Crime News: 24 ವರ್ಷದ ಯುವಕ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿರುವ ಘಟನೆ ತಾಲ್ಲೂಕಿನ ಮರಳವಾಡಿ ಹೋಬಳಿಯ ಗುಂಡನಗೊಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. 

ಕನಕಪುರ (ಜು. 08): 24 ವರ್ಷದ ಯುವಕ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿರುವ ಘಟನೆ ಕನಕಪುರ ತಾಲ್ಲೂಕಿನ (Kanakapura) ಮರಳವಾಡಿ ಹೋಬಳಿಯ ಗುಂಡನಗೊಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. ನಾಗರತ್ನ ಹಾಗೂ ಸುರೇಶ್ ದಂಪತಿಯ ಪುತ್ರಿ ರಮ್ಯಾ (ಹೆಸರು ಬದಲಾಯಿಸಲಾಗಿದೆ) ಅತ್ಯಾಚಾರಕ್ಕೊಳಗಾದ ಬಾಲಕಿ. ಅದೇ ಗ್ರಾಮದ ಕಿರಣ್ (24) ವರ್ಷ ಅತ್ಯಾಚಾರವೆಸಗಿದ ಆರೋಪಿ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಿನ್ನೆ ಸಂಜೆ ಮನೆಯಲ್ಲಿದ್ದ ಬಾಲಕಿಯನ್ನು ಹೊತ್ತೊಯ್ದು ಆರೋಪಿ ಅತ್ಯಚಾರ ಎಸಗಿದ್ದಾನೆ. ಕೆಲಸ ಮುಗಿಸಿಕೊಂಡು ಮನೆಗೆ ಬಂದ ಪೋಷಕರು ಮಗಳು ಕಾಣದ ಹಿನ್ನಲೆ ಹುಡುಕಾಟ ನಡೆಸಿದ್ದರು. ಬಾಲಕಿಯನ್ನು ಹುಡುಕಲು ಹೋದಾಗ ಮನೆಯ ಹಿಂದೆ ಹೊಲದಲ್ಲಿ ಬಾಲಕಿ ಪತ್ತೆಯಾಗಿದ್ದಾಳೆ. ಬಾಲಕಿ‌ ಪೋಷಕರನ್ನು ನೋಡಿ ಅರೋಪಿ ಕಿರಣ್ ಎಸ್ಕೇಪ್ ಆಗಿದ್ದ. ಇಂದು ಬೆಳಿಗ್ಗೆ ಅರೋಪಿ‌ ಕಿರಣ್ ನನ್ನ ವಶಕ್ಕೆ ಪಡೆದುಕೊಂಡಿರುವ ಹಾರೋಹಳ್ಳಿ ಪೋಲಿಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಬುದ್ದಿಮಾಂದ್ಯ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಕಾಮುಕ