Asianet Suvarna News Asianet Suvarna News

Bengaluru: ಮಾನ್ಯತಾ ಟೆಕ್‌ ಪಾರ್ಕ್ ಪೊಲೀಸರ ಸುಲಿಗೆ ಪ್ರಕರಣ: ಇಬ್ಬರು ಪೊಲೀಸ್ ಸಿಬ್ಬಂದಿ ಸೇವೆಯಿಂದ ವಜಾ

ಮಾನ್ಯತಾ ಟೆಕ್‌ ಪಾರ್ಕ್ ಪೊಲೀಸರ ವಿರುದ್ಧ ಸುಲಿಗೆ ಆರೋಪ ಸಂಬಂಧ ಸಂಪಿಗೆಹಳ್ಳಿ ಠಾಣೆಯ ಇಬ್ಬರು ಹೊಯ್ಸಳ ಪೊಲೀಸ್ ಸಿಬ್ಬಂದಿಗಳನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ. 

Manyata Tech Park Police Extortion Case Two police Personnel Dismissed From Service gvd
Author
First Published Feb 3, 2023, 1:46 PM IST

ಬೆಂಗಳೂರು (ಫೆ.03): ಮಾನ್ಯತಾ ಟೆಕ್‌ ಪಾರ್ಕ್ ಪೊಲೀಸರ ವಿರುದ್ಧ ಸುಲಿಗೆ ಆರೋಪ ಸಂಬಂಧ ಸಂಪಿಗೆಹಳ್ಳಿ ಠಾಣೆಯ ಇಬ್ಬರು ಹೊಯ್ಸಳ ಪೊಲೀಸ್ ಸಿಬ್ಬಂದಿಗಳನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ. ಹೆಡ್‌ಕಾನ್ಸ್‌ಟೇಬಲ್ ರಾಜೇಶ್ ಹಾಗೂ ಕಾನ್ಸ್‌ಟೇಬಲ್ ನಾಗೇಶ್ ವಜಾಗೊಂಡಿದ್ದು, ಅವರ ಮೇಲೆ ಇನ್ನೂ ಒಂದಷ್ಟು ಪ್ರಕರಣಗಳು ನಡೆದಿದ್ದು, ಅದರಲ್ಲೂ ಕ್ರಮ ಕೈಗೊಳ್ಳುತ್ತೇವೆ ಎಂದು ಆಯುಕ್ತರು ಹೇಳಿದ್ದಾರೆ.

ಏನಿದು ಘಟನೆ?: ಕಾರ್ತಿಕ್‌ ಹಾಗೂ ಅವರ ಪತ್ನಿ ಡಿ.8ರಂದು ಮಾನ್ಯತಾ ಟೆಕ್‌ ಪಾರ್ಕ್ ಬಳಿ ತಮ್ಮ ಸ್ನೇಹಿತರ ಹುಟ್ಟುಹಬ್ಬದ ಪಾರ್ಟಿ ಮುಗಿಸಿಕೊಂಡು ತಡರಾತ್ರಿ 12.30ರ ಸುಮಾರಿಗೆ ನಡೆದುಕೊಂಡು ಮನೆಗೆ ಬರುತ್ತಿದ್ದರು. ಈ ವೇಳೆ ಹೊಯ್ಸಳ ಗಸ್ತು ಸಿಬ್ಬಂದಿ ರಾಜೇಶ್‌ ಮತ್ತು ನಾಗೇಶ್‌, ಕಾರ್ತಿಕ್‌ ದಂಪತಿಯನ್ನು ತಡೆದಿದ್ದಾರೆ. ಈ ವೇಳೆ ರಾತ್ರಿ 11ರ ಬಳಿಕ ರಸ್ತೆಯಲ್ಲಿ ಓಡಾಡುವಂತಿಲ್ಲ. ನೀವು ಯಾರು, ನಿಮಗೂ ಇವರಿಗೂ ಏನು ಸಂಬಂಧ ಇತ್ಯಾದಿ ಪ್ರಶ್ನೆ ಕೇಳಿದ್ದಾರೆ. 

