ವೆಂಕಟೇಶ್‌ ಕಲಿಪಿ

ಬೆಂಗಳೂರು(ಜ.09): ಹದಿನೈದು ತಿಂಗಳಲ್ಲಿ ಎರಡು ಮದುವೆಯಾದ ವ್ಯಕ್ತಿಯೊಬ್ಬರು ಕರ್ನಾಟಕ ವಿವಾಹಗಳ (ನೋಂದಣಿ ಮತ್ತು ಅವರ್ಗೀಕೃತ) ಕಾಯ್ದೆ-1976 ಅಡಿ ನೋಂದಣಿಯಾಗದ ಕಾರಣಕ್ಕೆ ಮೊದಲನೇ ಮದುವೆ ಅಸಿಂಧು ಎಂದು ವಾದ ಮಂಡಿಸುವ ಮೂಲಕ ಚಾಣಾಕ್ಷತನ ಮರೆಯಲು ಹೋಗಿ ಹೈಕೋರ್ಟ್‌ನಿಂದ ತರಾಟೆಗೆ ಒಳಗಾಗಿ ಜೈಲು ಪಾಲಾಗಿದ್ದಾರೆ.

ಕೌಟುಂಬಿಕ ದೌರ್ಜನ್ಯ ಪ್ರಕರಣದಡಿ ಕೆಳ ನ್ಯಾಯಾಲಯ ವಿಧಿಸಿದ್ದ ಜೈಲು ಶಿಕ್ಷೆ ರದ್ದುಪಡಿಸಲು ಕೋರಿ ಸದಾನಂದ ನಾಯ್‌್ಕ ಎಂಬುವರು ಹೈಕೋರ್ಟ್‌ಗೆ ಕ್ರಿಮಿನಲ್‌ ಮೇಲ್ಮನವಿ ಸಲ್ಲಿಸಿದ್ದರು. ಕರ್ನಾಟಕ ವಿವಾಹಗಳ (ನೋಂದಣಿ ಮತ್ತು ಅವರ್ಗೀಕೃತ) ಕಾಯ್ದೆ -1976 ಜಾರಿಯಾದ ನಂತರವೂ ಹಿಂದು ವಿವಾಹಗಳ (ಕರ್ನಾಟಕ) ಕಾಯ್ದೆ-1966 ಅಡಿಯಲ್ಲಿ ನೋಂದಣಿಯಾದ ಕಾರಣಕ್ಕೆ ಶೋಭಾ ಎಂಬುವರೊಂದಿಗೆ ನಡೆದ ತನ್ನ ಮೊದಲನೇ ವಿವಾಹಕ್ಕೆ ಸಂಬಂಧಿಸಿದ ಪ್ರಮಾಣ ಪತ್ರ ಮಾನ್ಯತೆ ಹೊಂದಿಲ್ಲ. ಹೀಗಾಗಿ ಕೌಟುಂಬಿಕ ದೌರ್ಜನ್ಯ ಪ್ರಕರಣ ಅನ್ವಯಿಸುವುದಿಲ್ಲ ಎಂಬುದಾಗಿ ವಾದ ಮಂಡಿಸಿದ್ದರು.

ರಾಜ್ಯದಲ್ಲಿ ಮತ್ತೆ 50 ಶಿಕ್ಷಕರಿಗೆ ವೈರಸ್‌: ಸೋಂಕಿತರ ಸಿಬ್ಬಂದಿ ಸಂಖ್ಯೆ 236ಕ್ಕೆ

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್‌.ಬಿ.ಪ್ರಭಾಕರ ಶಾಸ್ತ್ರಿ ಅವರ ಏಕ ಸದಸ್ಯ ನ್ಯಾಯಪೀಠ, ಹಿಂದು ವಿವಾಹಗಳ ಕಾಯ್ದೆಯಡಿ ಆದ ಮದುವೆಯ ನೋಂದಣಿಯನ್ನು ಕರ್ನಾಟಕ ವಿವಾಹಗಳ ಕಾಯ್ದೆ ಅಮಾನ್ಯ ಮಾಡುವುದಿಲ್ಲ ಎಂದು ಆದೇಶಿಸಿ, ಕೌಟುಂಬಿಕ ದೌರ್ಜನ್ಯ ಪ್ರಕರಣದಡಿ ಸದಾನಂದ ನಾಯ್‌್ಕ ಅವರಿಗೆ ಕೆಳ ನ್ಯಾಯಾಲಯ ವಿಧಿಸಿದ್ದ ಒಂದು ವರ್ಷ ಜೈಲು ಮತ್ತು ಐದು ಸಾವಿರ ರು. ದಂಡವನ್ನು ಎತ್ತಿಹಿಡಿಯಿತು.

13 ವರ್ಷಗಳ ಹಿಂದಿನ ಪ್ರಕರಣ:

ಕಾರ್ಕಳದ ನಿವಾಸಿ ಸದಾನಂದ ನಾಯ್‌್ಕ ವಿರುದ್ಧ ಆತನ ಪತ್ನಿ ಶೋಭಾ 2007 ಮೇ 17ರಂದು ಮಂಗಳೂರು ಗ್ರಾಮೀಣ ಠಾಣಾ ಪೊಲೀಸರಿಗೆ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು.

‘ಸದಾನಂದ ನಾಯ್ಕ್ ಹಾಗೂ ನಾನು 2006ರ ಫೆ.3ರಂದು ಮಂಗಳೂರಿನ ದೇವಸ್ಥಾನದಲ್ಲಿ ಕುಟುಂಬ ಸದಸ್ಯರು ಹಾಗೂ ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದೆವು. ಕೆಲವು ತಿಂಗಳ ಬಳಿಕ ನಾನು ಅಂದವಾಗಿಲ್ಲ ಎಂದು ಗಂಡ ನನಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು. 2007ರ ಮೇ 16ರಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಮನೆಯಿಂದ ತೆರಳಿದ ಪತಿ ಎರಡನೇ ಮದುವೆಯಾಗಿದ್ದಾರೆ’ ಎಂದು ದೂರಿನಲ್ಲಿ ಶೋಭಾ ಆರೋಪಿಸಿದ್ದರು.

ತಾಂತ್ರಿತ ಸಮಸ್ಯೆ: 1 ಗಂಟೆ ತಡವಾಗಿ ಡ್ರೈ ರನ್ ಆರಂಭ

ದೂರಿನ ವಿಚಾರಣೆ ನಡೆಸಿದ ಮಂಗಳೂರು ಜೆಎಂಎಫ್‌ಸಿ ನ್ಯಾಯಾಲಯ, ಸದಾನಂದ ಅವರಿಗೆ ಒಂದು ವರ್ಷ ಸಾಧಾರಣ ಜೈಲು ಶಿಕ್ಷೆ ಮತ್ತು 5 ಸಾವಿರ ರು. ದಂಡ ವಿಧಿಸಿತ್ತು. ಅದನ್ನು ಮಂಗಳೂರಿನ ಪ್ರಧಾನ ಸೆಷನ್ಸ್‌ ನ್ಯಾಯಾಲಯ ಪುರಸ್ಕರಿಸಿತ್ತು. ಅದರ ರದ್ದು ಕೋರಿ ಸದಾನಂದ ನಾಯ್‌್ಕ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಸದಾನಂದ ನಾಯ್‌್ಕ ಪರ ವಕೀಲ, ಆರೋಪಿ ಹಾಗೂ ದೂರುದಾರರ ನಡುವೆ ಮದುವೆಯೇ ಆಗಿಲ್ಲ. ವೈವಾಹಿಕ ಸಂಬಂಧವಿಲ್ಲದ ಸಂದರ್ಭದಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣ ಅನ್ವಯವಾಗದು. ದೂರುದಾರರಾದ ಶೋಭಾ ಅವರು ಒದಗಿಸಿದ ಅರ್ಜಿದಾರರ ಜೊತೆಗಿನ ವಿವಾಹದ ನೋಂದಣಿ ಪ್ರಮಾಣ ಪತ್ರವು ಕಾನೂನಿನಲ್ಲಿ ಮಾನ್ಯತೆ ಹೊಂದಿಲ್ಲ. ಅದು ಹಿಂದು ವಿವಾಹಗಳ ಕಾಯ್ದೆ-1966ರ ಅಡಿಯಲ್ಲಿ ನೋಂದಣಿಯಾಗಿದೆ. ಕರ್ನಾಟಕ ವಿವಾಹಗಳ (ನೋಂದಣಿ ಮತ್ತು ಅವರ್ಗೀಕೃತ)-1976ರ ಅಡಿಯಲ್ಲಿ ನೋಂದಣಿಯಾದರೆ ಮಾತ್ರ ಆ ವಿವಾಹ ಮತ್ತು ನೋಂದಣಿ ಪ್ರಮಾಣ ಪತ್ರವು ಮಾನ್ಯವಾಗುತ್ತದೆ ಎಂದು ವಾದಿಸಿದರು.

