ಮಂಡ್ಯದಲ್ಲಿ ಬಟ್ಟೆ ಜೊತೆಗೆ ಅಂಗಡಿ ಮಾಲೀಕನ ಅಕೌಂಟ್‌ಗೂ ಕನ್ನ

* ಮಂಡ್ಯದಲ್ಲಿ ಆನ್‌‌ಲೈನ್ ಪೇಮೆಂಟ್ ದೋಖಾ.!
* ಬಟ್ಟೆ ಅಂಗಡಿ ಮಾಲೀಕನಿಗೆ ಲಕ್ಷಾಂತರ ರೂ ನಾಮ.!
* ಬಟ್ಟೆ ಖರೀದಿ ಜೊತೆ ಅಂಗಡಿ ಮಾಲೀಕನ ಅಕೌಂಟ್‌ಗೂ ಕನ್ನ

Mandya Police Arrests Tumakuru Man Over online cheating Case rbj

ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಡ್ಯ.

ಮಂಡ್ಯ, (ಮೇ.03):
ಆಧುನಿಕತೆ ಬೆಳೆದಂತೆಲ್ಲಾ ಹಣಕಾಸು ವ್ಯವಹಾರಗಳು ಕೇವಲ ಕೈ ಬೆರಳ ತುದಿಯಲ್ಲೇ ನಡೆಯುತ್ತಿವೆ. ಮೊಬೈಲ್‌ಗಳ ಮೂಲಕ ನಡೆಯುವ ಆನ್ ಲೈನ್ ಪೇಮೆಂಟ್ ದೂರದ ಹಣಕಾಸು ವ್ಯವಹಾರಗಳನ್ನು ಸುಲಭಗೊಳಿಸಿದೆ. ಇದು ವ್ಯಾಪಾರಸ್ಥರಿಗೆ ಸುಲಭ ಎನಿಸಿದ್ರು ಇದರಿಂದ ಅಪಾಯಗಳು ಕೂಡ ಹೆಚ್ಚು.‌ ಮಂಡ್ಯದಲ್ಲಿ ಆನ್‌ಲೈನ್ ಪೇಮೆಂಟನ್ನೇ ಬಂಡವಾಳ ಮಾಡಿಕೊಂಡ ಕಿರಾತಕರು ಡಿಜಿಟಲ್ ದೋಖಾ ಮಾಡ್ತಿದ್ದಾರೆ. ಆನ್ ಲೈನ್ ಪೇಮೆಂಟ್ ಮಾಡುತ್ತೇನೆ ನೆಟ್ವರ್ಕ್ ಸಮಸ್ಯೆ ಇದೆ ಎಂದು ಅಂಗಡಿ ಮಾಲೀಕರ ಸಿಮ್ ಪಡೆದು ಅವರ ಅಕೌಂಟ್ ನಿಂದಲೆ ಹಣ ಎಗರಿಸಿ ಇದೀಗಾ ಮಂಡ್ಯ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಬಟ್ಟೆ ಖರೀದಿ ಜೊತೆ ಅಂಗಡಿ ಮಾಲೀಕನ ಅಕೌಂಟ್‌ಗೂ ಕನ್ನ
ಇತ್ತೀಚಿಗೆ ಹಣಕಾಸು ವ್ಯವಹಾರ ಮಾಡೋದು ಸುಲಭ. ಬ್ಯಾಂಕ್ ಗೆ ಹೋಗದೆ ಮೊಬೈಲ್ ನಲ್ಲೆ ಆನ್‌ಲೈನ್ ಪೇಮೆಂಟ್ ಮಾಡಬಹುದು. ಆದ್ರೆ ಇದನ್ನೆ ಬಂಡವಾಳವಾಗಿಸಿಕೊಂಡು ಆನ್ ಲೈನ್ ದೋಖಾ ಮಾಡ್ತಿದ್ದ ತುಮಕೂರು ಮೂಲದ ಲೋಕೇಶ್ ಮಂಡ್ಯ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕಳೆದ ವರ್ಷ ಡಿಸೆಂಬರ್ 22 ರಂದು ಮಂಡ್ಯ ನಗರದ ಚಾಮುಂಡಿ ಫ್ಯಾಷನ್ ಎಂಬ ಬಟ್ಟೆ ಅಂಗಡಿಗೆ ಬಟ್ಟೆ ಖರೀದಿಗೆ ಬಂದಿದ್ದ ಲೋಕೇಶ್ 10 ಸಾವಿರ ರೂಪಾಯಿಗೆ ಬಟ್ಟೆಯನ್ನು ಖರೀದಿ ಮಾಡಿದ್ದನು. 

