Bengaluru: ಉದ್ಯೋಗ ಕೊಡಿಸುವ ನೆಪದಲ್ಲಿ ಮಹಿಳೆಯರನ್ನ ನಂಬಿಸಿ ಅತ್ಯಾಚಾರ: ಆರೋಪಿ ಬಂಧನ

ಉದ್ಯೋಗ ಕೊಡಿಸುವ ನೆಪದಲ್ಲಿ ಮಹಿಳೆಯರನ್ನ ನಂಬಿಸಿ ಅತ್ಯಾಚಾರ ಮಾಡಿ ಬಳಿಕ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪಿಯನ್ನು ಅಗ್ನೇಯ ವಿಭಾಗದ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. 

Accused arrested For Rape of women on the pretext of providing employment in Bengaluru gvd

ಬೆಂಗಳೂರು (ಫೆ.03): ಉದ್ಯೋಗ ಕೊಡಿಸುವ ನೆಪದಲ್ಲಿ ಮಹಿಳೆಯರನ್ನ ನಂಬಿಸಿ ಅತ್ಯಾಚಾರ ಮಾಡಿ ಬಳಿಕ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪಿಯನ್ನು ಅಗ್ನೇಯ ವಿಭಾಗದ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರದಲ್ಲಿ ಟೆಕ್ಕಿಯಾಗಿದ್ದ ಆರೋಪಿ ದಿಲೀಪ್ ಪ್ರಸಾದ್, ಮೋನಿಕಾ‌ ಹಾಗೂ ಮ್ಯಾನೇಜರ್ ಎಂಬ ಎರಡು ನಕಲಿ ಇನ್ಸ್ಟಾಗ್ರಾಂ ಖಾತೆ ತೆರದಿದ್ದ. 

ಇದರ ಮೂಲಕ ಮಹಿಳೆಯರಿಗೆ ಕೆಲಸ ಕೊಡಿಸುವುದಾಗಿ ನಂಬಿಸುತ್ತಿದ್ದ. ನಂತರ ಅವರನ್ನ ಬೇರೆ ಸ್ಥಳಕ್ಕೆ ಕರೆಸಿಕೊಂಡು ಅತ್ಯಾಚಾರ ಮಾಡಿ ವಿಡಿಯೋ ಮಾಡಿಕೊಳ್ಳುತ್ತಿದ್ದ. ನಂತರ ಇದೇ ವಿಡಿಯೋ ಬಳಸಿಕೊಂಡು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡ್ತಾ ಇದ್ದ. ಆರೋಪಿಯ ಬಂಧನದ ಬಳಿಕ ಹಲವು ಯುವತಿಯರಿಗೆ ಇದೆ ರೀತಿ ಮಾಡಿರುವುದು ಬೆಳಕಿಗೆ ಬಂದಿದ್ದು, ಸದ್ಯ ಸೆನ್ ಠಾಣೆ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

ಪಾಗಲ್ ಪ್ರೇಮಿ ಕಾಟಕ್ಕೆ ದಂತ ವೈದ್ಯೆ ಆತ್ಮಹತ್ಯೆ: ಸಹಪಾಠಿ ಅಪಪ್ರಚಾರ ಕಾರಣ?

ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಹಾಗೂ ಮಾಧ್ಯಮಗಳ ಮೂಲಕ ಅಪರಿಚಿತ ವ್ಯಕ್ತಿಗಳೊಂದಿಗೆ ಸ್ನೇಹ ಬೆಳೆಸಿ ತಮ್ಮ ಖಾಸಗಿ ಮಾಹಿತಿಯನ್ನು ಹಂಚಿಕೊಳ್ಳುವ ಮುನ್ನ ಪಾಲಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳು.

1) ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತ ವ್ಯಕ್ತಿಗಳು ಯುವತಿಯರಂತೆ ತಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ ಖಾತೆಗಳನ್ನು (ಯುವತಿಯರ ಡಿ.ಪಿ/ಹೆಸರುಗಳನ್ನಿಟ್ಟುಕೊಂಡು) ರಚಿಸಿಕೊಂಡು ಸದರಿ ಖಾತೆಗಳ ಮುಖಾಂತರ ಯುವತಿಯರನ್ನು ಪರಿಚಯ ಮಾಡಿಕೊಳ್ಳಲು ಫ್ರೇಂಡ್ ರಿಕ್ವೆಸ್ಟ್‌ಗಳನ್ನು ಕಳುಹಿಸುವ ಸಾಧ್ಯತೆಗಳಿದ್ದು ಪರಿಚಿತರಲ್ಲದ ಫ್ರೆಂಡ್ ರಿಕ್ವೆಸ್ಟ್‌ನ್ನು ಸ್ವೀಕರಿಸಬಾರದು. 

2) ಸಾಮಾಜಿಕ ಜಾಲತಾಣದಲ್ಲಿ ತಮ್ಮ ವೈಯ್ಯುಕ್ತಿಕ ದೌರ್ಬಲ್ಯಗಳನ್ನು ಹಂಚಿಕೊಂಡರೆ ಈ ದೌರ್ಬಲ್ಯಗಳನ್ನಿಟ್ಟುಕೊಂಡು ಆರೋಪಿತರು ತಮ್ಮನ್ನು ಖಾಸಗೀತನಕ್ಕೆ ಬಳಕೆ ಮಾಡಿಕೊಂಡು ವಂಚಿಸುವ ಸಾಧ್ಯತೆಗಳಿರುತ್ತವೆ.

