Moral Policing: ಪೊಲೀಸ್ ಸಿಬ್ಬಂದಿ ಮೇಲೆಯೇ ನೈತಿಕ ಪೊಲೀಸ್ ಗಿರಿ, ಇಬ್ಬರ ಬಂಧನ

ಪೊಲೀಸ್ ಸಿಬ್ಬಂದಿ ಮೇಲೆಯೇ ಹಲ್ಲೆಗೆ ಮುಂದಾಗಿ ನೈತಿಕ ಪೊಲೀಸ್ ಗಿರಿ ನಡೆಸಿದ ಘಟನೆ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ‌.ರೋಡ್ ಬಳಿ ನಿನ್ನೆ ರಾತ್ರಿ‌ ನಡೆದಿದೆ.

Mangaluru police personnel were attacked by moral police two were arrested sat

ವರದಿ- ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ 
ಮಂಗಳೂರು(ಜು.28): ಪೊಲೀಸ್ ಸಿಬ್ಬಂದಿ ಮೇಲೆಯೇ ಹಲ್ಲೆಗೆ ಮುಂದಾಗಿ ನೈತಿಕ ಪೊಲೀಸ್ ಗಿರಿ ನಡೆಸಿದ ಘಟನೆ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ‌.ರೋಡ್ ಬಳಿ ನಿನ್ನೆ ರಾತ್ರಿ‌ ನಡೆದಿದೆ. 'ಮುಸ್ಲಿಂ-ಹಿಂದೂ ಹುಡುಗಿಯರನ್ನು ಎಲ್ಲಿ ಕರೆದು ಕೊಂಡು ಹೋಗಿದ್ದೀಯಾ? ಎಂದು ಹಲ್ಲೆ ಮಾಡಿದ ಆರೋಪ ಮಾಡಲಾಗಿದೆ. 

ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೋಲೀಸ್ ಕುಟುಂಬದ ಮಾನಭಂಗಕ್ಕೆ ಯತ್ನಿಸಿ ಕರ್ತವ್ಯಕ್ಕೂ ಅಡ್ಡಿಪಡಿಸಿದ ಬಗ್ಗೆ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.  ತುಂಬೆ ನಿವಾಸಿಗಳಾದ ಮನೀಶ್ ಪೂಜಾರಿ ಮತ್ತು ಮಂಜುನಾಥ್ ಆಚಾರ್ಯ ಬಂಧಿತರು. ಬಂಟ್ವಾಳ ಡಿ.ವೈ.ಎಸ್. ಪಿ.ಕಚೇರಿಯ ಸಿಬ್ಬಂದಿ ಪ್ರಸ್ತುತ ಎನ್. ಐ.ಎ. ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯ ಕುಟುಂಬದ ಮೇಲೆ ಮಾನಭಂಗಕ್ಕೆ ಯತ್ನಿಸಿದ ಬಗ್ಗೆ ದೂರು ನೀಡಲಾಗಿದೆ. 

ಟಾಯ್ಲೆಟ್‌ನಲ್ಲಿ ಹಿಂದೂ ಹುಡ್ಗೀರ ವೀಡಿಯೋ ಸರೆಹಿಡಿದ ಆರೋಪಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಜಾಮೀನು ಮಂಜೂರು

ಪೊಲೀಸ್ ಸಿಬ್ಬಂದಿ ಎನ್.ಐ.ಎ ವಿಭಾಗದ ಒಂದು ಪ್ರಕರಣದ  ಕರ್ತವ್ಯದಲ್ಲಿದ್ದರು. ಹೀಗಾಗಿ ಬಿ.ಸಿ.ರೋಡಿನಲ್ಲಿರುವ ಪೋಲೀಸ್ ವಸತಿ ಗೃಹದಲ್ಲಿ ತಂಗಿದ್ದರು. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಬಳಿಕ ಎನ್.ಐ.ಎ ವಿಭಾಗದಲ್ಲಿ ಕರ್ತವ್ಯದಲ್ಲಿದ್ದು, ಜುಲೈ 27 ರಂದು ಪತ್ನಿ ಹಾಗೂ ಪತ್ನಿಯ ಅಕ್ಕನ ಜೊತೆ ಬಿ.ಸಿ.ರೋಡಿನ ವಸತಿ ಗೃಹದಲ್ಲಿ ತಂಗಿದ್ದರು‌. ರಾತ್ರಿ ವೇಳೆ ಊಟಕ್ಕೆ ಬಿ.ಸಿ.ರೋಡಿನ ಹೋಟೆಲ್ ಒಂದಕ್ಕೆ ಹೋಗಿ ವಾಪಸಾಗ್ತಿದ್ದರು. ಈ ವೇಳೆ ಇಬ್ಬರು ಯುವಕರು ಇವರ ಕುಟುಂಬವನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಅಲ್ಲದೇ ಇಬ್ಬರು ಆರೋಪಿಗಳು ಅವ್ಯಾಚ್ಯವಾಗಿ ಬೈದಿದ್ದಾರೆ‌‌. 

