ಕಲ್ಲುಗಳಿಂದ ಜಜ್ಜಿ 60 ವರ್ಷದ ಮಹಿಳೆಯ ಕೊಂದು ಆಕೆಯ ಮುಖದ ಮಾಂಸ ತಿಂದ ವ್ಯಕ್ತಿ!
ಸಾಮಾನ್ಯವಾಗಿ ಅಪರಾಧಗಳು, ಕೊಲೆಗಳು ಆಗುತ್ತಲೇ ಇರುತ್ತವೆ. ಆದರೆ, ಒಮ್ಮೊಮ್ಮೆ ಕ್ರೈಂಗಳನ್ನು ನೋಡಿ ಇಂಥಾ ರೀತಿಯ ಕೃತ್ಯ ಮಾಡಲು ಸಾಧ್ಯವೇ ಅನ್ನೋವಷ್ಟು ಪೈಶಾಚಿಕವಾಗಿರುತ್ತದೆ. ಅಂಥದ್ದೇ ಪೈಶಾಚಿತ ಅಪರಾಧ ಪ್ರಕರಣದ ರಾಜಸ್ಥಾನದ ಪಾಲಿಯಲ್ಲಿ ನಡೆಯಲಿದೆ.
ನವದೆಹಲಿ (ಮೇ.27): ದೇಶಾದ್ಯಂತ ಅಪರಾಧಗಳ ಪ್ರಮಾಣ ಹೆಚ್ಚುತ್ತಿದೆ. ವ್ಯಕ್ತಿಯೊಬ್ಬ ಲಿವ್ ಇನ್ ಸಂಗಾತಿಯನ್ನು ಕೊಂದು ಆಕೆಯ ದೇಹವನ್ನು ತುಂಡರಿಸಿ ಬೇರೆ ಬೇರೆ ಕಡೆ ಎಸೆದಿರುವ ಘಟನೆ ಹೈದರಾಬಾದ್‌ನಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿದೆ. ಅದಕ್ಕೂ ಮುನ್ನ ದೆಹಲಿಯಲ್ಲಿ ಇದೇ ರೀತಿಯ ಪೈಶಾಚಿಕ ಘಟನೆ ನಡೆದಿತ್ತು. ಇದೀಗ ರಾಜಸ್ಥಾನದಲ್ಲಿ ಎಲ್ಲರನ್ನೂ ನಡುಗಿಸುವ ಘಟನೆಯೊಂದು ಮುನ್ನೆಲೆಗೆ ಬಂದಿದೆ. ಅರಣ್ಯದ ಬದಿಯಲ್ಲಿ ಮೇಕೆ ಮೇಯಿಸುತ್ತಿದ್ದ 60 ವರ್ಷದ ವಯಸ್ಸಿನ ಮಹಿಳೆಯನ್ನು ಕಲ್ಲು ಹೊಡೆದು ವ್ಯಕ್ತಿಯೊಬ್ಬ ಕೊಲೆ ಮಾಡಿದ್ದಾನೆ. ಆಕೆಯ ಮುಖವನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದ ವ್ಯಕ್ತಿ, ಆಕೆ ಸತ್ತ ಬಳಿಕ ಆಕೆಯ ಮುಖದ ಮಾಂಸ, ಕಣ್ಣುಗಳನ್ನು ತೆಗೆದು ತಿಂದಿದ್ದಾನೆ. ಸುರೇಂದ್ರ ಹೆಸರಿನ 24 ವರ್ಷದ ವ್ಯಕ್ತಿಯನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದ್ದು, ಆತ ಮುಂಬೈ ಮೂಲದ ವ್ಯಕ್ತಿ ಎಂದು ಹೇಳಲಾಗಿದೆ. ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ಈ ಪೈಶಾಚಿಕ ಘಟನೆ ನಡೆದಿದೆ. ಮಹಿಳೆಯ ಮುಖದ ಮಾಂಸವನ್ನು ತಿನ್ನುವಾಗಲೇ ಸ್ಥಳೀಯ ಗ್ರಾಮಸ್ಥರು ಇದನ್ನು ನೋಡಿದ್ದಾರೆ. ಗ್ರಾಮಸ್ಥರನ್ನು ಕಂಡೊಡನೆ ಆತ ತಪ್ಪಿಸಿಕೊಳ್ಳು ಯತ್ನಿಸಿದ್ದ. ಅಂದಾಜು 1 ಕಿಲೋಮೀಟರ್‌ವರೆಗೆ ಈತನನ್ನು ಬೆನ್ನಟ್ಟಿದ ಗ್ರಾಮಸ್ಥರು, ಅವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಏನಿದು ಪ್ರಕರಣ: ಮೇ 26 ರಂದು ಅರಣ್ಯದ ಬಳಿಕ ಮೇಕೆ ಮೇಯಿಸಲು ಬಂದ ಜನರು, ಅಲ್ಲಿಮುಖದ ಮೇಲೆ ರಕ್ತದ ಕಲೆಗಳನ್ನು ಹೊಂದಿದ್ದ ಅರೆಬೆತ್ತಲೆ ವ್ಯಕ್ತಿಯನ್ನು ದೂರದಿಂದಲೇ ಗಮನಿಸಿದ್ದಾರೆ. ಇದಾದ ನಂತರ ಗ್ರಾಮಸ್ಥರು ಅತನ ಬಳಿಕ ಹೋಗಿ ನೋಡಿದಾಗ, ಮಹಿಳೆಯೊಬ್ಬಳನ್ನು ಕೊಂದಿದ್ದ ಆತ, ಆಕೆಯ ಮುಖದ ಮಾಂಸವನ್ನು ತಿನ್ನುತ್ತಿರುವುದು ಕಂಡುಬಂದಿದೆ.
