ಆಘಾತಕಾರಿ ಘಟನೆಯಲ್ಲಿ ತಂದೆಯೊಬ್ಬ ಕೇವಲ 20 ದಿನಗಳ ಹಿಂದೆ ಹುಟ್ಟಿದ್ದ ತನ್ನ ಹೆಣ್ಣುಮಗುವಿಗೆ ವಿಷದ ಇಂಜೆಕ್ಷನ್‌ ಚುಚ್ಚಿ ಸಾಯಿಸಲು ಯತ್ನಿಸಿದ ಘಟನೆ ಒಡಿಶಾದಲ್ಲಿ ನಡೆದಿದೆ. 

ಭುವನೇಶ್ವರ (ಮೇ.30): ಅಮಾನವೀಯ ಘಟನೆಯಲ್ಲಿ 20 ದಿನಗಳ ಹಿಂದೆ ಹುಟ್ಟಿದ ಹೆಣ್ಣುಮಗುವಿಗೆ ತಂದೆಯೇ ವಿಷದ ಇಂಜೆಕ್ಷನ್‌ ಚುಚ್ಚಿದ ಘಟನೆ ಒಡಿಶಾದಲ್ಲಿ ನಡೆದಿದೆ. ಒಡಿಶಾದ ಬಾಲಸೋರ್‌ ಜಿಲ್ಲೆಯಲ್ಲಿ ತನ್ನ ನವಜಾತ ಶಿಶುವಿಗೆ ವಿಷದ ಇಂಜೆಕ್ಷನ್‌ ಚುಚ್ಚಿ ಸಾಯಿಸಲು ಯತ್ನಿಸಿದ ಬೆನ್ನಲ್ಲಿಯೇ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಈ ಅಮಾನವೀಯ ಕೃತ್ಯ ಸೋಮವಾರ ನಡೆದಿದ್ದು, ಆರೋಪಿ ಚಂದನ್‌ ಮಹಾನಾನನ್ನು ಬಂಧಿಸಲಾಗಿದೆ. ಹೆರಿಗೆಯ ನಂತರ ಚಂದನ್‌ ಮಹಾನಾನ ಪತ್ನಿ ತನ್ಮಯಿ, ನೀಲಗಿತಿ ಪೊಲೀಸ್‌ ಠಾಣೆ ವ್ಯಾಪ್ತಿಯ ಸಿಂಘರಿ ಗ್ರಾಮದಲ್ಲಿರುವ ತನ್ನ ತಂದೆ-ತಾಯಿಗಳ ಮನೆಗೆ ಬಂದಿದ್ದರು. 'ಮಗಳನ್ನು ನೋಡುವ ನೆಪದಲ್ಲಿ ನನ್ನ ಮನೆಗೆ ಬಂದಿದ್ದ ಚಂದನ್‌ ಮಹಾನಾ, ನನ್ನ ಮಗಳು ಸ್ನಾನಕ್ಕೆ ಹೋಗಿದ್ದಾಗ ವಿಷಪೂರಿತ ಇಂಜೆಕ್ಷನ್‌ಅನ್ನು ಮಗುವಿಗೆ ಚುಚ್ಚಿದ್ದಾನೆ' ಎಂದು ತನ್ಮಯಿಯ ತಂದೆ ಭಾಗೀರಥ್‌ ಸಿಂಗ್ ಹೇಳಿದ್ದಾರೆ. ಮದುವೆಯಾದ ಒಂದು ವರ್ಷಗಳ ಬಳಿಕ ಚಂದನ್‌ ಮಹಾನಾ ಹಾಗೂ ತನ್ಮಯಿ ದಂಪತಿಗಳಿಗೆ ಕೇವಲ 20 ದಿನಗಳ ಹಿಂದೆಯಷ್ಟೇ ಹೆಣ್ಣು ಮಗುವಿನ ಜನನವಾಗಿತ್ತು. 'ಚಂದನ್‌ ಮಹಾನಾಗೆ ಹೆಣ್ಣು ಮಗು ಹುಟ್ಟಿದ್ದಕ್ಕೆ ಬಹಳ ಬೇಸರವಾಗಿತ್ತು. ಇದನ್ನು ಮುಕ್ತವಾಗಿಯೂ ಆತ ಹೇಳಿದ್ದ' ಎಂದು ತನ್ಮಯಿಯ ತಂದೆ ತಿಳಿಸಿದ್ದಾರೆ.

'ಮಗುವಿನ ಜೊತೆ ಚಂದನ್‌ ಕುಳಿತುಕೊಂಡಿದ್ದ. ಈ ಹಂತದಲ್ಲಿ ತನ್ಮಯಿ ಸ್ನಾನ ಮಾಡಲು ಹೋಗಿದ್ದಳು. ಈ ಹಂತದಲ್ಲಿ ಮಗು ತಕ್ಷಣವೇ ಜೋರಾಗಿ ಅಳಲು ಪ್ರಾರಂಭ ಮಾಡಿತ್ತು. ತಕ್ಷಣವೇ ತನ್ಮಯಿ ಹಾಗೂ ನಾನು ಮಗು ಇದ್ದಲ್ಲಿಗೆ ಬಂದಿದ್ದೆವು. ಈ ವೇಳೆ ತನ್ಮಯಿ ಬೆನ್‌ನ ಕೆಳಗೆ ವಿಷದ ಬಾಟಲಿ ಹಾಗೂ ಸಿರೀಂಜ್‌ಅನ್ನು ಗಮನಿಸಿದ್ದಾಳೆ' ಎಂದು ಭಾಗೀರಥ್‌ ಸಿಂಗ್‌ ತಿಳಿಸಿದ್ದಾರೆ. ಆತ ಮಗುವಿಗೆ ವಿಷದ ಇಂಜೆಕ್ಷನ್‌ ಚುಚ್ಚಿರಬಹುದು ಎನ್ನುವ ಅನುಮಾನ ನಮಗೆ ಕಾಡಿತು. ಈ ವೇಳೆ ಆತನನ್ನು ಪ್ರಶ್ನೆ ಮಾಡಿದ್ದೆವು. ಆದರೆ, ನಾನು ಇಂಜೆಕ್ಷನ್‌ ಚುಚ್ಚಿಲ್ಲ ಎಂದು ಈ ವೇಳೆ ಆತ ಹೇಳಿದ್ದ ಎಂದಿದ್ದಾರೆ.

ಮೈದಾನದಲ್ಲೇ ಜಡೇಜಾ ಕಾಲಿಗೆ ನಮಸ್ಕರಿಸಿದ ಪತ್ನಿ, ಶಾಸಕಿ ರಿವಾಬಾ ಜಡೇಜಾ!

ನಂತರ ಗ್ರಾಮಸ್ಥರು ಆತನಿಗೆ ಘೇರಾವ್ ಮಾಡಿ ಸತ್ಯ ಹೇಳು ಎಂದು ಹೇಳಿದಾಗ ಚಂದನ್ ವಿಷದ ಇಂಜೆಕ್ಷನ್ ನೀಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಭಾಗೀರಥ್‌ ತಿಇಸಿದ್ದಾರೆ. ಗ್ರಾಮಸ್ಥರು ಶಿಶುವನ್ನು ಬಾಲಸೋರ್ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದು, ಪೊಲೀಸರು ಹೆಚ್ಚಿನ ತನಿಖೆಗಾಗಿ ಚಂದನ್‌ನನ್ನು ವಶಕ್ಕೆ ಪಡೆದಿದ್ದಾರೆ.

ಸೋಶಿಯಲ್‌ ಮೀಡಿಯಾ 'ಕ್ರೋಮಿಂಗ್‌' ಟ್ರೆಂಡ್‌ಗೆ ಬಲಿಯಾದ 13 ವರ್ಷದ ಬಾಲಕಿ