Crime News: ಪತಿ, ಅತ್ತೆಗೆ ಮತ್ತು ಬರುವ ಔಷಧಿ ಕುಡಿಸಿ, ಚಿನ್ನಾಭರಣ ಕದ್ದು ಪ್ರೇಮಿಯೊಂದಿಗೆ ಮಹಿಳೆ ಪರಾರಿ
ಪತಿ ಮತ್ತು ಅತ್ತೆಗೆ ಮಾದಕ ದ್ರವ್ಯ ನೀಡಿ ವಿವಾಹಿತ ಮಹಿಳೆ ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ವಿವಾಹಿತ ಮಹಿಳೆಯ ಪತಿ ಮತ್ತು ಆಕೆಯ ಸಂಬಂಧಿಕರು ಸುತ್ತಮುತ್ತಲ ಪ್ರದೇಶಗಳಲ್ಲಿ ಹುಡುಕಾಡಿದರೂ ವಿವಾಹಿತ ಮಹಿಳೆ ಪತ್ತೆಯಾಗಲಿಲ್ಲ.
ಉತ್ತರ ಪ್ರದೇಶ (ಜೂ. 27): ಪತಿ ಹಾಗೂ ಅತ್ತೆಗೆ ಮತ್ತು (Drugs) ಬರುವ ಔಷಧಿ ನೀಡಿ ವಿವಾಹಿತ ಮಹಿಳೆ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ವಿವಾಹಿತ ಮಹಿಳೆಯ ಪತಿ ಮತ್ತು ಆಕೆಯ ಸಂಬಂಧಿಕರು ಸುತ್ತಮುತ್ತಲ ಪ್ರದೇಶಗಳಲ್ಲಿ ಹುಡುಕಾಡಿದರೂ ವಿವಾಹಿತ ಮಹಿಳೆ ಪತ್ತೆಯಾಗಲಿಲ್ಲ. ಹೀಗಾಗಿ ಮಹಿಳೆಯ ತಾಯಿಯ ಮನೆಗೆ ಮಾಹಿತಿ ನೀಡಿದ ಬಳಿಕ ಎಸ್‌ಎಸ್‌ಪಿ ಕಚೇರಿಗೆ ಸಂಬಂಧಿಕರು ದೂರು ನೀಡಿದ್ದಾರೆ.
ಹಾಪುರ್‌ನ ಗರ್ಮುಕ್ತೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯಲ್ಲಿ ವಾಸಿಸುವ ವಿವಾಹಿತ ಮಹಿಳೆ 2020ರಲ್ಲಿ ಸರ್ಧಾನ ಪೊಲೀಸ್ ಠಾಣೆ ವ್ಯಾಪ್ತಿಯ ಮುಲ್ಹೆಡಾ ಗ್ರಾಮದ ಯುವಕನೊಂದಿಗೆ ವಿವಾಹವಾಗಿದ್ದರು. ದಂಪತಿಗೆ 11 ತಿಂಗಳ ಗಂಡು ಮಗುವಿದೆ. ಪತ್ನಿ ಆಗಾಗ್ಗೆ ಫೋನ್‌ನಲ್ಲಿ ಮಾತನಾಡುತ್ತಿದ್ದರು ಎಂದು ಮಹಿಳೆಯ ಪತಿ ಹೇಳಿದ್ದಾರೆ. ಅನೇಕ ಬಾರಿ ವಿವಾಹಿತ ಮಹಿಳೆಯನ್ನು ಫೋನ್‌ನಲ್ಲಿ ಮಾತನಾಡದಂತೆ ತಡೆವೊಡ್ಡಲಾಗಿತ್ತು. ಆದರೆ ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಪತಿಯನ್ನು ಸಿಲುಕಿಸುವುದಾಗಿ ಮಹಿಳೆ ಬೆದರಿಕೆ ಹಾಕಿದ್ದಾಳೆ. ಹೀಗಾಗಿ ಮಹಿಳೆಗೆ ಅಡ್ಡಿಪಡಿಸುವುದನ್ನು ನಿಲ್ಲಿಸಿದ್ದರು.́
ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಪತಿ, ಮೂವರು ಸ್ನೇಹಿತರಿಂದ ಸಾಮೂಹಿಕ ರೇಪ್
ಜೂನ್ 21 ರಂದು ವಿವಾಹಿತ ಮಹಿಳೆ ತನ್ನ ಪತಿ ಮತ್ತು ಅತ್ತೆಗೆ ಮಾದಕ ದ್ರವ್ಯ ನೀಡಿ ಪ್ರಜ್ಞಾಹೀನಗೊಳಿಸಿದ್ದಳು. ನಂತರ ಮನೆಯಲ್ಲಿಟ್ಟಿದ್ದ ಸಾವಿರಾರು ರೂಪಾಯಿ ನಗದು ಹಾಗೂ ಚಿನ್ನಾಭರಣಗಳೊಂದಿಗೆ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ವಿವಾಹಿತ ಮಹಿಳೆಯ ಪತಿ ಪೊಲೀಸ್ ಠಾಣೆ ಮಟ್ಟದಲ್ಲಿ ದೂರು ನೀಡಿದ್ದರು. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಪತಿ ಸೋಮವಾರ ಎಸ್‌ಎಸ್‌ಪಿ ಕಚೇರಿಗೆ ದೂರ ನೀಡಿದ್ದಾರೆ. ಸಾರ್ವಜನಿಕ ವಿಚಾರಣೆ ಅಧಿಕಾರಿ ಸಿಒ ಬ್ರಿಜೇಶ್ ಸಿಂಗ್ ಕುಟುಂಬಕ್ಕೆ ನ್ಯಾಯಯುತ ಕ್ರಮಕ್ಕೆ ಭರವಸೆ ನೀಡಿದ್ದಾರೆ ಎಂದು ಜಾಗರನ್ ವರದಿ ಮಾಡಿದೆ.