ಬೆಂಗಳೂರು((ಅ. 26) ಈ ಕಡೆ ವಧುನೂ ಇಲ್ಲ ಅಕೌಂಟ್ ನಲ್ಲಿ ದುಡ್ಡು ಇಲ್ಲ. ಎಲ್ಲವನ್ನೂ ಮಂಗಮಾಯ ಮಾಡಿಬಿಡ್ತಾರೆ ಎಚ್ಚರ. MATCHAPPY.IN ವೆಬ್ ಸೈಟ್ ನಲ್ಲಿ ಯುವಕರಿಗೆ ಭರ್ಜರಿ ಮೋಸ ನಡೆಯುತ್ತಿದೆ. ಪ್ರದೀಪ್ ಎಂಬ ವ್ಯಕ್ತಿಗೆ 62680 ರೂಪಾಯಿ ವಂಚನೆ ಮಾಡಲಾಗಿದೆ.

ಇದೇ ತಿಂಗಳ 14 ರಂದು ಪ್ರದೀಪ್ ಗೆ ಕರೆ ಮಾಡಲಾಗಿದೆ ಪ್ರದೀಪ್ ಗೆ ಹುಡುಗಿ ಹುಡುಕುವ ಸಂಬಂಧ ಕರೆ ಬಂದಿದೆ. ಕೆಲ ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ಪ್ರೊಫೈಲ್ ಹಾಕಿದ್ದಾರೆ. 9134620478 ನಂಬರ್  ಕರೆ ಮಾಡಿ ಆ ಕಡೆಯಿಂದ ಅನನ್ಯ ಎಂದು ಪರಿಚಯ ಮಾಡಿಕೊಂಡಿ ಮಾತನಾಡಲಾಗಿದೆ.

ಐದು ಮದುವೆಯಾದ ಆಂಟಿಗೆ ಆರನೇಯವ ಬೇಕಿತ್ತು

ನಾವು MATCHAPPY.IN ನಿಂದ ಕರೆ ಮಾಡುತ್ತಿದ್ದೇವೆ. ನಿಮ್ಮ ಪ್ರೊಫೈಲ್ ಕ್ರಿಯೇಟ್ ಮಾಡಿ ರಿಜಿಸ್ಟ್ರೇಷನ್ ಮಾಡಿಕೊಳ್ಳಿ ಎಂದಿದ್ದಾರೆ. ಮೊದಲೇ ಹುಡುಗಿ ಹುಡುಕುವದರಲ್ಲಿದ್ದ ಪ್ರದೀಪ್ ಓಕೆ ಮಾಡಿದ್ದಾರೆ. ವೆಬ್ ಸೈಟ್ ಲಿಂಕ್ ಕಳಿಸಿ ಇದಕ್ಕೆ ಲಾಗಿನ್ ಆಗಿ ಎಂದು ಕೇಳಿದ್ದಾರೆ. ಲಾಗಿನ್ ಆಗೋಕೆ ನೀವು 1080 ರೂಪಾಯಿ ಪೇ ಮಾಡಬೇಕು ಎಂದಿದ್ದಾರೆ. ಇದಕ್ಕೂ ಒಪ್ಪಿದ್ದ ಪ್ರದೀಪ್ 1080 ಪೇಮಾಡಿ ಲಾಗಿನ್ ಆಗಿದ್ದಾರೆ. 

ಇದಾದ ಬಳಕ ನಿಮಗೆ ಹುಡುಗಿ ನೋಡಲು ಆಪ್ಶನ್ ಇದೆ. ಒಂದು ವೇಳೆ ನಿಮಗೆ ಇಷ್ಟ ಆಗಿ ಹುಡುಗಿಗೂ ಇಷ್ಟವಾದ್ರೆ ನೀವು ಓಕೆ ಮಾಡಬಹುದು. ಮೊದಲು 22800 ರೂಪಾಯಿ ಪೇ ಮಾಡಿ ಅಂದಿದ್ದಾರೆ. ಇದಕ್ಕೆ ನಿರಾಕರಿಸಿದ್ದ ಪ್ರದೀಪ್, ಅಷ್ಟೂ ಹಣ ಪೇ ಮಾಡಲ್ಲ ಅಂದಿದ್ದಾರೆ. ಇದಾದ ಬಳಿಕ ನಿಮ್ಮ ಹಣ ರೀಫಂಡ್ ಆಗುತ್ತೆ ಎಂದಿದ್ದಾರೆ. ರೀಫಂಡ್ ಆಗುತ್ತೆ ಎಂದು ನಂಬಿದ್ದ ಪ್ರದೀಪ್ ಪ್ರೊಸೀಡ್ ಮಾಡಿ ಹಣ ಹಾಕಿದ್ದಾರೆ. ಇದಾದ ಬಳಿಕ ಹಂತ ಹಂತವಾಗಿ 62800 ಹಣ ಕಟ್ ಆಗಿದ್ದು. ಕಸ್ಟಮರ್ ಕೇರ್ ಗೆ ಕರೆ ಮಾಡಿದ್ರೆ ಹ ರೀಫಂಡ್ ಮಾಡೋಕೆ ಆಗಲ್ಲ .. ಸಿಸ್ಟಮ್ ನಲ್ಲಿದೆ ಅಂತೆಲ್ಲಾ ಸುಳ್ಳು ಹೇಳಿದ್ದಾರೆ..

ಸದ್ಯ ಮದುವೆ ಸಹವಾಸವೇ ಬೇಡ ಹಣ ರೀಫಂಡ್ ಮಾಡಿಸಿ ಅಂತ ಪ್ರದೀಪ್ ದೂರು ನೀಡಿದ್ದಾರೆ. ಆಗ್ನೇಯ ವಿಭಾಗದ ಸೈಬರ್ ಠಾಣೆಗೆ ಪ್ರದೀಪ್ ದೂರು ದಾಖಲಿಸಿದ್ದಾರೆ.