ಬೆಂಗಳೂರು( ಫೆ.  20)  ಪ್ರೇಮಿಗಳ ದಿನ ರಿಲಾಕ್ಸ್ ಮಾಡಿಕೊಳ್ಳೋಣ...ಬ್ಯಾಂಕಾಂಕ್ ಶೈಲಿಯ ಮಸಾಜ್ ಮಾಡಿಕೊಳ್ಳೋಣ ಎಂದು ಹೋದವ ಸಾಕಷ್ಟು ಹಣ ಕಳೆದುಕೊಂಡಿದ್ದಾನೆ.

ಬ್ಯಾಂಕಾಕ್ ಶೈಲಿಯ 'ಹ್ಯಾಪಿ ಎಂಡಿಂಗ್'  ಮಸಾಜ್ ಆಸೆಗೆ ಬಿದ್ದು ಹಣ  ಕಳೆದುಕೊಂಡಿದ್ದಾನೆ.  ನೈಫ್ ಪಾಯಿಂಟ್ ಕಾರಣಕ್ಕೆ  11 ಸಾವಿರ ರೂ. ಕಳೆದುಕೊಂಡು ಪೊಲೀಸರ ಮೊರೆ ಹೋಗಿದ್ದಾನೆ.

ಕಿರಣ್(41)  (ಹೆಸರು ಬದಲಾಯಿಸಲಾದೆ) ಬೆಂಗಳೂರಿನ ಕಾಕ್ಸ್ ಟೌನ್ ನಿವಾಸಿ.   ಮಸಾಜ್ ಪಾರ್ಲರ್ ಬಗ್ಗೆ ಆನ್ ಲೈನ್ ನಲ್ಲಿ ಸರ್ಚ್ ಮಾಡುತ್ತಿದ್ದಾಗ ಸಿಕ್ಕ ಸೈಟ್ ಒಂದಕ್ಕೆ ಕರೆ ಮಾಡಿದ್ದಾನೆ.  ಆ ಕಡೆಯಿಂದ ಮಹಿಳೆಯೊಬ್ಬರು ಕರೆ ಸ್ವೀಕಾರ ಮಾಡಿದ್ದು ಫೆಬ್ರವರಿ  14ಕ್ಕೆ ನಿಮ್ಮ ಮಸಾಜ್ ಬುಕ್ ಆಗಿದೆ.  3000 ಸಾವಿರ ರೂ. ಜಾರ್ಜ್ ಮಾಡುತ್ತೇವೆ ಎಂದು ಹೇಳಿ ಬುಕಿಂಗ್ ಐಡಿ ಕಳಿಸಿದ್ದಾರೆ.  ಫೆಬ್ರವರಿ 14 ರಂದು ಕಾಮನಹಳ್ಳಿಯಲ್ಲಿ ಸಂಜೆ 6 ಗಂಟೆಗೆ ಭೇಟಿ ಮಾಡಬಹುದು ಎಂದು ತಿಳಿಸಿದ್ದಾರೆ.

ಬಾಡಿ ಟು ಬಾಡಿ; ಗಂಡಸರ ವಿಕ್ನೇಸ್ ಇವರ ಬಂಡವಾಳ

ಹೇಳಿದ ಸಮಯಕ್ಕೆ ಕಿರಣ್ ಅಲ್ಲಿಗೆ ತಲುಪಿದಾಗ  ಶಶಾಂಕ್ ಚೌತಿ ಎಂಬಾತ ಕರೆ ಮಾಡಿ ಅಲ್ಲಿಂದ ಕಮ್ಮನಹಳ್ಳಿಯ ನಿರ್ಜನ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾನೆ.  ಮಸಾಜ್ ಕಾರಣಕ್ಕೆ 3,000 ರೂ. ಹಣವನ್ನು ವರ್ಗಾವಣೆ ಮಾಡಿಕೊಳ್ಳಲಾಗಿದೆ.  ಮೊದಲಿನ ಮೂರು ಮತ್ತೆ ಮೂರು ಸೇರಿ ಒಟ್ಟು ಆರು ಸಾವಿರ ಹಣವನ್ನು ವರ್ಗಾವಣೆ ಮಾಡಿದ್ದಾನೆ.

ಇದಾದ ಮೇಲೆ ಅಲ್ಲಿಗೆ ಆಟೋವೊಂದು ಬಂದಿದ್ದು ಅದರಲ್ಲಿ ಮೂವರು ಮಹಿಳೆಯರು ಇದ್ದರು. ನೀವು ಯಾವ ಮಹಿಳೆ ಬೇಕು ಅವರನ್ನು ಆಯ್ಕೆ ಮಾಡಿಕೊಳ್ಳಬಹುದು ಎಂಬ ಆಯ್ಕೆ ನೀಡಲಾಗಿದೆ.

ಆದರೆ ಇಲ್ಲಿಂದ ಕತೆ ಬೇರೆಯೇ ಆಗಿತ್ತು. ಮಸಾಜ್ ಮಾಡುವ ಬದಲು ಮಹಿಳೆಯರು ಕಿರಣ್ ನನ್ನು ಬೆದರಿಸಲು ಆರಂಭಿಸಿದ್ದಾರೆ.  ಹಣ ನೀಡದಿದ್ದರೆ ಕಿರುಚುತ್ತೇವೆ ಎಂದು ಹೆದರಿಸುತ್ತಾರೆ. ಹಣ ನೀಡು ಎಂದು ಬೆದರಿಕೆ ಹಾಕಿದಾಗ ಕಿರಣ್ 4,500 ರೂ.  ನೀಡುತ್ತಾರೆ.  ಕೈಯಲ್ಲಿದ್ದ ಐದು ನೂರು ರೂ. ವನ್ನು ಆಟೋ ಚಾಲಕನಿಗೆ ಕೊಟ್ಟು ಅಲ್ಲಿಂದ ಮನೆಗೆ ಓಡಿ ಬರುವ ಸ್ಥಿತಿ ನಿರ್ಮಾಣ ಆಗುತ್ತದೆ.

ಬಾಣಸವಾಡಿ ಪೊಲೀಸ್ ಠಾಣೆಗೆ ಹೋಗಿ ಈ ವಿಚಾರ ಹೇಳಿದರೆ ಪೊಲೀಸ್ ಅಧಿಕಾರಿಗಳು ಮೊದಲು ನಗುತ್ತಾರೆ. ಅಲ್ಲಿ ದೂರು ದಾಖಲು ಮಾಡಿಕೊಳ್ಳಲ್ಲ ಎಂದಾಗ ನಂತರ ಅಂತಿಮವಾಗಿ ಯುವಕ ಪೊಲೀಸ್ ಕಮಿಷನರ್ ಕಚೇರಿಗೆ ತೆರಳಿ  ದೂರು ನೀಡುತ್ತಾರೆ.  

ಬಾಡಿ ಟು ಬಾಡಿ.. ಹ್ಯಾಪಿ ಎಂಡಿಂಗ್ ಮಸಾಜ್ ಆಸೆಗೆ ಬಿದ್ದು ಯುವಕ ಹಣ  ಕಳೆದುಕೊಂಡಿದ್ದು ಒಂದು ಎಚ್ಚರಿಕೆ ಘಂಟೆಯಾಗಿದೆ.