ಮಂಗಳೂರು/ ಬೆಂಗಳೂರು(ಸೆ. 30) ಇಡೀ ಮಂಗಳೂರಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ನೈಜೀರಿಯನ್ ಪ್ರಜೆಯನ್ನು ಬಂಧಿಸಲಾಗಿದೆ.  ಬೆಂಗಳೂರಿಗೆ ಆಗಮಿಸಿ ಮಂಗಳೂರು ಸಿಸಿಬಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಇದರೊಂದಿಗೆ ಬೆಚ್ಚಿ ಬೀಳಿಸುವ ಮಾಹಿತಿಯೊಂದು ಬಹಿರಂಗವಾಗಿದೆ.  ಈತನಿಗೂ ಮಾತಿನ ಮಲ್ಲಿ ನಕಿರುಪಕಿ ಅನುಶ್ರೀ ಗೊತ್ತು. ಪಾರ್ಟಿಗಳಲ್ಲಿ ಅನುಶ್ರೀಯನ್ನು ನೋಡಿದ್ದಾಗಿ ನೈಜೀರಿಯಾ ಪ್ರಜೆ ಮಾಹಿತಿ  ನೀಡಿದ್ದಾನೆ.

ಅನುಶ್ರೀಗೆ ಡ್ರಗ್ಸ್ ಶೆಟ್ಟಿ ತಂದ ಸಂಕಟ

ಶಾನ್ ನವಾಜ್ ಗೆ ನೈಜೀರಿಯಾ ಪ್ರಜೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ. ಮಹಮ್ಮದ್ ಶಾಕೀರ್ ಗೆ ಬಾಂಬೆಯಿಂದ ಶಾನ್  ತಂದುಕೊಡುತ್ತಿದ್ದ.  ಶಾಕೀರ್ ನಿಂದ ಕಿಶೋರ್ ಶೆಟ್ಟಿ, ತರುಣ್ ರಾಜ್ ಪಡೆಯುತ್ತಿದ್ದರು. ಕಿಶೋರ್ ಶೆಟ್ಟಿ ಮತ್ತು ತರುಣ್ ರಾಜ್ ಯುವತಿಯರನ್ನು ಸೇರಿಸಿ ಡ್ರಗ್ ಪಾರ್ಟಿ ಮಾಡುತ್ತಿದ್ದರು. ಇಡೀ ಮಂಗಳೂರಿಗೆ ಡ್ರಗ್ಸ್ ಕೊಡುತ್ತಿದ್ದವ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.