* ಮದುವೆಯಾಗುವುದಾಗಿ ನಂಬಿಸಿ ಮಹಿಳೆಯ ಸ್ನೇಹ ಬೆಳೆಸಿದ್ದ ಆರೋಪಿ* ಇನ್ಸ್ಟಾಗ್ರಾಮ್‌ನಲ್ಲಿ ಯುವತಿಯ ಹೆಸರಿನಲ್ಲಿ ಮೂರು ನಕಲಿ ಖಾತೆ ತೆರೆದಿದ್ದ ವಿಜಯ್ ಕುಮಾರ್* ಆರೋಪಿಯ ಕಾಟದಿಂದ ಬೇಸತ್ತು ಪೊಲೀಸರಿಗೆ ದೂರು ನೀಡಿದ್ದ ಯುವತಿ
ಬೆಂಗಳೂರು(ಜ.20): ಕನ್ನಡ ಮ್ಯಾಟ್ರಿಮೋನಿಯಲ್ಲಿ(Kannada Matrimony) ಪರಿಚಯ ಅಗಿ ಮದುವೆಯಾಗುವುದಾಗಿ ನಂಬಿಸಿ ಬ್ಲ್ಯಾಕ್‌ಮೇಲ್(Blackmail) ಮಾಡುತ್ತಿದ್ದವನ್ನ ನಗರದ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಹೌದು, ದುಡ್ಡಿಗೋಸ್ಕರ ಮಹಿಳೆಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ವಿಜಯ್ ಕುಮಾರ್ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ.
ಆರೋಪಿ ವಿಜಯ್ ಕುಮಾರ್ ಕನ್ನಡ ಮ್ಯಾಟ್ರಿಮೋನಿಯಲ್ಲಿ ಓರ್ವ ಮಹಿಳೆಯನ್ನ(Woman) ಪರಿಚಯಮಾಡಿಕೊಂಡಿದ್ದ. ನಂತರ ಮದುವೆಯಾಗುವುದಾಗಿ(Marriage) ನಂಬಿಸಿ ಸ್ನೇಹ ಬೆಳೆಸಿದ್ದ, ಬಳಿಕ ಸಲುಗೆಯಿಂದ ಇದ್ದ ಸಮಯದಲ್ಲಿ ವಿಜಯ್ ಕುಮಾರ್ ಕೆಲ ಫೋಟೋಗಳನ್ನು ತೆಗೆದುಕೊಂಡಿದ್ದನು. ಕೆಲ ದಿನಗಳ ನಂತರ ಐವತ್ತು ಸಾವಿರ ಹಣ ನೀಡು ಇಲ್ಲವಾದ್ರೆ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ(Social Media) ಹಾಕುವುದಾಗಿ ಬೆದರಿಕೆ ಹಾಕಿದ್ದನು ಎಂದು ತಿಳಿದು ಬಂದಿದೆ.
Sexual Harassment : ಮದುವೆಯಾದ ಮಹಿಳೆಯ ಸ್ನಾನದ ವಿಡಿಯೋ ಮಾಡಿಕೊಂಡ ಸಂಬಂಧಿ ಮಾಡಿದ ಕೆಲಸ!
ಹಣ ನೀಡದೆ ಇದ್ದಾಗ ಇನ್ಸ್ಟಾಗ್ರಾಮ್‌ನಲ್ಲಿ(Instagram) ಯುವತಿಯ ಹೆಸರಿನಲ್ಲಿ ಮೂರು ನಕಲಿ ಖಾತೆಗಳನ್ನ ಕೂಡ ತೆರೆದಿದ್ದ. ಫೋಟೋಗಳನ್ನು ಯುವತಿಯ ಕುಟುಂಬದವರಿಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದ ಬಂಧಿತ(Arrest) ವಿಜಯ್ ