ಲವ್‌ ಫೇಲ್ಯೂರ್: ಪೊಲೀಸ್‌ ಕ್ವಾಟ್ರಸ್‌ ಮೇಲಿಂದ ಬಿದ್ದು ವಿದ್ಯಾರ್ಥಿನಿ ಆತ್ಮಹತ್ಯೆ!

ಹಲವು ದಿನಗಳಿಂದ ಲವ್‌ ಮಾಡುತ್ತಿದ್ದರೂ ಪ್ರೀತಿ ಫಲಿಸದ ಹಿನ್ನೆಲೆಯಲ್ಲಿ ಕಾಲೇಜು ವಿದ್ಯಾರ್ಥಿಯೊಬ್ಬಳು ಬೆಂಗಳೂರಿನ ಬಿನ್ನಿಪೇಟೆ ಬಳಿಯ ಪೊಲೀಸ್‌ ಕ್ವಾಟ್ರಸ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ. 

Mangaluru college student jumps to death at Binnypet police quarters in Bengaluru sat

ಬೆಂಗಳೂರು (ಏ.30): ಹಲವು ದಿನಗಳಿಂದ ಲವ್‌ ಮಾಡುತ್ತಿದ್ದರೂ ಪ್ರೀತಿ ಫಲಿಸದ ಹಿನ್ನೆಲೆಯಲ್ಲಿ ಕಾಲೇಜು ವಿದ್ಯಾರ್ಥಿಯೊಬ್ಬಳು ಬೆಂಗಳೂರಿನ ಬಿನ್ನಿಪೇಟೆ ಬಳಿಯ ಪೊಲೀಸ್‌ ಕ್ವಾಟ್ರಸ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ. 

ಇನ್ನು ಕಾಲೇಜು ವಿದ್ಯಾರ್ಥಿನಿ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್‌ ನೋಟ್‌ ಬರೆದಿಟ್ಟು, ಬಿನ್ನಿಪೇಟೆ ಬಳಿಯ ಪೊಲೀಸ್‌ ಕ್ವಾಟ್ರಸ್‌ನ ಏಳನೇ ಮಹಡಿ ಕಟ್ಟಡದಿಂದ ಹಾರಿದ್ದಾಳೆ. ಇನ್ನು ಮೃತ ಕಾಲೇಜು ಯುವತಿಯನ್ನು ಆಯಿಶಾ ಬಿ.ಆರ್.ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಆಗಿದ್ದಾಳೆ. ಸೇಂಟ್‌ ಆಗ್ನೆಸ್‌ ಕಾಲೇಜಿನಲ್ಲಿ ಬಿಎಸ್‌ಸಿ ಕಂಪ್ಯೂಟರ್‌ ಸೈನ್ಸ್‌ ಅಭ್ಯಾಸ ಮಾಡುತ್ತಿದ್ದಳು. ಆದರೆ, ಈಗ ಬೆಂಗಳೂರಿಗೆ ಬಂದಿದ್ದು, ಪ್ರೇಮ ವೈಫಲ್ಯದ ಹಿನ್ನೆಲೆಯಲ್ಲಿ ಕಾಟನ್‌ಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿನ ಪೊಲೀಸ್‌ ಕ್ವಾಟ್ರಸ್‌ನಿಂದ ಬಿದ್ದು ಸಾವನ್ನಪ್ಪಿದ್ದಾಳೆ.

ಬೆಂಗಳೂರು: ರೇವಾ ಕಾಲೇಜಿನಲ್ಲಿ ಇಂಜಿನಿಯರಿಂಗ್‌ ವಿದ್ಯಾರ್ಥಿಯ ಭೀಕರ ಕೊಲೆ!

ಇನ್ನು ಡೆತ್‌ ನೋಟ್‌ನಲ್ಲಿ ಏನೇನಿದೆ?
'ಈ ನನ್ನ ಸಾವಿಗೆ ಕಾರಣ ಯಾರು ಅಲ್ಲ. ಈ ಜೀವನದ ಮೇಲೆ ಜಿಗುಪ್ಸೆ ಬಂದಿದೆ. ಆದ್ದರಿಂದ ನಾನೇ ಸ್ವ ಇಚ್ಛೆಯಿಂದ ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತೇನೆ. ನಾನು ನನ್ನ ಕುಟುಂಬಕ್ಕೆ ಹಾಗೂ ಭೀಮೇಶ್ ನಾಯಕ್ ಮೇಲೆ‌ ದೂರು ನೀಡಿದ್ದೆನು. ನಾನು ನೀಡಿದ್ದ ಸುಳ್ಳು ದೂರಿನಿಂದ ಪಶ್ಚಾತ್ತಾಪ ಪಟ್ಟುಕೊಳ್ಳುತ್ತಿದ್ದೇನೆ. ಭೀಮೇಶ್ ನಾಯಕ್ ತುಂಬ ಸೂಕ್ಷ್ಮ ಮತ್ತು ಮುಗ್ಧ ವ್ಯಕ್ತಿ. ಅವರ ಮತ್ತು ನನ್ನ ಮಧ್ಯೆ ಯಾವುದೇ ದೈಹಿಕ ಸಂಪರ್ಕ ಇರುವುದಿಲ್ಲ' ಎಂದು ಪತ್ರದಲ್ಲಿ ಬರೆಯಲಾಗಿದೆ.

