Asianet Suvarna News Asianet Suvarna News

ಚಿಕನ್‌ ಲಾಲಿಪಪ್‌ಗಾಗಿ ಗಲಾಟೆ, ಸೆಕ್ಸ್‌ಗಾಗಿ ಕರೆತಂದ ಡಾನ್ಸರ್‌ಗೆ ಗುಂಡಿಟ್ಟ ವ್ಯಕ್ತಿ!

ಸೆಕ್ಸ್‌ ಉದ್ದೇಶ ಇರಿಸಿಕೊಂಡು ಆರ್ಕೆಸ್ಟ್ರಾ ಡಾನ್ಸರ್‌ಗಾಗಿ ರೂಮ್‌ ಬುಕ್‌ ಮಾಡಿದ್ದ ವ್ಯಕ್ತಿ, ಚಿಕನ್‌ ಲಾಲಿಪಪ್‌ಗಾಗಿ ಆಕೆಯ ಒತೆ ಗಲಾಟೆ ಮಾಡಿಕೊಂಡಿದ್ದ. ಇದರ ಬೆನ್ನಲ್ಲಿಯೇ ಸಿಟ್ಟಿಗೆದ್ದ ಆತ ಆಕೆಯ ಬಾಯಿಗೆ ಗನ್‌ ಇಟ್ಟು ಶೂಟ್‌ ಮಾಡಿದ್ದಾನೆ.

Man Boooked Hotel Room With orchestra dancer, fed him chicken lollipop Murderd her san
Author
First Published Jan 10, 2024, 5:18 PM IST

ನವದೆಹಲಿ (ಜ.10): ಆರ್ಕೆಸ್ಟ್ರಾದಲ್ಲಿ ಡಾನ್ಸ್‌ ಮಾಡಿಕೊಂಡು ಜೀವ ಸಾಗಿಸುತ್ತಿದ್ದ ಡಾನ್ಸರ್‌ ಒಬ್ಬಳನ್ನು ಬಿಹಾರದ ಮುಜಾಫರ್‌ನಗರ ಜಿಲ್ಲೆಯಲ್ಲಿ ಶೂಟ್‌ ಮಾಡಲಾಗಿದೆ. ಈಕೆಗೆ ಶೂಟ್‌ ಮಾಡಿರುವ ವ್ಯಕ್ತಿ ಈಕೆಯ ಜೊತೆ ಸೆಕ್ಸ್‌ ಮಾಡುವ ಉದ್ದೇಶ ಹೊಂದಿದ್ದ. ಅದಕ್ಕಾಗಿ ತಾವಿಬ್ಬರೂ ಗಂಡ-ಹೆಂಡತಿ ಎಂದು ಹೋಟೆಲ್‌ ರೂಮ್‌ ಕೂಡ ಬುಕ್‌ ಮಾಡಿದ್ದ ಎಂದು ಮುಜಾಫರ್‌ ನಗರ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅವದೇಶ್‌ ಸರೋಜ್‌ ದೀಕ್ಷಿತ್‌ ಹೇಳಿದ್ದಾರೆ. ಹೋಟೆಲ್‌ ರೂಮ್‌ನಲ್ಲಿಯೇ ಮಹಿಳೆಗೆ ಗುಂಡು ಹಾರಿಸಲಾಗಿದ್ದು, ಆರೋಪಿ ಸ್ಥಳದಿಂದ ನಾಪತ್ತೆಯಾಗಿದ್ದಾನೆ. ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ, ಇಮ್ರಾನ್‌ ಅಲಿ ಹೆಸರಿನ ವ್ಯಕ್ತಿ, ಮಿಥನ್‌ಪುರ ಚೌಕದಲ್ಲಿರುವ ಎಲ್‌ವಿ ಇಂಟರ್‌ನ್ಯಾಷನಲ್‌ ಹೋಟೆಲ್‌ನಲ್ಲಿ ಆರ್ಕೆಸ್ಟ್ರಾ ಡಾನ್ಸರ್‌ ಜೊತೆ ರೂಮ್‌ ಬುಕ್‌ ಮಾಡಿದ್ದ. ರೂಮ್‌ಗೆ ಹೋದವರೇ ಇಬ್ಬರಿಗಾಗಿ ಚಿಕನ್‌ ಲಾಲಿಪಪ್‌ ಬುಕ್‌ ಮಾಡಿದ್ದು, ಬಳಿಕ ಇಬ್ಬರೂ ಅದನ್ನು ತಿಂದಿದ್ದಾರೆ. ಆದರೆ, ಇದಾದ ಕೆಲವು ಸಮಯದ ಬಳಿಕ ಚಿಕನ್‌ ಲಾಲಿಪಪ್‌ ವಿಚಾರವಾಗಿಯೇ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಸಿಟ್ಟಿನ ಭರದಲ್ಲಿ ವ್ಯಕ್ತಿ ತನ್ನಲ್ಲಿದ್ದ ಪಿಸ್ತೂಲ್‌ನಿಂದ ಡಾನ್ಸರ್‌ನ ಬಾಯಿಗೆ ಗುಂಡು ಹಾಕಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಆಕೆ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾಳೆ. ಆರೋಪಿ ಸ್ಥಳದಿಂದ ಎಸ್ಕೇಪ್‌ ಆಗಿದ್ದಾನೆ.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಪಿಸ್ತೂಲ್‌ನಿಂದ ಬಂದ ಗುಂಡೇಟು ಆಕೆಯ ಕೆನ್ನೆಯನ್ನು ಹರಿದು ಹಾಕಿದೆ.  ಸ್ಥಳದಿಂದ ಒಂದು ಪಿಸ್ತೂಲ್ ಮತ್ತು ಎರಡು ಜೀವಂತ ಕಾಟ್ರಿಡ್ಜ್‌ಗಳು ಪತ್ತೆಯಾಗಿವೆ. ಕೋಣೆಯಲ್ಲಿನ ಹಾಸಿಗೆಯ ಮೇಲೆ ರಕ್ತದ ಕಲೆಗಳು ಕಂಡುಬಂದಿವೆ.

