Asianet Suvarna News Asianet Suvarna News

ಜೈಲಿನಿಂದ ರಿಲೀಸ್ ಆಗಿ ಕುಟುಂಬ ಜೊತೆ ಹೊರಟ ಬೆನ್ನಲ್ಲೇ ಅಪಘಾತ, ತಂದೆ ಮಗಳು ಇಬ್ಬರು ಸಾವು!

ಬರೋಬ್ಬರಿ 9 ವರ್ಷದ ಬಳಿಕ ಜೈಲಿನಿಂದ ಬಿಡುಗಡೆಯಾಗಿದ್ದ. ಬಿಡುಗಡೆ ವೇಳೆ ಪುತ್ರಿ ಹಾಗೂ ಪತ್ನಿ ಆಗಮಿಸಿದ್ದಾರೆ. ಬಳಿಕ ಆಟೋ ರಿಕ್ಷಾದಲ್ಲಿ ಹೊರಟ ಮೂವರ ಮೇಲೆ ಯಮನಾಗಿ ಬಂದ ಕಾರು ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಬಿಡುಗಡೆಯಾದ ವ್ಯಕ್ತಿ ಹಾಗೂ ಆತನ ಪುತ್ರಿ ಮೃತಪಟ್ಟಿದ್ದಾರೆ.

Man release from jail and dies along with daughter in accident while return to home ckm
Author
First Published Sep 13, 2024, 9:56 PM IST | Last Updated Sep 13, 2024, 9:56 PM IST

ಲಖನೌ(ಸೆ.13) ಕೊಲೆ ಆರೋಪದಡಿ ಜೈಲು ಸೇರಿದ್ದ ವ್ಯಕ್ತಿ ಬರೋಬ್ಬರಿ 9 ವರ್ಷ ಶಿಕ್ಷೆ ಅನುಭವಿಸಿದ್ದ. ಕೊನೆಗೂ ಬಿಡುಗೆಡೆಯಾದ ಕನೌಜ್ ನಿವಾಸಿ ವಿಜಯ್ ಕುಮಾರ್ ಹೊಸ ಬದುಕು ಆರಂಭಿಸಲು ನಿರ್ಧರಿಸಿದ್ದ. ಬಿಡುಗಡೆ ವೇಳೆ ಜೈಲಿನ ಬಳಿಕ ಆತನ ಪುತ್ರಿ ಹಾಗೂ ಪತ್ನಿ ಇಬ್ಬರು ಆಗಮಿಸಿದ್ದರು. ಬಳಿಕ ಮೂವರು ಆಟೋ ರಿಕ್ಷಾ ಮೂಲಕ ಮನೆಗೆ ತೆರಳಿದ್ದಾರೆ. ಆದರೆ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಮೂವರು ಸಂಚರಿಸುತ್ತಿದ್ದ ಆಟೋ ಮೇಲೆ ವೇಗವಾಗಿ ಬಂದ ಕಾರು ಡಿಕ್ಕಿಯಾಗಿದೆ. ಪರಿಣಾಮ ತಂದೆ ಹಾಗೂ ಮಗಳು ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಪತ್ನಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ದಾಖಲಾಗಿರುವ ಘಟನೆ ಉತ್ತರ ಪ್ರದೇಶದ ತಾಲಗ್ರಾಮ್ ಬಳಿ ನಡೆದಿದೆ.

ಕೊಲ ಆರೋಪಡಿ 9 ವರ್ಷಗಳ ಹಿಂದೆ ವಿಜಯ್ ಕುಮಾರ್ ಜೈಲು ಸೇರಿದ್ದ. ಈತನ ಜಾಮೀನಿನ ಮೇಲೆ ಬಿಡಿಸಲು ಕುಟುಂಬ ಬಳಿ ಹಣವಿರಲಿಲ್ಲ. ಹೀಗಾಗಿ ಜೈಲು ಶಿಕ್ಷೆಯಲ್ಲದೇ ಬೇರೆ ದಾರಿ ಇರಲಿಲ್ಲ. ಬರೋಬ್ಬರಿ 9 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ವಿಜಯ್ ಕುಮಾರ್ ಇದೀಗ ಬಿಡುಗಡೆಯಾಗಿದ್ದ. 

