ಬಾಲ್ಯದಲ್ಲೇ ಅನಾಥವಾಗಿ ಬಿಟ್ಟು ಹೋದವರ ಮೇಲಿನ ದ್ವೇಷ ಸಾಧನೆಗೆ ಬ್ಯಾಂಕ್ ಲೂಟಿ
* ಬ್ಯಾಂಕ್ ದರೋಡೆ ಮಾಡಿದ ಕಳ್ಳರ ಐಷಾರಾಮಿ ಬದುಕು
* ಹೆತ್ತವರಿಗೆ ದುಬಾರಿ ಗಿಫ್ಟ್ ತಂದುಕೊಟ್ಟವ ಒಬ್ಬ
* ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿ ಬೇರೆ ರಾಜ್ಯಕ್ಕೆ ಪಲಾಯನ ಮಾಡುವರಿದ್ದರು
* ಬಾಲ್ಯದಲ್ಲಿ ಬಿಟ್ಟುಹೋದ ತಂದೆ-ತಾಯಿ ಮೇಲೆ ಹಗೆ ಸಾಧಿಸಲು ಕಳ್ಳತನ
ನಾಗಪುರ(ಜೂ. 27) ಮಹಾರಾಷ್ಟ್ರದ 18 ವರ್ಷದ ಯುವಕನೊಬ್ಬ ಬ್ಯಾಂಕ್ ದರೋಡೆ ಮಾಡಿದ್ದು ಅಲ್ಲದೆ ಅದೇ ಹಣದಲ್ಲಿ ತನ್ನ ಪಾಲಕರಿಗೆ ಭರ್ಜರಿ ಗಿಫ್ಟ್ ನೀಡಿದ್ದಾನೆ.
ಕಳ್ಳತನ ಮಾಡಿದ ಯುವಕ ತನ್ನ ತಾಯಿಗೆ 50,000 ರೂ. ಆಭರಣ ನೀಡಿದರೆ ತಂದೆಗೆ 40,000 ರೂ.ಗಳ ಸೆಕೆಂಡ್ ಹ್ಯಾಂಡ್ ಕಾರನ್ನು ನೀಡಿದ್ದಾನೆ ಇಂದಿರಾ ಗಾಂಧಿ ನಗರದ ಬಾರನಾಲ್ ಚೌಕದಲ್ಲಿರುವ ಸಹಕಾರಿ ಬ್ಯಾಂಕನ್ನು ಆರೋಪಿ ದರೋಡೆ ಮಾಡಿದ್ದ.
ದರೋಡೆ ಮಾಡಿದ್ದ ಯುವಕನನ್ನು 18 ವರ್ಷದ ಅಜಯ್ ಬಂಜಾರೆ ಎಂದು ಗುರುತಿಸಲಾಗಿದೆ. ಬಂಜಾರೆ ಮತ್ತು ಅವರ ಸಹಚರ ಪ್ರದೀಪ್ ಠಾಕೂರ್ ಸೇರಿ ಬ್ಯಾಂಕಿನಿಂದ 4.78 ಲಕ್ಷ ರೂ.ಗಿಂತ ಹೆಚ್ಚು ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ದರೋಡೆ ಮಾಡಿದ್ದರು. ಒಟ್ಟಿಗೆ ಕೆಲಸ ಮಾಡುತ್ತಿದ್ದ ಇಬ್ಬರು ಸೇರಿ ದರೋಡೆಗೆ ಇಳಿದಿದ್ದರು.
ನೂರು ರೂಪಾಯಿಗೆ ಮಾಜಿ ಕುಲಪತಿ ಹತ್ಯೆ
ವರದಿಯ ಪ್ರಕಾರ, ಠಾಕೂರ್ ಮತ್ತು ಬಂಜಾರೆ ಹಲವಾರು ವರ್ಷಗಳಿಂದ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಒಬ್ಬ ವ್ಯಕ್ತಿಗೆ ತನ್ನ ತಂದೆ -ತಾಯಿಯನ್ನು ಇಂಪ್ರೆಸ್ ಮಾಡಲು ಮುಂದಾಗಿದ್ದರೆ ಇನ್ನೊಬ್ಬ ತನ್ನ ದ್ವೇಷ ಸಾಧನೆಗೆ ಹಣ ಹೊಂದಿಸುತ್ತಿದ್ದ. ದೀಪ್ ಠಾಕೂರ್ ಅಪರಾಧ ಲೋಕಕ್ಕೆ ಇಳಿಯಲು ಮುಂದಾಗಿದ್ದು ಬಾಲ್ಯದಲ್ಲೇ ತನ್ನ ಬಿಟ್ಟು ಹೋದ ತಂದೆ-ತಾಯಿ ಹುಡುಕಿ ಅವರ ಮೇಲೆ ದ್ವೇಷ ಸಾಧಿಸಬೇಕು ಎಂದುಕೊಂಡಿದ್ದ.
ಹಣ ಕದ್ದವರು ದುಬಾರಿ ಪೋನ್ ಗಳನ್ನು ಖರೀದಿ ಮಾಡಿದ್ದರು. ಇನ್ನೊಂದು ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿ ರಾಜಸ್ಥಾನದ ಕಡೆ ಪರಾರಿಯಾಗಲು ಯತ್ನಿಸುತ್ತಿದ್ದರು.