ನೀನು ಮುಸ್ಲಿಂ ಹಿಂದೂ ಹುಡುಗಿಯರನ್ನು ಎಲ್ಲಿ ಕರೆದು ಕೊಂಡು ಹೋಗಿದ್ದೀಯಾ? ಇಲ್ಲಿನ ವಿಚಾರ ನಿನಗೆ ಗೊತ್ತಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಪೋಲೀಸ್ ಎಂದು ಗೋಗೆರದರೂ ಲೆಕ್ಕಿಸಿದೆ ಹಲ್ಲೆಗೂ ಮುಂದಾಗಿದ್ದಾರೆ. ಪೊಲೀಸ್ ಸಿಬ್ಬಂದಿ ಪತ್ನಿಯ ಚಿತ್ರೀಕರಣ ಮಾಡಿ ಮಾನಭಂಗಕ್ಕೆ ಯತ್ನಿಸಿದ್ದಾಗಿ ಆರೋಪಿಸಲಾಗಿದೆ. ಸದ್ಯ ಆರೋಪಿಗಳು ಪೋಲೀಸರ ವಶದಲ್ಲಿದ್ದು, ತನಿಖೆ ಮುಂದುವರಿದಿದೆ. ಆರೋಪಿಗಳ ವಿರುದ್ದ 354(D), 341, 353, 354(A), 504 ಜೊತೆ 34 ಐಪಿಸಿಯಡಿ ಎಫ್ಐಆರ್ ದಾಖಲಾಗಿದೆ. 

ಪೊಲೀಸ್ ಸಿಬ್ಬಂದಿ ಕೊಟ್ಟ ದೂರಿನಲ್ಲಿ ಏನಿದೆ?
ಬಿ.ಸಿ ರೋಡಿನ ಆನಿಯಾ ದರ್ಬಾರ್ ಹೋಟೆಲ್ ಗೆ ಹೋಗಿ ಅಲ್ಲಿ ಊಟ ಮುಗಿಸಿ ಅಲ್ಲಿಂದ ರಾತ್ರಿ ಸುಮಾರು 09.30 ಗಂಟೆಗೆ ವಸತಿ ಗೃಹದ ಕಡೆಗೆ ಹೊರಟಿದ್ದು, ರಾತ್ರಿ ಪಾಳಿಯ ಕರ್ತವ್ಯಕ್ಕೆ ಹೋಗಲಿರುವುದರಿಂದ ತನ್ನ ಹೆಂಡತಿ ಮತ್ತು ನಾದಿನಿಯನ್ನು ಪೊಲೀಸ್ ವಸತಿ ಗೃಹದ ಬಳಿ ಬಿಟ್ಟು ಬರಲು ಅವರ ಜೊತೆಯಲ್ಲಿ ಬಿ.ಸಿ ರೋಡ್-ಕೈಕುಂಜೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ನಮ್ಮ ಹಿಂದಿನಿಂದ ಇಬ್ಬರು ವ್ಯಕ್ತಿಗಳು ಒಂದು ಮೊಟಾರು ಸೈಕಲಿನಲ್ಲಿ ನಮ್ಮನ್ನು ಹಿಂಬಾಲಿಸಿಕೊಂಡು ಬರುತ್ತಿದ್ದರು. 

ನಮ್ಮಷ್ಟಕ್ಕೆ ವಸತಿ ಗೃಹದ ಕಡೆಗೆ ಪೊಲೀಸ್ ಕಂಪೌಂಡ್ ದಾಟಿ ನಡೆದುಕೊಂಡು ಹೋಗುತ್ತಾ ದೇವಸ್ಥಾನದ ದ್ವಾರವನ್ನು ದಾಟಿ ಮುಂದೆ ದೇವಸ್ಥಾನದ ಅನ್ನ ಛತ್ರದ  ಬಳಿ ರಾತ್ರಿ 9.45 ಗಂಟೆಗೆ ಬಂದಾಗ ಹೆಂಡತಿ ಮತ್ತು ನಾದಿನಿಯನ್ನು ವಸತಿ ಗೃಹದ ಬಳಿ ಬಿಟ್ಟು ಕರ್ತವ್ಯಕ್ಕೆ ಹಿಂತಿರುಗುತ್ತಿದ್ದಾಗ ಮೋಟಾರು ಸೈಕಲಿನಲ್ಲಿ ಹಿಂಬಾಲಿಸಿಕೊಂಡು ಬಂದ ಇಬ್ಬರು ವ್ಯಕ್ತಿಗಳು ಬೈಕನ್ನು ಅಡ್ಡಗಟ್ಟಿ ನಿಲ್ಲಿಸಿದ್ದಾರೆ. ಆಗ ಮೋಟಾರು ಸೈಕಲಿನ ಹಿಂಬದಿಯ ಸವಾರ ಏಕಾಏಕಿ “ದಾನೆಂಬೆ ಪೊಣ್ಣನ್ ಓಡೆಗ್ ಲೆತೊಂದು ಪೋಪಾ ಬೇವರ್ಸಿ, ರಂಡೆ ಮಗ” ಎಂದು ತುಳುವಿನಲ್ಲಿ ಅವಾಚ್ಯ ಶಬ್ದದಿಂದ ಬೈಯುತ್ತಿದ್ದಾಗ ಇದನ್ನು ನೋಡಿದ ನನ್ನ ಹೆಂಡತಿ ಪಿರ್ಯಾಧಿದಾರರ ಬಳಿ ಓಡಿ ಬಂದಾಗ ‘ಈ ಏರ್ ರಂಡೆ’, ಎಂದು ಅವಳ ಕೈಯನ್ನು ಎಳೆದು ಎದೆಗೆ ಕೈ ಹಾಕಿದಾಗ ಆಕೆಯು ಕೊಸರಾಡಿಕೊಂಡಳು.

 ಉಡುಪಿ ಕಾಲೇಜು ವಿಡಿಯೋ ವಿವಾದ ವಿರುದ್ಧ ಪೋಸ್ಟ್: ಬಿಜೆಪಿ ಕಾರ್ಯಕರ್ತೆ ಶಕುಂತಲಾ ಬಂಧನ

ಅಷ್ಟರಲ್ಲಿ ಇನ್ನೊಬ್ಬ ವ್ಯಕ್ತಿಯು ನನ್ನನ್ನು ಉದ್ದೇಶಿಸಿ ‘ಪೊನ್ನನ್ ಓಡೆಗ್ ಲೆತೊಂದು ಪೋಪಾ ಬೇವರ್ಸಿ’ ಎಂದು ಬೈದನು. ಆಗ ನಾನು ಬಿ.ಸಿ ರೋಡ್ ಪೊಲೀಸ್ ಎಂದು ಹೇಳಿದರೂ ಆರೋಪಿಗಳು ನೀನು ಪೊಲೀಸ್ ಅಲ್ಲಾ ನೀನು ಈಕೆಯ ಗಂಡನು ಅಲ್ಲ, ನೀನು ಬ್ಯಾರಿ ಈಕೆಯನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತೀಯಾ? ಎಂದು ಉಢಾಫೆಯಿಂದ ಅಸಭ್ಯವಾಗಿ ವರ್ತಿಸಿ, ಇಬ್ಬರು ಮೊಬೈಲ್ ನಲ್ಲಿ ಹೆಂಡತಿಯ ವೀಡಿಯೋ ಮಾಡಲು ಮುಂದಾಗಿರುತ್ತಾರೆ.  ಆ ಸಮಯ ಹೆಂಡತಿಯು  ಗಾಬರಿಗೊಂಡು ಹೆದರಿ ಬೊಬ್ಬೆ ಹೊಡೆದಾಗ ಪೊಲೀಸ್ ವಸತಿ ಗೃಹದಲ್ಲಿದ್ದ ಸಹೋದ್ಯೋಗಿಗಳು, ನೆರೆಹೊರೆಯವರು ಓಡಿ ಬಂದು ಹಲ್ಲೆ ಮಾಡದಂತೆ ತಡೆದು ಅವರಿಬ್ಬರನ್ನು ಹಿಡಿದಿದ್ದಾರೆ. ಬೈಕ್‌ನೊಂದಿಗೆ ಸವಾರ ಮನೀಷ್ ಮತ್ತು ಸಹ ಸವಾರ ಮಂಜುನಾಥ ಆಗಿದ್ದು, ಪತ್ನಿಯನ್ನು ಯಾವುದೋ ಉದ್ದೇಶದಿಂದ ಹಿಂಬಾಲಿಸಿ ಬಂದು ತಡೆದು ನಿಲ್ಲಿಸಿ, ಅವಾಚ್ಯ ಶಬ್ಧಗಳಿಂದ ಬೈದು ಪತ್ನಿಗೆ ಮಾನಭಂಗ ಮಾಡಿರುವುದಲ್ಲದೇ ನನ್ನ ಸರ್ಕಾರಿ ಕರ್ತವ್ಯಕ್ಕೆ ಹೋಗದಂತೆ ಅಡ್ಡಿಪಡಿಸಿದ ಆರೋಪಿಗಳ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ದೂರು ನೀಡಿದಂತೆ ಎಫ್ಐಆರ್ ದಾಖಲಾಗಿದೆ.

Latest Videos
Follow Us:
Download App:
  • android
  • ios