ಕೂಡ್ಲಿಗಿ(ಮೇ.02): ಮನೆಯಲ್ಲಿ ಯಾರು ಇಲ್ಲದೆ ವೇಳೆ ಅದೇ ಊರಿನ ವ್ಯಕ್ತಿಯೋರ್ವ ಮಹಿಳೆ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿರುವ ಘಟನೆ ತಾಲೂಕಿನ ನಾಗಲಾಪುರದಲ್ಲಿ ಏ. 26ರಂದು ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. 

ಈ ಕುರಿತು ನೊಂದ ಮಹಿಳೆ ಶುಕ್ರವಾರ ಕೂಡ್ಲಿಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

13ರ ಬಾಲಕಿ ಮೇಲೆ ಅತ್ಯಾಚಾರ : ಅರೆಸ್ಟ್ ಆದವಗೆ ಕೊರೋನಾ ಪಾಸಿಟಿವ್

ಏ. 26ರಂದು ಮನೆಯಲ್ಲಿ ಯಾರು ಇಲ್ಲದ ವೇಳೆ ರಾಜು ಎಂಬುವರು ಮನೆಗೆ ಬಂದು ಬಾಗಿಲು ಹಾಕಿ ಬಾಯಿಗೆ ಕರ್ಚಿಪ್‌ ಕಟ್ಟಿ ಅತ್ಯಾಚಾರ ಮಾಡಿದ್ದಾನೆ. ಆಗ ಪಕ್ಕದ ಮನೆಯಲ್ಲಿದ್ದ ಅತ್ತೆ ಮಾವ ಹಾಗೂ ಇತರರು ಬಂದಾಗ ಆರೋಪಿ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿಯು ತಲೆಮರೆಸಿಕೊಂಡಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.