ಘಟನೆಯ ಕುರಿತು ಸಿಸಿ ಕ್ಯಾಮರಾದಿಂದ ಮಾಹಿತಿ: ನಾವು ನೋಡುವಾಗ ಆಕೆ ಸಂಪೂರ್ಣವಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದಳು ಎಂದು ಹೋಟೆಲ್‌ ಮಾಲೀಕ ನೀಲು ಭಾರ್ತಿ ಹೇಳಿದ್ದಾರೆ. ಇದೆ ಕಾರಣಕ್ಕಾಗಿ ಹೋಟೆಲ್‌ ಅನ್ನು ಮುಚ್ಚಲಾಗಿತ್ತು. ಎರಡು ದಿನಗಳ ಹಿಂದೆಯಷ್ಟೇ ನಾವು ಹೋಟೆಲ್ ತೆರೆದಿದ್ದೆವು. ಪ್ರಸ್ತುತ ಹೋಟೆಲ್‌ಗೆ ಕಡಿಮೆ ಜನರು ಬರುತ್ತಿದ್ದಾರೆ. ಅದಕ್ಕಾಗಿ ಕೆಲವೇ ಸಿಬ್ಬಂದಿಯನ್ನು ಇರಿಸಲಾಗಿದೆ. ಮಂಗಳವಾರ ಸಂಜೆಯ ವೇಳೆಗೆ ರೂಮ್‌ ಬುಕ್‌ ಆಗಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು ಎಂದಿದ್ದಾರೆ. ರಾತ್ರಿ ಊಟದ ಸಮಯದ ದೃಶ್ಯಾವಳಿಗಳನ್ನು ವೀಕ್ಷಿಸಿದ್ದೆವು. ಈ ವೇಳೆ ಒಬ್ಬಳು ಹುಡುಗಿ ಹೋಟೆಲ್‌ನ ನೆಲ ಮಹಡಿಯಲ್ಲಿ ತಿರುಗಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ ಎಂದು ನೀಲು ಭಾರ್ತಿ ತಿಳಿಸಿದ್ದಾರೆ.

ಈ ಹುಡುಗಿ ಹಿಂದೆ ನಾಲ್ಕೈದು ಬಾರಿ ಇದೇ ಹೋಟೆಲ್‌ನಲ್ಲಿ ತಂಗಿದ್ದಳು ಎಂದು ಹೋಟೆಲ್ ನಿರ್ವಾಹಕರ ಸಂಬಂಧಿ ತಿಳಿಸಿದ್ದಾರೆ. ಕಳೆದ ಬಾರಿ ಡಿಸೆಂಬರ್ 30ರ ರಾತ್ರಿ ಅದೇ ಯುವಕನೊಂದಿಗೆ ಒಂದು ದಿನ ತಂಗಿದ್ದಳು. ಆಗಾಗ ಹೋಟೆಲ್ ನಲ್ಲಿ ಒಂದು ದಿನ ಮಾತ್ರ ಉಳಿದುಕೊಳ್ಳುತ್ತಿದ್ದಳು. ಮಾಲಿಘಾಟ್‌ನಲ್ಲಿ ತನ್ನ ಅಜ್ಜಿ ಊರ್ಮಿಳಾ ಖಾತೂನ್ ಜೊತೆ ವಾಸಿಸುತ್ತಿರುವುದಾಗಿ ಹುಡುಗಿ ಹೋಟೆಲ್ ಸಿಬ್ಬಂದಿಗೆ ತಿಳಿಸಿದ್ದಾಳೆ. ಅವರ ಮನೆ ನಿರ್ಮಾಣವಾಗುತ್ತಿದೆ. ಆದ್ದರಿಂದ ಅವಳು ಹೋಟೆಲ್‌ನಲ್ಲಿ ಉಳಿಯಲು ಬರುವುದಾಗಿ ಆಕೆ ತಿಳಿಸಿದ್ದಳು.
ಡಾರ್ಜಿಲಿಂಗ್‌ನಿಂದ ಆಕೆಯ ಮೊಬೈಲ್‌ಗೆ ತಾಯಿಯ ಕರೆ ಬರುತ್ತಿತ್ತು: ಹುಡುಗಿಯ ಮೊಬೈಲ್‌ಗೆ ಮಹಿಳೆಯೊಬ್ಬರ ಕರೆ ಪದೇ ಪದೇ ಬರುತ್ತಿತ್ತು. ಪೊಲೀಸ್ ಅಧಿಕಾರಿ ಮಹಿಳೆಯೊಂದಿಗೆ ಮಾತನಾಡಿದಾಗ, ಅವಳು ಹುಡುಗಿಯ ತಾಯಿ ಎಂದು ತಿಳಿಸಿದ್ದ, ತಾನು ಡಾರ್ಜಿಲಿಂಗ್ ನಿವಾಸಿ ಎಂದು ಹೇಳಿದ್ದಾರೆ.