ತುಮಕೂರಿನಲ್ಲಿ ಹೆಚ್ಚಿದ ಮನೆಗಳ್ಳರ ಹಾವಳಿ: ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡಿದ ಕಳ್ಳರು

ಆದ್ರೆ ಈ ವೇಳೆ ತನ್ನ ಬಳಿ ಹಣವಿಲ್ಲ ಆನ್ ಲೈನ್ ಪೇಮೆಂಟ್ ಮಾಡುತ್ತೇನೆ ಎಂದು ಹೇಳಿದ್ದ.‌ ಇದಕ್ಕೆ ಅಂಗಡಿ ಮಾಲೀಕ ಕಿಮ್ ಸಿಂಗ್ ಕೂಡ ಒಪ್ಪಿಕೊಂಡಿದ್ದನು. ಆದ್ರೆ ತನ್ನ ಮೊಬೈಲ್ ನಲ್ಲಿ ನೆಟ್ವರ್ಕ್ ಬರುತ್ತಿಲ್ಲ, ನಿಮ್ ಸಿಮ್ ಕಾರ್ಡ್ ಕೊಡಿ ಅಂತ ಮಾಲೀಕನಿಗೆ ಹೇಳಿದ್ದ. 10 ಸಾವಿರ ರೂ ಬಟ್ಟೆ ವ್ಯಾಪಾರ ಮಾಡಿದ್ರಿಂದ ತನ್ನ ಮೊಬೈಲ್ ನಿಂದ ಸಿಮ್ ತೆಗೆದು ಕಿಮ್ ಸಿಂಗ್ ಲೋಕೇಶ್‌ಗೆ ನೀಡಿದ್ದನು. ಆದ್ರೂ ಪೇಮೆಂಟ್ ಆಗುತ್ತಿಲ್ಲ ಎಂದು ಸಿಮ್ ನ್ನು ಅಂಗಡಿ ಮಾಲೀಕನಿಗೆ ವಾಪಸ್ಸು ಕೊಟ್ಟು ನಾಳೆ ಹಣ ತರುವುದಾಗಿ ತಿಳಿಸಿ ಹೋಗಿದ್ದ ಖದೀಮ. 

ಇದಾದ ಒಂದು ದಿನದ ಬಳಿಕ ಕಿಮ್ ಸಿಂಗ್ ಅಕೌಂಟ್ ನಿಂದ ಮೂರು ಬಾರಿ 50 ಸಾವಿರದಂತೆ ಹಣ ಕಡಿತ ಮಾಡಿದ್ದಾನೆ. ಹಣ ಕಡಿತಗೊಂಡ ಮೆಸೆಜ್ ಮೊಬೈಲ್ ಗೆ ಬಂದ ಬಳಿಕ ಕಿಮ್ ಸಿಂಗ್ ಪೊಲೀಸರಿಗೆ ದೂರು ನೀಡಿದ್ರು, ಮೊದಲಿಗೆ ಪೊಲೀಸರು ಈ ಬಗ್ಗೆ ಹೆಚ್ಚು ತಲೆ‌ಕೆಡಿಸಿಕೊಳ್ಳದೆ ನಿಮ್ಮ ಕುಟುಂಬಸ್ಥರನ್ನ ವಿಚಾರಿಸಿ ಎಂದು ಹೇಳಿ ಕಳುಹಿಸಿದ್ದರಂತೆ.

 ಸಿಸಿಟಿವಿ ಆಧರಿಸಿ ಕಳ್ಳನ ಬಂಧನ
ಈ ಘಟನೆ ನಡೆದ ಮೂರು‌ ತಿಂಗಳ ಬಳಿಕ ಮಂಡ್ಯ ಜಿಲ್ಲೆಯ ಬೆಳ್ಳೂರಿನ ಬಟ್ಟೆ ಅಂಗಡಿಯಲ್ಲು ಇದೇ ರೀತಿ ದೋಖಾ ಆಗಿರೋದಾಗಿ ಪೊಲೀಸರಿಗೆ ಅಂಗಡಿ ಮಾಲೀಕ ದೂರು ಕೊಟ್ಟಿದ್ದಾನೆ. ಇಲ್ಲಿ ಅಂಗಡಿ ಮಾಲೀಕನ ಅಕೌಂಟ್ ನಿಂದ 80 ಸಾವಿರ ಹಣ ಕಡಿತವಾಗಿತ್ತಂತೆ. ಈ ಪ್ರಕರಣ ಯಾವಾಗ ನಡೆಯಿತು ಪೊಲೀಸರು ಅಲರ್ಟ್ ಆಗಿದ್ದು, ಸಿಸಿ ಕ್ಯಾಮರಾ ವೀಡಿಯೋ ಆಧರಿಸಿ ಆರೋಪಿ ಬಲೆ ಬೀಸಿದ್ದಾರೆ.‌ಬಳಿಕ ಲೋಕೇಶ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ.‌ ಸಿಮ್ ಕಾರ್ಡ್ ಪಡೆದು‌‌ ಓಟಿಪಿ ಮೂಲಕ ಹಣ ಎಗರಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾನಂತೆ.

Latest Videos
Follow Us:
Download App:
  • android
  • ios