ಗರ್ಲ್‌ಫ್ರೆಂಡ್ ಕಾಲ್ ಬ್ಲಾಕ್ ಮಾಡಿದ್ದಾಳೆ. ಆಕೆಯನ್ನು ಸಂಪರ್ಕಿಸಲು ಬೇರೆ ಯಾವುದೇ ದಾರಿಗಳಿರಲಿಲ್ಲ. ಹೀಗಾಗಿ 265 ಕಿಲೋಮೀಟರ್ ದೂರ ಪ್ರಯಾಣಿಸಿ ಗೆಳತಿಯ ಕಾಲೇಜಿಗೆ ತೆರಳಿದ್ದಾನೆ. ಬಳಿಕ ಪೆಟ್ರೋಲ್ ಸುರಿದು ಗೆಳತಿಯ ಬೆದರಿಸುವ ಪ್ರಯತ್ನ ಮಾಡಿದ್ದಾನೆ. ಆದರೆ ಆಗಿದ್ದು ಮಾತ್ರ ಬೇರೆ
ಕಾನ್ಪುರ(ಜೂ.23) ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಎರಡು ದಿನಗಳ ಹಿಂದೆ ಸಣ್ಣ ವಿಚಾರಕ್ಕೆ ಜಗಳವಾಗಿದೆ. ಇತ್ತ ಗೆಳತಿ ಮರಳಿ ಕಾಲೇಜಿಗೆ ತೆರಳಿ, ಗೆಳೆಯನ ಕರೆ ಬ್ಲಾಕ್ ಮಾಡಿದ್ದಾಳೆ. ಹಲವು ಬಾರಿ ಪ್ರಯತ್ನಿಸಿ ಸಂಪರ್ಕ ಸಾಧ್ಯವಾಗದಾಗ, ನೇರವಾಗಿ ಆಕೆಯ ಕಾಲೇಜಿಗೆ ತೆರಳಿ ಹೈಡ್ರಾಮಾ ಮಾಡಿದ್ದಾನೆ. ಕಾಲೇಜಿನ 4ನೇ ಮಹಡಿಗೆ ತೆರಳಿ ಪೆಟ್ರೋಲ್ ಸುರಿದು ಬದುಕು ಅಂತ್ಯಗೊಳಿಸುವ ಬೆದರಿಕೆ ಹಾಕಿದ್ದಾನೆ. ಆದರೆ ಈತನ ಹೈಡ್ರಾಮ ಪೊಲೀಸರು ಬಂಧನದೊಂದಿಗೆ ಅಂತ್ಯಗೊಂಡಿದೆ.
ಕಾನ್ಪುರದ ಯೋಗೇಶ್ 9ನೇ ತರಗತಿಯಿಂದ ಆಕೆಯನ್ನು ಪ್ರೀತಿಸುತ್ತಿದ್ದಾನೆ. ಯೋಗೇಶ್ ಕುಟುಂಬ ಹಾಗೂ ಇತರ ಕಾರಣಗಳಿಂದ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗಿಲ್ಲ. ಆದರೆ ಗೆಳತಿ ವಿದ್ಯಾಭ್ಯಾಸ ಮುಂದುವರಿಸಿದ್ದಳು. ಇವರಿಬ್ಬರ ಪ್ರೀತಿ ಮುಂದುವರಿದಿತ್ತು. ಕೆಲ ದಿನಗಳ ಹಿಂದೆ ಇವರಿಬ್ಬರ ನಡುವೆ ಜಗಳವಾಗಿದೆ. ಈ ವೇಲೆ ಗೆಳತಿಯ ಕಪಾಳಕ್ಕೆ ಭಾರಿಸಿದ್ದಾನೆ. ಇದರಿಂದ ಗೆಳತಿ ತೀವ್ರ ಆಕ್ರೋಶಗೊಂಡಿದ್ದಾಳೆ.
ಕೋಪಗೊಂಡ ಗೆಳತಿ ಮರು ಮಾತು ಆಡದೇ ಕಾನ್ಪುರದಿಂದ ರಾಯಬರೇಲಿಗೆ ತೆರಳಿದ್ದಾರೆ. ಕಾಲೇಜು ಆಗಮಿಸಿದ ಬೆನ್ನಲ್ಲೇ ಗೆಳತಿ ತನ್ನ ಬಾಯ್‌ಪ್ರೆಂಡ್ ಕರೆ ಬ್ಲಾಕ್ ಮಾಡಿದ್ದಾಳೆ. ಇತ್ತ ಸತತ ಕರೆ ಮಾಡಿದರೂ ಗೆಳತಿಯನ್ನು ಸಂಪರ್ಕಿಸಲು ಯೋಗೇಶ್‌ಗೆ ಸಾಧ್ಯವಾಗಿಲ್ಲ. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಯೋಗೇಶ್, ಬರೋಬ್ಬರಿ 265 ಕಿಲೋಮೀಟರ್ ಪ್ರಯಾಣಿಸಿ ಕಾಲೇಜು ತಲುಪಿದ್ದಾನೆ.
ಕಾಲೇಜಿನ 4ನೇ ಮಹಡಿಗೆ ತೆರಳಿ ಗೆಳತಿಯನ್ನು ತರಗತಿಯಿಂದ ಹೊರಬರಲು ಸೂಚಿಸಿದ್ದಾನೆ. ಬಳಿಕ ತನ್ನ ಮೇಲೆ ಪೆಟ್ರೋಲ್ ಸುರಿದು ಬದುಕು ಅಂತ್ಯಗೊಳಿಸುವ ಬೆದರಿಕೆ ಹಾಕಿದ್ದಾನೆ. ಈ ವೇಳೆ ಕಾಲೇಜಿನ ವಿದ್ಯಾರ್ಥಿಗಳು ಸೇರಿ ಯೋಗೇಶನನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಯೋಗೇಶನ್ ವಶಕ್ಕೆ ಪಡೆದಿದ್ದಾರೆ.