ವಿಜಯ್ ಕುಮಾರ್ ಬಿಡುಗಡೆ ವೇಳೆ ಪತ್ನಿ ಹಾಗೂ ಪುತ್ರಿ ಇಬ್ಬರು ಜೈಲಿನ ಬಳಿ ಆಗಮಿಸಿದ್ದರು. ಜೈಲಿನಿಂದ ಬಿಡುಗಡೆಯಾಗಿ ಹೊರಬರುತ್ತಿದ್ದಂತೆ ಪತ್ನಿ ಹಾಗೂ ಪುತ್ರಿಯನ್ನು ನೋಡಿ ವಿಜಯ್ ಕುಮಾರ್ ಭಾವುಕರಾಗಿದ್ದರು. ಜೈಲಿನ ಹೊರಭಾಗದಲ್ಲಿ ಮೂವರು ಭಾವುಕರಾಗಿದ್ದರು. ಈ ವೇಳೆ ಹೊಸ ಬದುಕು ಆರಂಭಿಸಬೇಕು. ನಮ್ಮ ಕಷ್ಟದ ದಿನಗಳು ಮುಗಿದಿದೆ. ನಾವು ಮೂವರು ಸುಂದರ ಬದುಕು ಕಟ್ಟಬೇಕು ಎಂದು ವಿಜಯ್ ಕುಮಾರ್ ಹೇಳಿದ್ದರು. 

ತಂದೆಯ ಪ್ರೀತಿ ಇಲ್ಲದೆ ಬೆಳೆದ ಮಗಳು ಕಣ್ಣೀರಾಗಿದ್ದಳು. ತಂದೆ ಸಿಕ್ಕ ಖುಷಿಯಲ್ಲಿ ತೇಲಾಡಿದ್ದಳು. ಬಳಿಕ ಆಟೋ ರಿಕ್ಷಾ ಹಿಡಿದು ಮನೆಗೆ ತೆರಳು ನಿರ್ಧರಿಸಿದ್ದಾರೆ. ರಿಕ್ಷಾ ಹತ್ತಿ ಪ್ರಯಾಣ ಆರಂಭಿಸಿದ್ದಾರೆ. ಆಗ್ರಾ ಲಖನೌ ಎಕ್ಸ್‌‌ಪ್ರೆಸ್ ವೇ ಮೂಲಕ ಆಟೋ ರಿಕ್ಷಾ ಸಾಗಿದೆ. ಆದರೆ ತಾಲಗ್ರಾಮ್ ಬಳಿ ಬರುತ್ತಿದ್ದಂತೆ ಹಿಂಬದಿಯಿಂದ ಬಂದ ಅತೀ ವೇಗದ ಕಾರು ರಿಕ್ಷಾಗೆ ಡಿಕ್ಕಿಯಾಗಿದೆ. ಇದರ ಪರಿಣಾಮ ರಿಕ್ಷಾದಲ್ಲಿದ್ದ ವಿಜಯ್ ಕುಮಾರ್ ಹಾಗೂ ಆತನ ಪುತ್ರಿ ಇಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದಾರೆ.

ಗಂಭೀರವಾಗಿ ಗಾಯಗೊಂಡ ವಿಜಯ್ ಕುಮಾರ್ ಪತ್ನಿಯನ್ನು ಆಸ್ಪತ್ರೆ ದಾಖಲಿಸಲಾಗಿದೆ. ವಿಜಯ್ ಕುಮಾರ್ ಪತ್ನಿ ಸ್ಥಿತಿ ಗಂಭೀರವಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ವಿಜಯ್ ಕುಮಾರ್ ಆಪ್ತ ಕುಟುಂಬ ಸದಸ್ಯರು ಸ್ಥಳಕ್ಕೆ ಆಗಮಿಸಿದ್ದಾರೆ. ಇತ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಉದ್ದೇಶಪೂರ್ವಕವಾಗಿ ನಡೆಸಿದ ಅಪಘಾತವೇ ಅನ್ನೋದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೊಸ ಬದುಕು ಕಟ್ಟಿಕೊಳ್ಳಲು ಬಯಸಿದ್ದ ವಿಜಯ್ ಕುಮಾರ್ ದುರಂತ ಅಂತ್ಯಗೊಂಡರೆ, ಆತನ ಪುತ್ರಿ ತಂದೆ ಪ್ರೀತಿ,ವಾತ್ಸಲ್ಯದ ಜೊತೆ ಮುನ್ನಡೆಯಲು ಬಯಸಿ ಮೃತಪಟ್ಟಿದ್ದಾಳೆ. 
 

Latest Videos
Follow Us:
Download App:
  • android
  • ios