3) ಸಾಮಾಜಿಕ ಜಾಲತಾಣಗಳಲ್ಲಿನ ಮಾಹಿತಿಯನ್ನು ತಮ್ಮ ಸ್ನೇಹಿತರು ಮತ್ತು ಸಂಬಂಧಿಕರನ್ನು ಹೊರತುಪಡಿಸಿ ಇತರೆ ವ್ಯಕ್ತಿಗಳು ನೋಡದೇ ಇರುವ ಹಾಗೆ ಗೌಪ್ಯ (PRIVACY) ಸೆಟ್ಟಿಂಗ್‌ಗಳನ್ನು ಮಾಡಿಕೊಳ್ಳುವುದು.

4) ಯಾವುದೇ ಅಪರಿಚಿತ ವ್ಯಕ್ತಿಗಳು ತಮ್ಮ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳ ಮುಖಾಂತರ ಕಳುಹಿಸುವಂತೆ ಬೇಡಿಕೆ ಇಟ್ಟಲ್ಲಿ ಮತ್ತು ನಿಮ್ಮ ವೈಯುಕ್ತಿಕ ಮಾಹಿತಿಯನ್ನುಟ್ಟುಕೊಂಡು ಹೆದರಿಸಿದಲ್ಲಿ ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ಕೂಡಲೇ ಸಂಪೂರ್ಣ ಮಾಹಿತಿಯೊಂದಿಗೆ ದೂರನ್ನು ದಾಖಲಿಸುವುದು.

5) ಯಾವುದೇ ಅಪರಿಚಿತ ವ್ಯಕ್ತಿಗಳಿಂದ ಬರುವ ಎಸ್.ಎಂ.ಎಸ್ ಮತ್ತು ಲಿಂಕ್‌ಗಳನ್ನು ಹಾಗೂ ವಾಟ್ಸಾಪ್‌ಗಳ ಮುಖಾಂತರ ಸಂದೇಶಗಳನ್ನು ಸ್ವೀಕರಿಸಿದರೆ ಸದರಿ ಸಂದೇಶಗಳ ಬಗ್ಗೆ ಪರಿಶೀಲಿಸದೇ ಬಳಕೆ ಮಾಡಬಾರದು.

6) ಯಾವುದೇ ವ್ಯಕ್ತಿ/ಸಂಸ್ಥೆಗಳು ಕೆಲಸ ಕೊಡಿಸುವುದಾಗಿ ತಮ್ಮನ್ನು ಆನ್ ಲೈನ್ ಮುಖಾಂತರ ಸಂಪರ್ಕಿಸಿ ಹಣ ಮತ್ತು ತಮ್ಮ ಖಾಸಗಿ ಮಾಹಿತಿಯನ್ನು ನೀಡುವಂತೆ ತಮ್ಮನ್ನು ಪ್ರೇರೇಪಿಸಿದಲ್ಲಿ ತಾವುಗಳು ಖದ್ದಾಗಿ ವ್ಯಕ್ತಿ ಮತ್ತು ಸಂಸ್ಥೆಯನ್ನು ಸಂಪರ್ಕಿಸಿ ಮಾಹಿತಿಯನ್ನು ಹಂಚಿಕೊಳ್ಳುವುದು.

ವಿಡಿಯೋ ಕಾಲ್‌ನಲ್ಲಿ ಸಹೋದ್ಯೋಗಿ ಆತನ ಹೆಂಡತಿ ತೋರಿಸಿಲ್ಲ ಎಂದು ಹೊಟ್ಟೆಗೆ ಇರಿತ: ಆರೋಪಿ ಬಂಧನ

7) ಅಪರಿಚಿತ ವ್ಯಕ್ತಿಗಳು ತಮ್ಮ ಲೈಂಗಿಕ ಬಯಕೆಯನ್ನು ಈಡೇರಿಸಿಕೊಳ್ಳಲು ಹೆಚ್ಚಾಗಿ ಯುವತಿಯರನ್ನು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಹಾಗೂ ಇತರೆ ಮಾಧ್ಯಮಗಳ ಮೂಲಕ ಸಂಪರ್ಕಿಸಿ ಸದರಿ ಯುವತಿಯರನ್ನು ಭಾವನಾತ್ಮಕವಾಗಿ ಮುಸಲಾಯಿಸಿ ಅವರುಗಳ ದೌರ್ಬಲ್ಯಗಳನ್ನು ಬಳಸಿಕೊಂಡು ವಿಡಿಯೋಗಳನ್ನು ಕಳುಹಿಸಿಕೊಂಡು ನಂತರ ಲೈಂಗಿಕತೆಗೆ ಬಳಕೆ ಮಾಡಿಕೊಳ್ಳುತ್ತಿದ್ದು, ಈ ಬಗ್ಗೆ ಜಾಗೃತಿ ವಹಿಸಬೇಕಾಗಿದೆ. 

Latest Videos
Follow Us:
Download App:
  • android
  • ios