ಬೆಂಗಳೂರು(ಮೇ.21): ಖಾಸಗಿ ಶಾಲೆಯೊಂದರ ವಿದ್ಯಾರ್ಥಿಗಳ ಪೋಷಕರ ನಂಬರ್‌ಗಳನ್ನು ಕದ್ದು ವಾಟ್ಸ್‌ಅಪ್‌ ಗ್ರೂಪ್‌ ರಚಿಸಿ ಆಶ್ಲೀಲ ವೆಬ್‌ಸೈಟ್‌ ಲಿಂಕ್‌ ಕಳುಹಿಸಿದ್ದ ಆರೋಪಿ ಪತ್ತೆಗೆ ಪಶ್ಚಿಮ ವಿಭಾಗದ ಸೈಬರ್‌ ಕ್ರೈಂ ಪೊಲೀಸರು ಬಲೆ ಬೀಸಿದ್ದಾರೆ.

ಈ ಕೃತ್ಯ ಎಸಗಲು ಆರೋಪಿ ನಾಲ್ಕು ಸಿಮ್‌ಗಳನ್ನು ಬಳಸಿದ್ದು, ಅವುಗಳು ಪಂಜಾಬ್‌, ಪಶ್ಚಿಮ ಬಂಗಾಳ ಹಾಗೂ ರಾಜಸ್ಥಾನ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಸಂಪರ್ಕ ಹೊಂದಿವೆ. ಆರೋಪಿಯ ಮೊಬೈಲ್‌ ಕರೆಗಳನ್ನು ಪರಿಶೀಲಿಸಿದಾಗ ಈ ಮಾಹಿತಿ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೊಬೈಲ್‌ ಸಿಬ್ಬಂದಿ ಸೋಗಲ್ಲಿ ಕಾನ್ಸ್‌ಟೇಬಲ್‌ಗೆ ಟೋಪಿ!

ಆದರೆ ಆರೋಪಿಗೆ ಪೋಷಕರ ಮೊಬೈಲ್‌ ಸಂಖ್ಯೆಗಳು ಹೇಗೆ ಲಭಿಸಿವೆ ಎಂಬುದು ಖಚಿತವಾಗಿಲ್ಲ. ಶಾಲೆ ಆಡಳಿತ ಮಂಡಳಿ ಆನ್‌ಲೈನ್‌ ಪಾಠಕ್ಕೆ ಮೊಬೈಲ್‌ ಸಂಖ್ಯೆಗಳನ್ನು ಪಡೆದಿದ್ದಾಗ ವೆಬ್‌ಸೈಟ್‌ ಹ್ಯಾಕ್‌ ಮಾಡಿರುವ ಶಂಕೆ ಇದೆ. ಈ ನಿಟ್ಟಿನಲ್ಲಿ ತನಿಖೆ ಮುಂದುವರೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಒಂದೇ ಶಾಲೆಯ ಪೋಷಕರು:

ಕೆಲ ದಿನಗಳ ಹಿಂದೆ ಕಿಡಿಗೇಡಿಯೊಬ್ಬ, ನಾಗರಬಾವಿ ಸಮೀಪದ ಪ್ರತಿಷ್ಠಿತ ಖಾಸಗಿ ಶಾಲೆಯ ವಿದ್ಯಾರ್ಥಿಗಳ ಪೋಷಕರ ಮೊಬೈಲ್‌ ಸಂಖ್ಯೆಗಳನ್ನು ಪಡೆದು ‘್ಛಜ್ಞಿd yಟ್ಠ್ಟ್ಝಟvಛಿ2083’ ವ್ಯಾಟ್ಸ್‌ ಆಪ್‌ ಗ್ರೂಪ್‌ ರಚಿಸಿದ್ದ. ಈ ಗ್ರೂಪ್‌ನಲ್ಲಿ ಆ ಶಾಲೆಯ ಒಂದು ಮತ್ತು ಎರಡನೇ ತರಗತಿಯ ಮಕ್ಕಳ ಸುಮಾರು 20 ಪೋಷಕರ ನಂಬರ್‌ಗಳನ್ನು ಸೇರಿಸಲಾಗಿತ್ತು. ಬಳಿಕ ದುಷ್ಕರ್ಮಿ, ಆ ಗ್ರೂಪ್‌ನಲ್ಲಿ ಆಶ್ಲೀಲ ವೆಬ್‌ಸೈಟ್‌ ಹಾಗೂ ಫೋಟೋಗಳನ್ನು ಹಂಚಿಕೊಂಡು ಕುಚೋದ್ಯತನ ಮಾಡಿದ್ದಾನೆ. ಈ ಲಿಂಕ್‌ ನೋಡಿ ಗಾಬರಿಗೊಂಡ ಪೋಷಕರೊಬ್ಬರು, ಪಶ್ಚಿಮ ವಿಭಾಗದ ಸೈಬರ್‌ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಒಡತಿಗೆ ಮದ್ಯ ಕುಡಿಸಿ ನೌಕರನಿಂದಲೇ ರೇಪ್‌!

ಅದರಂತೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಆ ಗ್ರೂಪ್‌ನಲ್ಲಿದ್ದ 24 ಸದಸ್ಯರ ಪೂರ್ವಾಪರ ಶೋಧಿಸಿದರು. ಆಗ ಮೊಬೈಲ್‌ ನಂಬರ್‌ಗಳನ್ನು ಪರಿಶೀಲಿಸಿದಾಗ ನಾಲ್ಕು ನಂಬರ್‌ಗಳ ಮೇಲೆ ಶಂಕೆ ಬಂದಿದೆ. ಅವುಗಳು ಬೇರೆ ಬೇರೆ ರಾಜ್ಯಗಳ ಸಂಪರ್ಕದಲ್ಲಿರುವುದು ಕರೆಗಳ ಪರಿಶೀಲನೆ ವೇಳೆ ಗೊತ್ತಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಆನ್‌ಲೈನ್‌ ಕ್ಲಾಸ್‌ ಸಲುವಾಗಿ ಮಕ್ಕಳು ಮೊಬೈಲ್‌ ಬಳಸುತ್ತಿದ್ದಾರೆ. ಹೀಗಿರುವಾಗ ವ್ಯಾಟ್ಸ್‌ಆಪ್‌ಗಳಲ್ಲಿ ಆಶ್ಲೀಲ ವಿಡಿಯೋ ಹಾಗೂ ಭಾವಚಿತ್ರ ಶೇರ್‌ ಆದರೆ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಇಂಥ ಕಿಡಿಗೇಡಿ ಕೃತ್ಯ ಎಸಗಿರುವ ತಪ್ಪಿತಸ್ಥನ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.