ರೈಲು ಹಾಗೂ ಐಷಾರಾಮಿ ಬಸ್ಸುಗಳಲ್ಲಿ ಸಾಮಾನು ಕಳ್ಳತನ ಹೆಚ್ಚುತ್ತಿದೆ. ಒಂಟಿ ಪ್ರಯಾಣಿಕರು, ವಿಶೇಷವಾಗಿ ರಾತ್ರಿ ವೇಳೆ, ಬಾತ್‌ರೂಮ್ ಅಥವಾ ನಿಲ್ದಾಣಗಳಲ್ಲಿ ಇಳಿಯುವಾಗ ಎಚ್ಚರಿಕೆ ವಹಿಸಬೇಕು. ಬೆಂಗಳೂರು-ಕೊಯಮತ್ತೂರು ಬಸ್ಸಿನಲ್ಲಿ ಲ್ಯಾಪ್‌ಟಾಪ್‌ಗಳು ಕಳುವಾದ ಸಿಸಿಟಿವಿ ದೃಶ್ಯ ವೈರಲ್ ಆಗಿದೆ. ಪ್ರಯಾಣಿಕರು ಸಾಮಾನುಗಳನ್ನು ಜೊತೆಗಿರಿಸಿಕೊಳ್ಳುವುದು ಅಥವಾ ವಿಶ್ವಾಸಾರ್ಹ ವ್ಯಕ್ತಿಗಳ ಹತ್ತಿರ ಇಡುವುದು ಸೂಕ್ತ.

 ಹೆಚ್ಚಾಗಿ ರೈಲುಗಳಲ್ಲಿ ಪ್ರಯಾಣಿಸುವ ಸಂದರ್ಭಗಳಲ್ಲಿ ಕಳ್ಳತನ ಆಗುವ ಉದಾಹರಣೆಗಳು ಸಾಕಷ್ಟಿವೆ. ಅದರಲ್ಲಿಯೂ ಒಂಟಿಯಾಗಿ ಪ್ರಯಾಣಿಸುವಾಗ, ರಾತ್ರಿಯ ರೈಲಿನಲ್ಲಿ ಪ್ರಯಾಣಿಸುವ ಸಂದರ್ಭಗಳಲ್ಲಿ ಬ್ಯಾಗ್​ ಇತ್ಯಾದಿಗಳನ್ನು ಬಿಟ್ಟು ಬಾತ್​ರೂಮಿಗೆ ಹೋಗುವ ಸಂದರ್ಭಗಳಲ್ಲಿ ಇಲ್ಲವೇ ಯಾವುದಾದರು ಸ್ಟೇಷನ್​ನಲ್ಲಿ ರೈಲು ನಿಲ್ಲಿಸಿದಾಗ, ಅಲ್ಲಿ ಇಳಿದು ಹೋದ ಸಂದರ್ಭಗಳಲ್ಲಿ ಬ್ಯಾಗ್​ ಕಳ್ಳತನ ಆಗುವ ಉದಾಹರಣೆಗಳು ಸಾಕಷ್ಟಿವೆ. ಇದೇ ಕಾರಣಕ್ಕೆ ಒಂಟಿಯಾಗಿ ಪ್ರಯಾಣಿಸುವಾಗ, ಹೀಗೆ ಹೋಗುವ ಅನಿವಾರ್ಯತೆ ಉಂಟಾದರೆ ಸಹ ಪ್ರಯಾಣಿಕರ ಗಮನಕ್ಕೆ ತಂದು ಹೋಗುವಂತೆ ಎಚ್ಚರಿಕೆ ನೀಡಲಾಗುತ್ತದೆ. ಅಲ್ಲದೇ ವಾಷ್​ರೂಮ್​ಗೆ ಹೋಗುವಾಗ ರೈಲು ನಿಂತಾಗ ಹೋಗುವುದು ಬಹಳ ಡೇಂಜರ್​. ಇಂಥ ಸಂದರ್ಭಗಳಲ್ಲಿಯೇ ಖದೀಮರು ಬ್ಯಾಗ್ ಕದ್ದು ಸುಲಭದಲ್ಲಿ ತಪ್ಪಿಸಿಕೊಳ್ಳುತ್ತಾರೆ. ಆದ್ದರಿಂದ ಆದಷ್ಟು ರೈಲು ಚಲಿಸುತ್ತಿರುವಾಗ ಹೋಗುವಂತೆ ಹೇಳಲಾಗುತ್ತದೆ. ರೈಲು ನಿಂತಾಗ ಕೆಳಗಿಳಿದು ಹೋಗುವ ಅನಿವಾರ್ಯತೆ ಇದ್ದಲ್ಲಿ ಪಕ್ಕದಲ್ಲಿರುವವರಿಗೆ ಹೇಳಿ ಹೋದರೆ ಉತ್ತಮ.