Bengaluru: ಉದ್ಯೋಗ ಕೊಡಿಸುವ ನೆಪದಲ್ಲಿ ಮಹಿಳೆಯರನ್ನ ನಂಬಿಸಿ ಅತ್ಯಾಚಾರ: ಆರೋಪಿ ಬಂಧನ

ಗುರುತಿನ ಚೀಟಿ ತೋರಿಸುವಂತೆ ಕೇಳಿದ್ದಾರೆ. ಆಗ ಕಾರ್ತಿಕ್‌ ದಂಪತಿ ತಮ್ಮ ಮೊಬೈಲ್‌ನಲ್ಲಿದ್ದ ಆಧಾರ್‌ ಕಾರ್ಡ್‌ ತೋರಿಸಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಪೊಲೀಸರು, ದಂಪತಿಯ ಮೊಬೈಲ್‌ ಪಡೆದುಕೊಂಡು .3 ಸಾವಿರ ದಂಡ ಪಾವತಿಸುವಂತೆ ಬೆದರಿಸಿದ್ದಾರೆ. ದಂಡ ಪಾವತಿಸದಿದ್ದರೆ ಕಾನೂನಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ದಂಪತಿಯನ್ನು ಹೆದರಿಸಲಾಗಿದೆ. ಪೊಲೀಸರ ವರ್ತನೆಯಿಂದ ಹೆದರಿದ ದಂಪತಿ ಕೊನೆಗೆ ಕ್ಯೂಆರ್‌ ಕೋಡ್‌ ಬಳಸಿ ಪೊಲೀಸರಿಗೆ 1 ಸಾವಿರವನ್ನು ನೀಡಿ ಸ್ಥಳದಿಂದ ತೆರಳಿದ್ದಾರೆ. 

Bengaluru: ಪಾಗಲ್ ಪ್ರೇಮಿ ಕಾಟಕ್ಕೆ ದಂತ ವೈದ್ಯೆ ಆತ್ಮಹತ್ಯೆ: ಸಹಪಾಠಿ ಅಪಪ್ರಚಾರ ಕಾರಣ?

ಈ ಸಂಬಂಧ ನೊಂದ ಕಾರ್ತಿಕ್‌ ಸರಣಿ ಟ್ವೀಟ್‌ ಮಾಡಿ ಘಟನೆಯನ್ನು ಎಳೆ ಎಳೆಯಾಗಿ ವಿವರಿಸಿದ್ದರು. ರಾತ್ರಿ 11ರ ಬಳಿಕ ಸಾರ್ವಜನಿಕರು ಓಡಾಡಬಾರದು ಎಂಬ ನಿಯಮವಿದೆಯೇ ಎಂದು ಪ್ರಶ್ನಿಸಿದ್ದಾರೆ. ಘಟನೆ ಬಳಿಕ ಮನೆಯಲ್ಲಿ ನಾನು ಮತ್ತು ನನ್ನ ಪತ್ನಿ ಸರಿಯಾಗಿ ನಿದ್ರೆ ಮಾಡಲು ಆಗಲಿಲ್ಲ. ಇಬ್ಬರು ಮಾನಸಿಕವಾಗಿ ನೊಂದಿದ್ದೇವೆ ಎಂದು ಕಾರ್ತಿಕ್‌ ಟ್ವೀಟ್ ಮೂಲಕ ಬೆಂಗಳೂರು ಪೊಲೀಸರಿಗೆ ದೂರು ನೀಡಿದ್ದರು. ಟ್ವೀಟ್ ಗಮನಿಸಿದ ಪೊಲೀಸರು, ಈ ಬಗ್ಗೆ ಮಾಹಿತಿ ಕಲೆ ಹಾಕುವುದಾಗಿ ತಿಳಿಸಿದ್ದರು.

Follow Us:
Download App:
  • android
  • ios