'ಪತ್ನಿ ವಿನಿಮಯ' ಬೇಡಿಕೆ ನಿರಾಕರಿಸಿದ್ದಕ್ಕಾಗಿ ಪತಿಯಿಂದ ಲೈಂಗಿಕ ಕಿರಕುಳ: ಅತ್ತೆ ಮಾವಂದಿರ ಸಾಥ್
Crime News: 'ಪತ್ನಿ ವಿನಿಮಯ'ದ ಬೇಡಿಕೆಯನ್ನು ನಿರಾಕರಿಸಿದ್ದಕ್ಕಾಗಿ ಪತ್ನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಧ್ಯಪ್ರದೇಶ (ಅ. 15): 'ಪತ್ನಿ ವಿನಿಮಯ'ದ ಬೇಡಿಕೆಯನ್ನು ನಿರಾಕರಿಸಿದ್ದಕ್ಕಾಗಿ ಪತ್ನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆ ತನ್ನ ಪತಿಯೊಂದಿಗೆ ಬಿಕಾನೇರ್‌ಗೆ ಹೋದಾಗ ಈ ಘಟನೆ ನಡೆದಿದೆ. ಈ ಸಂಬಂಧ ಸಂತ್ರಸ್ತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ತನ್ನ ಪತಿ ಮಾದಕ ವ್ಯಸನಿಯಾಗಿರುವುದು ಮತ್ತು ಇತರ ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದನ್ನು ತಿಳಿದು ಆಘಾತಕ್ಕೊಳಗಾಗಿದ್ದೇನೆ ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾಳೆ.
ತನಗೆ ಬಿಕಾನೇರ್‌ನಲ್ಲಿ ಮನೆ ಇದೆ ಎಂದು ಮಹಿಳೆಯ ಕುಟುಂಬಕ್ಕೆ ತಿಳಿಸಿರುವ ಪತಿ ಆಕೆಯನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಆಕೆಯನ್ನು ತಾನು ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ 5-ಸ್ಟಾರ್ ಹೋಟೆಲ್‌ನ ಕೊಠಡಿಯೊಂದರಲ್ಲಿ ಇರಿಸಿ ಚಿತ್ರಹಿಂಸೆ ನೀಡಿದ್ದಾನೆ. ಒಂದು ವಾರದ ಬಳಿಕ ಆರೋಪಿ ಪತಿ ಹೆಂಡತಿಯನ್ನು ವಿನಿಮಯ ಮಾಡಿಕೊಳ್ಳುವ ಬೇಡಿಕೆಯನ್ನು ಇಟ್ಟಿದ್ದಾನೆ. ಆದರೆ ಸಂತ್ರಸ್ತ ಮಹಿಳೆ ನಿರಾಕರಿಸಿದ ನಂತರ ಲೈಂಗಿಕ ಕಿರುಕುಳ ನೀಡಲು ಪ್ರಾರಂಭಿಸಿದ್ದಾನೆ.
ಆರೋಪಿ ಪತಿ ಮಹಿಳೆಯನ್ನು 15 ದಿನಗಳ ಕಾಲ ಹೋಟೆಲ್ ಕೊಠಡಿಯಲ್ಲಿ ಇರಿಸಿದ್ದು, ಆಕೆಯ ಪೋಷಕರಿಂದ 50 ಲಕ್ಷ ರೂ ಡಿಮ್ಯಾಂಡ್ ಮಾಡಿದ್ದಾನೆ. ತನ್ನ ಗಂಡನ ಕೆಟ್ಟ ಹವ್ಯಾಸಗಳ ಬಗ್ಗೆ ಮತ್ತು ದುಷ್ಕೃತ್ಯಗಳ ಬಗ್ಗೆ ತನ್ನ ಅತ್ತೆ ಮಾವಂದಿರಿಗೆ ತಿಳಿಸಿದಾಗ, ಅವರು ಕೂಡ ಇದು 5-ಸ್ಟಾರ್ ಸಂಸ್ಕೃತಿ ಮತ್ತು ಎನ್ನುವ ಮೂಲಕ ಮಗನನ್ನುಬೆಂಬಲಿಸಿದರು ಎಂದು ಮಹಿಳೆ ತನ್ನ ದೂರಿನಲ್ಲಿ ಬಹಿರಂಗಪಡಿಸಿದ್ದಾರೆ.
ಲವರ್‌ಗಾಗಿ ಪ್ರಿಯತಮೆ ಆತ್ಮಹತ್ಯೆ: ಮಗಳ ಸಾವಿಗೆ ಕಾರಣನಾದ ಯುವಕನನ್ನು ಕೊಂದ ಯುವತಿ ಮನೆಯವರು..!
ಬಳಿಕ ಮಹಿಳೆ ತನಗಾದ ಕಷ್ಟವನ್ನು ತನ್ನ ಪೋಷಕರ ಬಳಿ ಹೇಳಿಕೊಂಡಿದ್ದಾಳೆ. “ನನ್ನ ಚಿಕ್ಕಪ್ಪ ನನ್ನನ್ನು ನನ್ನ ಪೋಷಕರ ಮನೆಗೆ ಕರೆತಂದರು. ನನ್ನ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು ಮತ್ತು ಅಕ್ಟೋಬರ್ 3, 2022 ರಂದು ನನ್ನನ್ನು ಖಾಸಗಿ ಆಸ್ಪತ್ರೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತು, ”ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಆರೋಪಿ ಪತಿ ವಿರುದ್ಧ ಐಪಿಸಿ ಸೆಕ್ಷನ್ 377, 498(ಎ), 323, 506, 34 ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆದಿದೆ.