Asianet Suvarna News Asianet Suvarna News

ಬೆಂಗಳೂರು: ಸಾರ್ವಜನಿಕ ಸ್ಥಳದಲ್ಲೇ ಯುವತಿ ಮುಂದೆ ಹಸ್ತಮೈಥುನ ಮಾಡ್ಕೊಂಡ ಕಾಮುಕ..!

ತಾನು ಅನುಭವಿಸಿದ ಸಮಸ್ಯೆಯ ಬಗ್ಗೆ ಯುವತಿ ಸಾಮಾಜಿಕ ಜಾಲತಾಣ ಟ್ವೀಟರ್‌ನಲ್ಲಿ ಬರೆದುಕೊಂಡಿದ್ದಾಳೆ.  ಜನವರಿ 5 ರಂದು ಘಟನೆ ನಡೆದಿರುವ ಬಗ್ಗೆ ಉಲ್ಲೇಖಿಸಿದ್ದಾಳೆ. 

Man who made Masturbation in front of Young Woman in Bengaluru grg
Author
First Published Jan 9, 2024, 9:20 AM IST

ಬೆಂಗಳೂರು(ಜ.09):  ಸಾರ್ವಜನಿಕ ಸ್ಥಳದಲ್ಲೇ ಯುವತಿ ಎದುರಿಗೆ ಕಾಮುಕ ವ್ಯಕ್ತಿಯೊಬ್ಬ ಹಸ್ತಮೈಥುನ ಮಾಡಿಕೊಂಡ ಘಟನೆ ಮಹಾದೇವಪುರದ ಪಾರ್ಕ್ ಎದುರಿನ ಸರ್ವೀಸ್ ರಸ್ತೆಯಲ್ಲಿ ನಡೆದಿದೆ. 

ಯುವತಿ ಕಾರು ಪಾರ್ಕ್ ಮಾಡಿ ಕಾರಿನಲ್ಲಿ ಕುಳಿತುಕೊಂಡಿದ್ದಳು. ಆ ಸಮಯದಲ್ಲಿ ಕಾರಿನ ಮುಂಭಾಗದಲ್ಲಿ ವ್ಯಕ್ತಿಯೋರ್ವ ಹಸ್ತಮೈಥುನ ಮಾಡಿಕೊಂಡು ಮತ್ತು ಅಸಭ್ಯವಾಗಿ ವರ್ತಿಸಿದ್ದಾನೆ. ಅದನ್ನ ನೋಡಿ ಹೆದರಿಕೊಂಡ ಯುವತಿ ಕಾರ್ ಡೋರ್ ಲಾಕ್ ಮಾಡಿಕೊಂಡಿದ್ದಾಳೆ. ಅನಂತರ ವ್ಯಕ್ತಿ ಕಾರಿನ ಬಳಿ ಬಂದು ಕಾರಿನ ಸುತ್ತ ಓಡಾಡಿದ್ದಾನೆ. ನಂತರ ಬೆದರಿಕೆ ಹಾಕುವ ದೃಷ್ಟಿಯಲ್ಲಿ ಯುವತಿಯನ್ನ ನೋಡಿದ್ದಾನೆ ವ್ಯಕ್ತಿ.  ಆತನ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಯುವತಿ ಸ್ಟಿಯರಿಂಗ್ ಕೆಳಗೆ ಅವಿತುಕೊಂಡಿದ್ದಾಳೆ. ಅಕೆಯ ಸ್ನೇಹತರೊಬ್ಬರು ಬಂದ ನಂತರ ಕಾರಿನಿಂದ ಯುವತಿ ಕೆಳಗಿಳಿದಿದ್ದಾಳೆ.

ರೈಲಿನಲ್ಲಿ ಮಲಗಿದ್ದ ಯುವತಿ ಮುಖದ ಮೇಲೆ ಹಸ್ತಮೈಥುನ ಮೂಲಕ ವೀರ‍್ಯಸ್ಖಲನ ಮಾಡಿದ ಕಾಮುಕ!

ತಾನು ಅನುಭವಿಸಿದ ಸಮಸ್ಯೆಯ ಬಗ್ಗೆ ಯುವತಿ ಸಾಮಾಜಿಕ ಜಾಲತಾಣ ಟ್ವೀಟರ್‌ನಲ್ಲಿ ಬರೆದುಕೊಂಡಿದ್ದಾಳೆ.  ಜನವರಿ 5 ರಂದು ಘಟನೆ ನಡೆದಿರುವ ಬಗ್ಗೆ ಉಲ್ಲೇಖಿಸಿದ್ದಾಳೆ. ಮಹಾದೇವಪುರ ಪೊಲೀಸ್ ಠಾಣೆಗೆ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು ಸೂಚನೆ ನೀಡಿದ್ದಾರೆ. 

Follow Us:
Download App:
  • android
  • ios