ಇದರಿಂದಾಗಿಯೇ ಆತನ ಮುಖ ಪೂರ್ತಿ ರಕ್ತದಿಂದ ಕೆಂಪಾಗಿ ಹೋಗಿತ್ತು. ಈ ಭೀಕರ ದೃಶ್ಯ ಕಂಡ ಜನರು, ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಗ್ರಾಮಸ್ಥರು ತನ್ನತ್ತ ಬರುತ್ತಿರುವುದನ್ನು ಕಂಡ ಆರೋಪಿ ಓಡಿ ಹೋಗಲು ಯತ್ನಿಸಿದ್ದಾರೆ. ಗ್ರಾಮಸ್ಥರು ಆತನನ್ನು ಸುಮಾರು ಒಂದು ಕಿಲೋಮೀಟರ್‌ವರೆಗೂ ಅಟ್ಟಿಸಿಕೊಂಡು ಹೋಗಿ ಹಿಡಿದಿದ್ದಲ್ಲದೆ, ಸೇಂದ್ರ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿ ಯುವಕನನ್ನು ಬಂಧಿಸಿ ಠಾಣೆಗೆ ಕರೆತಂದಿದ್ದಾರೆ. ಈ ಯುವಕನ ಹೆಸರು 24 ವರ್ಷದ ಸುರೇಂದ್ರ ಮತ್ತು ಆತ ಮುಂಬೈ ನಿವಾಸಿ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಕೊಲೆ ಮಾಡಿದ ಬಳಿಕ ಶವದ ಮಾಂಸ ತಿಂದ ರಾಕ್ಷಸ: ಎಂದಿನಂತೆ ಸರ್ಧಾನ ಗ್ರಾಮದಲ್ಲಿ ವಾಸಿಸುತ್ತಿರುವ ವೃದ್ಧೆ ಶಾಂತಿ ದೇವಿ ಮೇಕೆ ಮೇಯಿಸಲು ಕಾಡಿಗೆ ತೆರಳಿದ್ದರು. ಇದೇ ವೇಳೆ ಸುರೇಂದ್ರ, ಮಹಿಳೆಯ ಮೇಲೆ ದಾಳಿ ಮಾಡಿದ್ದಾನೆ. ತನ್ನ ಪಕ್ಕದಲ್ಲಿಯೇ ಇದ್ದ ದೊಡ್ಡ ಕಲ್ಲನ್ನು ಆಕೆಯ ತಲೆಯ ಮೇಲೆ ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಸಾಕಷ್ಟು ಬಾರಿ ಆಕೆಯ ತಲೆಯ ಮೇಲೆ ಕಲ್ಲು ಎತ್ತಿಹಾಕಿದ್ದರಿಂದ ಶಾಂತಿ ದೇವಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಅದಾದ ಬಳಿಕ ಆಕೆಯ ಮುಖದ ಮಾಂಸಗಳನ್ನು ಸುರೇಂದ್ರ ತಿಂದಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ. ಅದಾದ ಬಳಿಕ ತಾನು ಹಾಕಿದ ಶರ್ಟ್‌ಅನ್ನು ತೆಗೆದ ಯುವಕ, ಅದನ್ನು ಮೃತ ಮಹಿಳೆಯ ಮುಖದ ಮೇಲೆ ಮುಚ್ಚಿದ್ದಾನೆ. ಪೊಲೀಸರು ಕೂಡ ಇದನ್ನು ತಿಳಿಸಿಸಿದ್ದು, ಶಾಂತಿದೇವಿಯ ಕೆನ್ನೆಯ ಸಮೀಪದ ಹಾಗೂ ಕಣ್ಣಿನ ಸಮೀಪದ ಮಾಂಸಗಳನ್ನು ಕೊಲೆ ಮಾಡಿದ ಬಳಿಕ ತಿಂದಿದ್ದಾನೆ ಎಂದಿದ್ದಾರೆ. ಸದ್ಯ ಈ ಮಹಿಳೆಯ ಮೃತ ದೇಹವನ್ನು ಸೆಂದ್ರಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮಹಿಳೆಯನ್ನು ಆಧಾರ್ ಕಾರ್ಡ್ ಮೂಲಕ ಗುರುತಿಸಲಾಗಿದೆ. ಈ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದು ಯಾಕೆ? ಮತ್ತು ಮುಂಬೈನ ಯುವಕರು ಏನು ಮಾಡಲು ಕಾಡಿಗೆ ಬಂದರು? ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಾಹಿತಿ ಪ್ರಕಾರ ಬಂಧಿತ ಆರೋಪಿ ಮಾದಕ ವ್ಯಸನಿಯಾಗಿದ್ದಾನೆ. ಪೊಲೀಸರು ಅವರನ್ನು ಬಂಗಾಡ್ ಆಸ್ಪತ್ರೆಯ ಜೈಲು ವಾರ್ಡ್‌ಗೆ ದಾಖಲಿಸಿದ್ದಾರೆ. ಇಲ್ಲಿ ವೈದ್ಯಕೀಯ ಮಂಡಳಿಯಿಂದ ಮರಣೋತ್ತರ ಪರೀಕ್ಷೆ ನಡೆಸಿ ಮೃತರ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಯುವಕ ವೃದ್ಧೆಯನ್ನು ಬರ್ಬರವಾಗಿ ಕೊಂದಿದ್ದು ಏಕೆ ಎಂಬ ಬಗ್ಗೆ ಪೊಲೀಸರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.