ಭಾರೀ ವಿರೋಧದ ಬೆನ್ನಲ್ಲೇ ವಾಟ್ಸಾಪ್ ನೂತನ ನಿಯಮದಲ್ಲಿ ಬದಲಾವಣೆ!

ಈ ವಾದ ತಿರಸ್ಕರಿಸಿದ ಹೈಕೋರ್ಟ್‌, ಹೊಸದಾಗಿ ಜಾರಿಯಾದ ಕಾನೂನು, ಹಿಂದಿನ ಕಾನೂನನ್ನು ರದ್ದುಪಡಿಸಲಾಗಿದೆ ಎಂದು ಸೂಚಿಸಬೇಕು. ಆಗ ಮಾತ್ರ ಹಿಂದಿನ ಕಾನೂನು ರದ್ದಾಗಿದೆ ಎಂಬುದಾಗಿ ಭಾವಿಸಲಾಗುತ್ತದೆ. ಆದರೆ, ಕರ್ನಾಟಕ ವಿವಾಹಗಳ ಕಾಯ್ದೆಯನ್ನು ಜಾರಿಗೊಳಿಸಿದ ನಂತರ ಹಿಂದು ವಿವಾಹಗಳ ಕಾಯ್ದೆಯನ್ನು ರದ್ದುಪಡಿಸಿಲ್ಲ. ಹೀಗಾಗಿ, ಕರ್ನಾಟಕ ವಿವಾಹಗಳ ಕಾಯ್ದೆಯು, ಹಿಂದು ವಿವಾಹಗಳ ಕಾಯ್ದೆಯಡಿ ನೋಂದಣಿಯಾದ ಮದುವೆಯನ್ನು ಅಮಾನ್ಯ ಮಾಡುವುದಿಲ್ಲ ಎಂದು ಆದೇಶಿಸಿತು.

ಇನ್ನು ಮದುವೆ ಆಹ್ವಾನ ಪತ್ರ, ಸಾಕ್ಷಿಗಳÜು ನುಡಿದ ಸಾಕ್ಷ್ಯ ಮತ್ತು ವಿವಾಹ ಪ್ರಮಾಣ ಪತ್ರದಿಂದ ಆರೋಪಿ ಮತ್ತು ದೂರುದಾರರು ಮದುವೆಯಾಗಿರುವುದು ಸಾಬೀತಾಗಿದೆ. ಆದ್ದರಿಂದ ವಿಚಾರಣಾ ನ್ಯಾಯಾಲಯ ಆರೋಪಿಗೆ ಶಿಕ್ಷೆ ವಿಧಿಸಿರುವುದು ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟಹೈಕೋರ್ಟ್‌, ಮೇಲ್ಮನವಿ ವಜಾಗೊಳಿಸಿ ಆದೇಶಿಸಿತು.