ಸ್ನಾನದ ಕೋಣೆಗೆ ನುಗ್ಗಿ, 'ನೀನಂದ್ರೆ ನಂಗಿಷ್ಟ' ಗೃಹಿಣಿಗೆ ಬಲವಂತವಾಗಿ ಕಿಸ್ ಕೊಟ್ಟು ಕಾಮುಕ ಪರಾರಿ!
ಪಾಂಡವಪುರದಲ್ಲಿ ಗೃಹಿಣಿ ಸ್ನಾನ ಮಾಡುವಾಗ ಕಾಮುಕ ವ್ಯಕ್ತಿ ನುಗ್ಗಿ ದೌರ್ಜನ್ಯ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಫೆ.10 ರಂದು ತಾಳಶಾಸನ ಗ್ರಾಮದಲ್ಲಿ ನಡೆದ ಈ ಘಟನೆಯಲ್ಲಿ ಬಾವಪ್ಪರವರ ಸತೀಶ್ ಎಂಬಾತ ಮಹಿಳೆಯ ಮೇಲೆ ಬಲವಂತವಾಗಿ ದೌರ್ಜನ್ಯ ಎಸಗಿದ್ದಾನೆ. ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ಪರಾರಿಯಾಗಿದ್ದಾನೆ.

ಪಾಂಡವಪುರ (ಫೆ.14) : ಗೃಹಿಣಿ ಮನೆಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಕಾಮುಕ ವ್ಯಕ್ತಿ ಸ್ನಾನದ ಮನೆಗೆ ನುಗ್ಗಿ ಮುತ್ತುಕೊಟ್ಟು ಮೈಮುಟ್ಟಿ ಬಲವಂತ ಪಡಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಘಟನೆ ಸಂಬಂಧ ನೊಂದ ಗೃಹಿಣಿ ಪಾಂಡವಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಾಲೂಕಿನ ತಾಳಶಾಸನ ಗ್ರಾಮದ ಬಾವಪ್ಪರವರ ಸತೀಶ್ ಎಂಬ ಕಾಮುಕ ಕಳೆದ ಫೆ.10ರಂದು ಅದೇ ಗ್ರಾಮದ ಗೃಹಿಣಿಗೆ ಮನೆ ಹಿಂಭಾಗ ಸ್ನಾನದ ಮನೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಯಾರು ಇಲ್ಲದ ಸಮಯ ನೋಡಿಕೊಂಡು ಗುದ್ದಲಿ ಕೇಳುವ ನೆಪದಲ್ಲಿ ಮನೆಯೊಳಗೆ ನುಗ್ಗಿದ್ದಾನೆ.
ಸ್ನಾನ ಮಾಡುತ್ತಿದ್ದ ಸ್ಥಳಕ್ಕೆ ಆಗಮಿಸಿ ನನಗೆ ನೀನು ಅಂದರೆ ಇಷ್ಟ ಈ ವಿಷಯ ಯಾರಿಗೂ ಹೇಳಬೇಡ ಎಂದು ಹೇಳಿ ಮಹಿಳೆ ಕೆನ್ನೆಗೆ ಮುತ್ತುಕೊಟ್ಟಿದ್ದಾನೆ. ಬಳಿಕ ಮಹಿಳೆ ಮೈಮುಟ್ಟಿ ಬಲವಂತಪಡಿಸಿದ್ದಾನೆ. ಈ ವೇಳೆ ಮಹಿಳೆ ಜೋರಾಗಿ ಕಿರುಚಾಡಿಕೊಂಡ ತಕ್ಷಣ ಆಕೆಯನ್ನು ತಳ್ಳಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಇದನ್ನೂ ಓದಿ: ರಷ್ಯಾದ ರೆವರ್ಟ್ ಬ್ರಾಂಡ್‌ನಿಂದ ಗಾಂಧೀಜಿ ಚಿತ್ರ ಇರುವ ಬಿಯರ್ ಮಾರಾಟ; ಭಾರತೀಯ ನೆಟಿಜನ್ ಆಕ್ರೋಶ!
ಮನೆಯಲ್ಲಿ ಗಂಡ, ಅತ್ತಿ, ಮೈದುನ ಯಾರು ಇಲ್ಲದ ಕಾರಣ ವಿಷಯವನ್ನು ದೌರ್ಜನ್ಯಕ್ಕೆ ಒಳಗಾದ ಮಹಿಳೆ ಯಾರಿಗೂ ತಿಳಿಸಿಲ್ಲ. ಮಾರನೇ ದಿನವೂ ಫೆ.11ರಂದು ಮತ್ತೆ ಮನೆ ಬಳಿ ಬಂದು ಅಸಭ್ಯವಾಗಿ ಮಾತನಾಡಿದ್ದಾನೆ.
ಬಳಿಕ ಮಹಿಳೆ ಮನೆಯವರಿಗೆ ವಿಷಯ ಮುಟ್ಟಿಸಿ ಫೆ.12ರಂದು ಪಾಂಡವಪುರ ಪೊಲೀಸ್ ಠಾಣೆಗೆ ಆಗಮಿಸಿ ದೌರ್ಜನ್ಯ ನಡೆಸಿ ಕಾಮುಕ ಬಾವಪ್ಪರವರ ಸತೀಶ್ ವಿರುದ್ಧ ದೂರು ನೀಡಿದ್ದಾಳೆ. ದೂರು ದಾಖಲಾಗುತ್ತಿದ್ದಂತೆ ಕಾಮಕ ಸತೀಶ್ ಊರಿಂದ ಪರಾರಿಯಾಗಿದ್ದಾನೆ. ಪೊಲೀಸರು ದೂರು ದಾಖಲಿಸಿಕೊಂಡು ಆರೋಪಿಯ ಹುಡುಕಾಟಕ್ಕಾಗಿ ಕ್ರಮಕೈಗೊಂಡಿದ್ದಾರೆ.