ಬೆಂಗಳೂರು(ಜು. 20) ಈತ ಅಂತಿಂಥ ಆಸಾಮಿ ಅಲ್ಲ,  ಎರಡು ಎಂಗೆಜ್ ಮೆಂಟ್ ಮಾಡಿಕೊಂಡು ಹತ್ತಕ್ಕೂ ಹೆಚ್ಚು ಗರ್ಲ್ ಫ್ರೆಂಡ್ಸ್ ಮೆಂಟೇನ್ ಮಾಡ್ತಿದ್ದ ಭೂಪ ಪೊಲೀಸ್ ಬಲೆಗೆ ಬಿದ್ದಿದ್ದಾನೆ. ದುಡ್ಡಿರುವ ವಿಚ್ಚೇದಿತ ಮಹಿಳೆಯರೇ ಇವನ ಟಾರ್ಗೆಟ್!

ಬನಶಂಕರಿ ಪೊಲೀಸರು ಆರೋಪಿ ಮಹೇಶ್ ಅಲಿಯಾಸ್ ಜಗನ್ನಾಥ್  ಎಂಬಾತನನ್ನು ಬಂಧಿಸಿದ್ದಾರೆ. ವಿಚ್ಚೇದಿತ ಮಹಿಳೆಯೊಬ್ಬರು ದೂರಿನ ತನಿಖೆ ವೇಳೆ ಮಹೇಶ್ ಅಸಲಿ ಬಂಡವಾಳ ಬಯಲಾಗಿದೆ. ಮ್ಯಾಟ್ರಿಮೋನಿಯಲ್ಲಿ ವಿಚ್ಚೇದಿತ ಮಹಿಳೆಯರನ್ನ ಪರಿಚಯ ಮಾಡಿಕೊಳ್ತಿದ್ದ ಭೂಪ  ಬಾಳು ಕೊಡುವುದಾಗಿ ನಂಬಿಸಿ ಲಕ್ಷ ಲಕ್ಷ ರೂ. ವಂಚನೆ ಮಾಡುತ್ತಿದ್ದ.

ಮದುವೆಯಾಗುವುದಾಗಿ ನಂಬಿಸಿ ಉಂಡು ಹೋದ ಹೋದ, ಕೊಂಡು ಹೋದ

ಸೈಟ್ ತೆಗೆದುಕೊಳ್ಳಬೇಕು ಎಂದು ಪುಸಲಾಯಿಸಿ ಏಳು ಲಕ್ಷಕ್ಕೆ  ಬೇಡಿಕೆ ಇಟ್ಟಿದ್ದ ಆರೋಪಿ ಈಗ ಸೆರೆಯಾಗಿದ್ದಾನೆ. ಆರೋಪಿ ಮಾತಿಗೆ ಮರುಳಾಗಿ ಮಹಿಳೆ ಏಳು ಲಕ್ಷ  ರೂ. ನೀಡಿದ್ದರು. ಇದೇ ರೀತಿ ಹತ್ತಕ್ಕೂ ಹೆಚ್ಚು ವಿಚ್ಚೇದಿತ ಮಹಿಳೆಯರನ್ನ ವಂಚಿಸಿ 25 ಲಕ್ಷಕ್ಕೂ ಹೆಚ್ಚು ಹಣ ವಂಚನೆ ಮಾಡಿದ್ದು ಬೆಳಕಿಗೆ ಬಂದಿದೆ.

ಐದು ಮಂದಿ ಮಹಿಳೆಯರಿಗೆ ಮದುವೆಯಾಗುವುದಾಗಿ ನಂಬಿಸಿ ದೈಹಿಕ‌ ಸಂಪರ್ಕ ಬೆಳೆಸಿ ಅವರಿಗೂ ವಂಚಿಸಿದ್ದ. ಹಾಸನ, ವಿಜಯಪುರ ,ಬೆಂಗಳೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ಮಹಿಳೆಯರಿಗೆ ವಂಚನೆ ಮಾಡಿದ್ದ ಚಾಲಾಕಿ.  ಆರೋಪಿಯಿಂದ ಆರು ಲಕ್ಷ ಬೆಲೆ ಬಾಳುವ ಕಾರು, ಎರಡು ಮೊಬೈಲ್, 25 ಸಿಮ್ ಕಾರ್ಡ್, 22 ಎಟಿಎಂ ಕಾರ್ಡ್,ಮೂರು ಪಾನ್ ಕಾರ್ಡ್, ಮೂರು ಓಟರ್ ಐಡಿ,   ಆಧಾರ್ ಕಾರ್ಡ್,ಪಾಸ್ ಬುಕ್  ವಶಕ್ಕೆ ಪಡೆಯಲಾಗಿದೆ.

ಇದೇ ರೀತಿ ಹಾಸನದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಎಂದು ಪರಿಚಯಿಸಿಕೊಂಡು ಎಂಗೇಜ್ ಮೆಂಟ್ ಆಗಿದ್ದ ಭೂಪ ಇದೀಗ ಪೊಲೀಸರ ವಶದಲ್ಲಿ ಇದ್ದಾನೆ.