ಸಾಕ್ಷ್ಯದ ಮಾದರಿಗಳನ್ನು ಸಂಗ್ರಹಿಸಲು ನಾವು ಎಫ್‌ಎಸ್‌ಎಲ್ ತಂಡವನ್ನು ಕರೆಸಿದ್ದೇವೆ ಮತ್ತು ನಂತರ ಕೊಠಡಿಯನ್ನು ಸೀಲ್ ಮಾಡಿದ್ದೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಇಬ್ಬರೂ ಪತಿ-ಪತ್ನಿಯರಲ್ಲ ಎಂದು ತಿಳಿದುಬಂದಿದೆ. ಮಹಿಳೆ ಪಶ್ಚಿಮ ಬಂಗಾಳದ ಸಿಲಿಗುರಿ ಮೂಲದವರಾಗಿದ್ದು, ಮುಜಾಫರ್‌ಪುರದಲ್ಲಿ ವಾಸವಾಗಿ ಆರ್ಕೆಸ್ಟ್ರಾ ಪಾರ್ಟಿಯಲ್ಲಿ ಕೆಲಸ ಮಾಡುತ್ತಿದ್ದಳು ಎನ್ನುವುದು ಗೊತ್ತಾಗಿದೆ.

ನಾದಿನಿ ಮೇಲೆ ಗಂಡನ ಕಣ್ಣು, ರೀಲ್ಸ್‌ ಮೇಲೆ ಪತ್ನಿಯ ಒಲವು; ಪತ್ನಿ-ಮಗಳನ್ನು ಸಾಯಿಸಿ ಕಳ್ಳತನದ ಕಥೆ ಕಟ್ಟಿದ ಪಾಪಿ!

ಸಂತ್ರಸ್ತೆಯನ್ನು ಎಸ್‌ಕೆಎಂಸಿಎಚ್‌ಗೆ ದಾಖಲಿಸಲಾಗಿದ್ದು, ಹೇಳಿಕೆ ನೀಡುವ ಸ್ಥಿತಿಯಲ್ಲಿಲ್ಲ ಎಂದು ದೀಕ್ಷಿತ್ ಹೇಳಿದ್ದಾರೆ. ಹೋಟೆಲ್ ಆಡಳಿತದ ಕಡೆಯಿಂದ ಗಂಭೀರ ಲೋಪ ಕಂಡುಬಂದಿದೆ. ಅಪರಾಧ ನಡೆದ ಮಹಡಿಯಲ್ಲಿರುವ ಹೋಟೆಲ್‌ನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿಲ್ಲ. ಘಟನೆ ನಡೆದಾಗ ರಿಸೆಪ್ಶನ್‌ನಲ್ಲಿ ಯಾವುದೇ ಸಿಬ್ಬಂದಿ ಇದ್ದಿರಲಿಲ್ಲ. ಆರೋಪಿ ತನ್ನ ಹೆಸರನ್ನು ರಿಜಿಸ್ಟರ್‌ನಲ್ಲಿ ಬಹಿರಂಗಪಡಿಸಿದ್ದಾನೆ ಆದರೆ ಅದರಲ್ಲಿ ಮಹಿಳೆಯ ಹೆಸರನ್ನು ಬರೆದಿಲ್ಲ. ಕೆನ್ನೆಗೆ ಗುಂಡು ತಗುಲಿದ ಕಾರಣ ಆತನ ಹೆಸರನ್ನು ಹೇಳಲು ಸಾಧ್ಯವಾಗುತ್ತಿಲ್ಲ. ಆರೋಪಿಯ ಗುರುತು ಮತ್ತು ಕಾರಣ ತಿಳಿಯಲು ಮಹಿಳೆ ಚೇತರಿಸಿಕೊಳ್ಳುವವರೆಗೆ ಕಾಯುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ರೀಲ್ಸ್‌ ಮಾಡಲು ಬಿಡದ ಪತಿಯನ್ನು ಕೊಂದು ನೇತು ಹಾಕಿದ ಪತ್ನಿ!

Follow Us:
Download App:
  • android
  • ios