Asianet Suvarna News Asianet Suvarna News

ಫ್ರಾಕ್, ಸ್ಕರ್ಟ್ ಯುವತಿಯರೇ ಟಾರ್ಗೆಟ್.. ಲೇಸ್ ಕಟ್ಟುವಂತೆ ನಟಿಸಿ ಕಚಡಾ ಕೆಲಸ!

* ಪ್ರವಾಸಿ ತಾಣಕ್ಕೆ ಬರುವ ಸ್ಕರ್ಟ್ ಧರಿಸಿದ್ದ ಯುವತಿಯರೇ ಈತನ ಟಾರ್ಗೆಟ್
* ಶೂ ಲೇಸ್ ಕಟ್ಟುವಂತೆ ನಟಿಸಿ ಅಶ್ಲೀಲ ರೀತಿ ಚಿತ್ರೀಕರಣ ಮಾಡುತ್ತಿದ್ದ
* ಜೈಪುರದ ಕೋಟೆ ಒಂದರಲ್ಲಿ ಚಿತ್ರೀಕರಣ ಮಾಡುತ್ತಿದ್ದ ವೇಳೆ ನಿರ್ಭಯಾ ದಳದ ಕೈಗೆ ಸಿಕ್ಕಿಬಿದ್ದ

Man caught taking upskirt videos of women tourists at Amer fort in   Rajasthan s Jaipur mah
Author
Bengaluru, First Published Aug 18, 2021, 5:10 PM IST
  • Facebook
  • Twitter
  • Whatsapp

ಜೈಪುರ(ಆ. 18) ಈತ ಅಂತಿಂಥ ವಿಕೃತ ಕಾಮಿ ಅಲ್ಲ. ಹೆಣ್ನು ಮಕ್ಕಳು ಸ್ಕರ್ಟ್ ಹಾಕಿಕೊಂಡು ಬಂದರೆ ಅದನ್ನೇ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡುತ್ತಿದ್ದ. 

ರಾಜಸ್ಥಾನದ ರಾಜಧಾನಿ ಜೈಪುರದ ಅಮರ್ ಕೋಟೆಯಲ್ಲಿ ಮಹಿಳೆಯರನ್ನು ಚಿತ್ರೀಕರಣ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ.  ನಿರ್ಭಯಾ ದಳ ಆರೋಪಿಯನ್ನು ಬಂಧಿಸಿದೆ.

ಆರೋಪಿ ರಹಸ್ಯವಾಗಿ ಆಕ್ಷೇಪಾರ್ಹ ವೀಡಿಯೊಗಳನ್ನು ಚಿತ್ರೀಕರಿಸುತ್ತಿದ್ದ.  ಜನರು ಹೆಚ್ಚು ಸೇರುವ ಪ್ರದೇಶದಲ್ಲಿ ತನ್ನ ಕರಾಮತ್ತು ತೋರಿಸುತ್ತಿದ್ದ ಸುರೇಶ್ ಕುಮಾರ್
ಯಾದವ್, ಸಿಕಾರ್ ಜಿಲ್ಲೆಯ ನಿವಾಸಿ ಎಂದು ಗುರುತಿಸಲಾಗಿದೆ.

ಮಕ್ಕಳಾಗುತ್ತಿಲ್ಲ ಎಂದು ಪರಿಹಾರ ಕೇಳಲು ಬಂದವಳ ಮಂಚಕ್ಕೆ ಕರೆದ

ಶೂ ಲೇಸ್ ಕಟ್ಟುವ ನಾಟಕ ಮಾಡುತ್ತ  ಹೆಣ್ಣು ಮಕ್ಕಳಿಗೆ ಅವರಿಗೆ ಗೊತ್ತಾಗದಂತೆ ಚಿತ್ರೀಕರಣ ಮಾಡುತ್ತಿದ್ದ. ಅನುಮಾನಗೊಂಡ ನಿರ್ಭಯಾ ದಳ ವ್ಯಕ್ತಿಯ
ಚಲನವಲನಗಳನ್ನು ಗಮನಿಸಿದೆ.  ಬಿಳಿ ಬಟ್ಟೆಯಲ್ಲಿ ಸಭ್ಯ ವ್ಯಕ್ತಿಯಂತೆ ನಟಿಸುತ್ತಿದ್ದವ ಬಲೆಗೆ ಬಿದ್ದಿದ್ದಾನೆ.

ಸ್ಕರ್ಟ್ ಅಥವಾ ಫ್ರಾಕ್ ಧರಿಸಿದ ಮಹಿಳೆ ಹತ್ತಿರದಲ್ಲಿ ಹಾದು ಹೋದಾಗಲೆಲ್ಲ ಶೂ ಲೇಸ್ ಕಟ್ಟುವಂತೆ ನಟಿಸಿ ಚಿತ್ರೀಕರಣ ಮಾಡುತ್ತಿದ್ದ. ಆತನ ಮೊಬೈಲ್ ವಶಕ್ಕೆ
ಪಡೆದುಕೊಂಡು ಪರಿಶೀಲನೆ ನಡೆಸಿದಾಗ ಅಶ್ಲೀಲ ರೀತಿಯಲ್ಲಿ ಚಿತ್ರೀಕರಣ ಮಾಡಿದ್ದ ವಿಡಿಯೋಗಳು ಸಿಕ್ಕಿವೆ. 

ವಿಚಾರಣೆ ವೇಳೆ ಮೌಂಟ್ ಅಬು ದಲ್ಲಿ ಈ ಡರ್ಟಿ ಐಡಿಯಾವನ್ನು ಇಬ್ಬರು ಪ್ರವಾಸಿಗರು ತನಗೆ ನೀಡಿದರು ಎಂದು ತಿಳಿಸಿದ್ದಾನೆ .

 

Follow Us:
Download App:
  • android
  • ios