ಪಶ್ಚಾತ್ತಾಪದಿಂದ ಹೊರಬರಲು ಆಗುತ್ತಿಲ್ಲ:  'ನಾನು ಮಾಡಿದ ಈ ಸುಳ್ಳು ಕೇಸಿನಿಂದಾಗಿ ಅವರ ತಂದೆ ಅನಾರೋಗ್ಯಕ್ಕೀಡಾಗಿದ್ದಾರೆ. ನನ್ನಿಂದ ಎರಡು ಕುಟುಂಬಗಳಿಗೂ ತುಂಬಾ ನೋವಾಗಿದೆ. ಈ ಪಶ್ಚಾತ್ತಾಪದಿಂದ ಹೊರಬರಲು ಆಗುತ್ತಿಲ್ಲ. ನಾನು ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ. ಭೀಮೇಶ್ ನಾಯಕ್ ನನ್ನ ಆತ್ಮ ಸ್ನೇಹಿತ. ಆ್ಯಮ್ ವೆರಿ ಸಾರಿ... ಐ ಲವ್ ಯೂ ಸೋ ಮಚ್ ಭೀಮೇಶ್.. ಈ ನನ್ನ ಆತ್ಮಹತ್ಯೆಗೂ ಭೀಮೇಶ್ ನಾಯಕನಿಗೂ ಯಾವುದೇ ಸಂಬಂಧ ಇಲ್ಲ' ಎಂದು ಪೊಲೀಸರಿಗೆ ಲಭ್ಯವಾಗಿರುವ ಡೆತ್‌ನೋಟ್‌ನಲ್ಲಿ ಬರೆಯಲಾಗಿದೆ.

BENGALURU: ಮಧ್ಯರಾತ್ರಿ ಮಹಿಳೆ-ಮಕ್ಕಳಿದ್ದ ಮನೆ ನುಗ್ಗಿದ ಆರೋಪ, ಇನ್ಸ್ಪೆಕ್ಟರ್ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು

ನಿನಗೆ ಒಳ್ಳೆಯದು ಮಾಡಲಿ ಮುದ್ದು: 'ಭೀಮೇಶ್ ಮಾಮ, ಇವತ್ತು ನೀ ಆಫೀಸಿಗೆ ಹೋದಾಗ ಹಾಲು‌ ಕಾಯಿಸಿದರು ಕುಡಿಯದೆ ಹೋದೆ. ಥ್ಯಾಂಕ್ ಯೂ ಸೋ ಮಚ್ ಭೀಮೇಶ್ ನನ್ನನ್ನು ಕ್ಷಮಿಸಿದ್ದಕ್ಕೆ. ನೀನು ತುಂಬ ದೊಡ್ಡ ವ್ಯಕ್ತಿ ಆ ದೇವರು ನಿನಗೆ ಒಳ್ಳೆಯದು ಮಾಡಲಿ ಮುದ್ದು. ನೀ ಇನ್ನು ಸ್ಟ್ರಾಂಗ್ ಆಗಿ ಚೆನ್ನಾಗಿ ತಿನ್ನು. ನಾನು ನಿನ್ನ ಜೊತೆ ತುಂಬಾ ಖುಷಿಯಾಗಿದ್ದೆ. ಆ ಸಂತೋಷ ಎಲ್ಲಾ ನನಗೆ ಕೊಟ್ಟಿದ್ದಕ್ಕೆ ಥ್ಯಾಂಕ್ಸ್. I will miss you,May god bless you Dear. ನಮ್ಮ ಅಪ್ಪನಿಗೆ SORRY ಹೇಳು ಭೀಮೇಶ್. I am very sorry ಬೀಮೇಶ್ ನಿನ್ನನ್ನ ಜೈಲಿಗೆ ಕಳಿಸಿದಕ್ಕೆ' ಇಂತಿ‌ ನಿನ್ನ ಪ್ರೀತಿಯ- ಆಯಿಶಾ ಬಿ.ಆರ್‌ ಎಂದು ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

Latest Videos
Follow Us:
Download App:
  • android
  • ios