ಬೆಂಗಳೂರು(ಅ. 19) ಬೆಂಗಳೂರು ಪೊಲೀಸರು ಪದೇ ಪದೆ ಎಚ್ಚರಿಕೆ ನೀಡುತ್ತಲೇ ಇರುತ್ತಾರೆ. ಆದರೆ ಒಂದು ಕ್ಷಣ ನಾವೆಲ್ಲರೂ ತಾಳುವ ನಿರ್ಲಕ್ಷ್ಯ ಅಪಾಯವನ್ನು ಎದುರಿಗೆ ತಂದಿಡುತ್ತದೆ.

ರಸ್ತೆ ಬದಿಯಲ್ಲಿ ಮೊಬೈಲ್‌ನಲ್ಲಿ ಮಾತಾಡೋ ಯುವತಿಯರೇ ಹುಷಾರ್ ಎಂದು ಹೇಳಲೇಬೇಕಿದೆ ಸಿಲಿಕಾನ್ ಸಿಟಿಯಲ್ಲಿ  ಹಾಡಹಗಲೇ ಮೊಬೈಲ್ ಕಸಿದುಕೊಂಡು ಬೈಕ್ ಸವಾರ ನೋಡುನೋಡುತ್ತಿದ್ದಂತೆ ಪರಾರಿಯಾಗಿದ್ದಾನೆ.

ಕೋಟಿ ಚಿನ್ನ ಕದ್ದವ ಊರು ಸೇರುವ ಮುನ್ನ ಸಿಕ್ಕಿಬಿದ್ದ

ಮೊದಲು ಏರಿಯಾದ ಅಕ್ಕ ಪಕ್ಕದ ರಸ್ತೆಯನ್ನ ಗಮನಿಸೋ ಖರ್ತನಾಕ್ ಕಳ್ಳ  ನಂತರ ಮೊಬೈಲ್ ನಲ್ಲಿ ಒಬ್ಬಂಟಿಯಾಗಿ ರಸ್ತೆಬದಿ ಮಾತಾಡೊ ಯುವತಿಯನ್ನು ಟಾರ್ಗೆಟ್ ಮಾಡಿದ್ದಾನೆ. ನಂತರ ಮೊಬೈಲ್ ನಲ್ಲಿ ಮಗ್ನಳಾಗಿದ್ದ ಯುವತಿಯ ಮೊಬೈಲ್ ಎಗರಿಸಿ ಕ್ಷಣಾರ್ಧದಲ್ಲಿ ಎಸ್ಕೇಪ್ ಆಗಿದ್ದಾನೆ.

ನಂಬರ್ ಪ್ಲೇಟ್ ಇಲ್ಲದ  ಬೈಕ್ ನಲ್ಲಿ ಬಂದಿದ್ದ ಕಳ್ಳ ಕೃತ್ಯ ಎಸಗಿ ನೋಡ ನೋಡುತ್ತಿದ್ದಂತೆ ಜಾಗ ಖಾಲಿ ಮಾಡಿದ್ದಾನೆ. ಬೆಂಗಳೂರಿನ ಕೆಂಪಾಪುರದ ಗೋಪಾಲಪ್ಪ ಲೇಔಟ್ ನಲ್ಲಿ ಘಟನೆ ನಡೆದಿದ್ದು ಅಮೃತಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.