದೊಂದು ವಿದ್ಯಾರ್ಥಿನಿಯನ್ನು ಟಾರ್ಗೆಟ್ ಮಾಡಿ ಅಮಲೇರಿಸುವ ಆಹಾರ ನೀಡುತ್ತಿದ್ದ. ಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗುತ್ತಿದ್ದ. ಇಷ್ಟೇ ಅಲ್ಲ ಅತ್ಯಾಚಾರದ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ.

 

ರೇಪ್ ಆರೋಪಿ ಮನೆ ಮೇಲೆ ಬುಲ್ಡೋಜರ್, ಕ್ರಿಮಿನಲ್ ಎನ್‌ಕೌಂಟರ್; ಮತ್ತೆ ಸದ್ದು ಮಾಡಿದ ಯೋಗಿ!

ವಿದ್ಯಾರ್ಥಿನಿ ಅಮಲು ಇಳಿದಾಗ ತನ್ನ ಮೇಲೆ ಅತ್ಯಾಚಾರ ಆಗಿರುವ ತಿಳಿಯುತ್ತಿದ್ದಂತೆ ಮೌಲ್ವಿ, ವಿಡಿಯೋ ತೋರಿಸಿ ಬೆದರಿಸುತ್ತಿದ್ದ. ಈ ವಿಚಾರ ಬಾಯ್ಬಿಟ್ಟರೆ, ವಿಡಿಯೋ ಹರಿಬಿಡುವುದಾಗಿ ಬೆದರಿಸುತ್ತಿದ್ದ. ಹೀಗಾಗಿ ಹಲವು ವಿದ್ಯಾರ್ಥಿನಿಯರು ಮಾಹಿತಿಯನ್ನು ಗೌಪ್ಯವಾಗಿಟ್ಟಿದ್ದರು. ಮೌಲ್ವಿಯ ಕಾಮಕೇಳಿ ವಿಪರೀತವಾಗಿದೆ. ಈ ಕುರಿತು ಬಾಲಕಿಯೊಬ್ಬಳು ಪೋಷಕರಿಗೆ ಮಾಹಿತಿ ನೀಡಿದ್ದಾಳೆ. ರೊಚ್ಚಿಗೆದ್ದ ಪೋಷಕರು ಪೊಲೀಸ್ ಠಾಣೆಗೆ ಧಾವಿಸಿ ದೂರು ನೀಡಿದ್ದಾರೆ.

ದೂರು ದಾಖಲಿಸಿಕೊಂಡ ಪೊಲೀಸರು ಮದರಸಾ ಮೇಲೆ ದಾಳಿ ಮಾಡಿದ್ದಾರೆ. ಆದರೆ ಬಂಧನ ಸುಳಿವು ಪಡೆದ ಮೌಲ್ವಿ ನಾಪತ್ತೆಯಾಗಿದ್ದಾನೆ. ಇತ್ತ ಮದರಸಾದ ಹಲವರನ್ನು ಪೊಲೀಸರು ವಶಕ್ಕೆ ಪಡದು ವಿಚಾರಣೆ ನಡೆಸಿದ್ದಾರೆ. ಈ ಕೃತ್ಯದಲ್ಲಿ ಮೌಲ್ವಿ ಜೊತೆಗೆ ಇತರ ಕೆಲ ಸಿಬ್ಬಂದಿಗಳು ಪಾಲ್ಗೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಹಲವು ವರ್ಷಗಳಿಂದ ಮೌಲ್ವಿ ಈ ಮದರಸಾದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿ ಬಾಲಕಿಯರು ವಿದ್ಯಾಭ್ಯಾಸವನ್ನು ಮಾಡಿದ್ದಾರೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಮೌಲ್ವಿ ವಿರುದ್ಧ ಆಕ್ರೋಶ ಹೆಚ್ಚಾಗಿದೆ. ಮದರಾಸದಲ್ಲಿ ಹೆಣ್ಣಮಕ್ಕಳ ದಾಖಲಾತಿಗಾಗಿ ವಿಶೇಷ ಅಭಿಯಾನ ಆರಂಭಿಸಿದ್ದ ಇದೇ ಮೌಲ್ವಿ ಇದೀಗ ಅತ್ಯಾಚಾರ ಆರೋಪದಡಿ ನಾಪತ್ತೆಯಾಗಿದ್ದಾನೆ. ಇತ್ತ ಪೋಷಕರು ಮೌಲ್ವಿಯನ್ನು ಬಂಧಿಸಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ.

 

ಗದಗ: ಬಾಲಕಿಗೆ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಿದ್ದ ಆರೋಪಿಗೆ 25 ವರ್ಷ ಜೈಲು

ಅಪ್ತಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಶೀಘ್ರದಲ್ಲೇ ವೈದ್ಯಕೀಯ ಪರೀಕ್ಷಾ ವರದಿ ಕೈಸೇರಲಿದೆ. ಇತ್ತ ಮೌಲ್ವಿ ವಿರುದ್ಧ ಹಲವು ದೂರುಗಳು ದಾಖಲಾಗಿದೆ. ಹೀಗಾಗಿ ವಿಶೇಷ ಪ್ರಕರಣವಾಗಿ ಪರಿಗಣಿಸಿ ತನಿಖೆ ನಡೆಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.  ಇತ್ತ ಮದರಾಸ ಹೊರಗಡೆ ಪ್ರತಿಭಟನೆಗಳು ನಡೆದಿದೆ. ಈ ಘಟನೆಯಿಂದ ಪೋಷಕರು ಇದೀಗ ಈ ಮದರಾಸಗೆ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. 

Follow Us:
Download App:
  • android
  • ios