ಇದು ರೈಲಿನ ಮಾತಾದರೆ, ಇದೀಗ ಐಷಾರಾಮಿ ಬಸ್​ ಒಂದರಲ್ಲಿ ಲ್ಯಾಪ್​ಟಾಪ್​ಗಳ ಕಳ್ಳತನವಾಗಿದ್ದು, ಬಸ್​ನಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಇದು ದಾಖಲಾಗಿದೆ. ಈ ಶಾಕಿಂಗ್​ ವಿಡಿಯೋ ಈಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಬೆಂಗಳೂರು-ಕೊಯಮತ್ತೂರಿನ ಬಸ್​ನಲ್ಲಿ ಈ ಘಟನೆ ನಡೆದಿದೆ. ಕೃಷ್ಣಗಿರಿಯ ಬಳಿ ಬಸ್ಸು ನಿಲ್ಲಿಸಿದಾಗ, ಪ್ರಯಾಣಿಕರು ಲ್ಯಾಪ್​ಟಾಪ್​ ಇರುವ ಬ್ಯಾಗ್​ ಅನ್ನು ಬಸ್ಸಿನಲ್ಲಿಯೇ ಬಿಟ್ಟು ಇಳಿದಿದ್ದಾರೆ. ಇದನ್ನೇ ಕಾಯುತ್ತಿದ್ದ ಕಳ್ಳನೊಬ್ಬ ಬಸ್​ ಏರಿ, ಹಲವು ಸೀಟುಗಳನ್ನು ತಡಕಾಡಿದ್ದಾನೆ. ಎಲ್ಲೆಲ್ಲಿ ಬ್ಯಾಗ್​ಗಳಿಗೆ ಅದನ್ನು ಎತ್ತಾಕಿಕೊಂಡು ಹೋಗಿದ್ದಾನೆ. ಅವೆಲ್ಲವೂ ಲ್ಯಾಪ್​ಟಾಪ್​ ಇರುವ ಬ್ಯಾಗ್​ ಎನ್ನಲಾಗಿದೆ. ಟೋಪಿ ಧರಿಸಿ ಬಂದಿರುವ ಈತ ತನ್ನ ಗುರುತನ್ನು ಮರೆಮಾಚಲು ನೋಡಿದರೂ ಸಿಸಿಟಿವಿಯಲ್ಲಿ ಆತನ ಮುಖವನ್ನು ಕಾಣಬಹುದಾಗಿದೆ. 

ನಸುಕಿನಲ್ಲಿ ಒಂಟಿಯಾಗಿ ವಾಕಿಂಗ್​ ಹೋಗ್ತೀರಾ? ಬೆಂಗಳೂರಿನ ಶಾಕಿಂಗ್ ಘಟನೆ ಸಿಸಿಟಿವಿಯಲ್ಲಿ ಸೆರೆ

ಇದರ ವಿಡಿಯೋ ವೈರಲ್​ ಆಗುತ್ತಲೇ ಹಲವರು ತಮಗಾಗಿರುವ ಅನುಭವವನ್ನೂ ಹಂಚಿಕೊಂಡಿದ್ದಾರೆ. ಬಾತ್​ರೂಮ್​ಗೆ ಹೋಗುವುದಿದ್ದರೂ ಇಂಥ ಬ್ಯಾಗ್​ಗಳನ್ನು ತೆಗೆದುಕೊಂಡು ಹೋಗಿ ಎಂದು ಕೆಲವರು ಹೇಳುತ್ತಿದ್ದರೆ, ಕೊನೆಯ ಪಕ್ಷ ಅಕ್ಕ-ಪಕ್ಕದಲ್ಲಿ ಯಾರಾದರೂ ಇದ್ದರೆ, ಅವರು ಕೆಳಕ್ಕೆ ಇಳಿಯದಿದ್ದರೆ ಅವರ ಬಳಿ ಇಂಥ ಬ್ಯಾಗ್​ಗಳನ್ನು ಇಟ್ಟು ಹೋಗಿ, ಇಲ್ಲವೇ ಅವರಿಗೆ ಹೇಳಿ ಹೋಗಿ ಎಂದು ಕೆಲವರು ಎಚ್ಚರಿಕೆ ನೀಡುತ್ತಿದ್ದಾರೆ. ರೆಸ್ಟ್​ರೂಮ್​ಗಳಿಗೆ, ಊಟಕ್ಕೆ ಹೋಗುವುದು ಅನಿವಾರ್ಯ ಆಗಿರುತ್ತದೆ. ಅಂಥ ಸಂದರ್ಭಗಳಲ್ಲಿ ಎಷ್ಟು ಎಚ್ಚರಿಕೆಯಿಂದ ಇರಬೇಕು ಎನ್ನುವುದನ್ನು ಈ ವೈರಲ್ ವಿಡಿಯೋ ತೋರಿಸಿಕೊಟ್ಟಿದೆ.

ಇಂಥ ಸಂದರ್ಭಗಳಲ್ಲಿ ಯಾರೇ ಬಂದು ಬ್ಯಾಗ್​ ತೆಗೆದುಕೊಂಡು ಹೋದರೂ, ಅದನ್ನು ಇತರ ಪ್ರಯಾಣಿಕರು ಗಮನಿಸಿದರೂ ಅವರಿಗೆ ಸಂಶಯ ಬರಲು ಸಾಧ್ಯವೇ ಇಲ್ಲ. ಏಕೆಂದರೆ ಇನ್ನೊಂದು ಸೀಟಿಯಲ್ಲಿ ಯಾರು ಮಲಗಿರುತ್ತಾರೆ ಎಂದು ಅವರಿಗೆ ಗೊತ್ತಿರುವುದಿಲ್ಲ. ಆದ್ದರಿಂದ ಕಳ್ಳರು ಯಾವುದೇ ಸಂದೇಹ ಬರದಂತೆ ತಮ್ಮದೇ ಬ್ಯಾಗ್​ ಅನ್ನುವ ರೀತಿಯಲ್ಲಿ, ಅದನ್ನು ಸಲೀಸಾಗಿ ತೆಗೆದುಕೊಂಡು ಹೋಗುತ್ತಾರೆ. 

ಬೆಂಗಳೂರು ಪಿಜಿಗೆ ನುಗ್ಗಿದ ಕಳ್ಳ ಮಾಡಿದ್ದೇನು? ಸಿಸಿಟಿವಿಯಲ್ಲಿ ಶಾಕಿಂಗ್​ ದೃಶ್ಯಗಳ ಸೆರೆ!

View post on Instagram