ಬೆಂಗಳೂರು(ಜ.12): ಪಾಗಲ್ ಪ್ರೇಮಿ ಪ್ರಿಯತಮೆ ಮೇಲೆ ಮನಸೊ ಇಚ್ಛೆ ಹಲ್ಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪ್ರೇಮಿ ಪ್ರೇಯಸಿ ಮೇಲೆ ಹಲ್ಲೆ ನಡೆಸಿದ ಘಟನೆ 
ಬೆಂಗಳೂರಿನ ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕಳೆದ ಮೂರು ವರ್ಷಗಳಿಂದ ಯುವತಿಯನ್ನು ಪ್ರೀತಿಸುತಿದ್ದ  ಮಂಜುನಾಥ ಕಳೆದ ವರ್ಷ ಆಗಸ್ಟ್ ನಿಂದ ಲವ್ ಬ್ರೇಕ್ ಅಪ್ ಅಗಿತ್ತು. ಮಂಜುನಾಥನನ್ನು  ಲವ್ ಮಾಡಲ್ಲಾ ಎಂದು ಯುವತಿ ತಿರಸ್ಕರಿಸಿದ್ದಳು.

ಫೋನ್‌ ಉಳಿಸಿಕೊಳ್ಳಲು ಹೋಗಿ ಬಾವಿಗೆ ಬಿದ್ದ ನಟಿ ನಮಿತಾ?

ಬಳಿಕ ಯುವತಿ ಯುವಕನ ಜೊತೆ ಸಂಪರ್ಕ ಕಡಿತಗೊಳಿಸಿದ್ದಳು. ಹಲವಾರು ಬಾರಿ ಬೇರೆ ಬೇರೆ ಫೋನ್ ನಂಬರ್ ನಿಂದ ಕರೆ ಮಾಡಿ ಹಿಂಸೆ ನೀಡ್ತಿದ್ದ  ಮಂಜುನಾಥ್ 
ಕಳೆದ ಹದಿನೈದು ದಿನದ ಹಿಂದೆ ಯುವತಿ ಮನೆ ಬಳಿ ಬಂದು ಗಲಾಟೆ ಮಾಡಿದ್ದ.

ಮನೆಗೆ ಬಂದ ಯುವತಿಗೆ ಲೈಂಗಿಕ ದೌರ್ಜನ್ಯ  ಎಸಗಿ ಸ್ಕ್ರೂ ಡ್ರೈವರ್ ನಿಂದ ಹಲ್ಲೆ ಮಾಡಿದ್ದಾನೆ. ಮುಖ, ಹೊಟ್ಟೆ, ತಲೆ, ಕೈ ಗೆ ಸ್ಕ್ರೂ ಡ್ರೈವರ್ ನಿಂದ ಚುಚ್ಚಿ ಹಲ್ಲೆ ನಡೆಸಲಾಗಿದೆ.  ಕಾಮಾಕ್ಷಿ ಪಾಳ್ಯ ಪೊಲೀಸರಿಗೆ ಯುವತಿ ದೂರು ನೀಡಿದ್ದಾರೆ. ಪ್ರೇಯಸಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಮನಸೋ ಇಚ್ಛೆ ಸ್ಕ್ರೂ ಡ್ರೈವರ್ ನಿಂದ ಚುಚ್ಚಿದ ಪಾಗಲ್ ಪ್ರೇಮಿಯನ್ನು ಕಾಮಾಕ್ಷಿ ಪಾಳ್ಯ ಪೊಲೀಸರು ಬಂಧಿಸಿದ್ದಾರೆ.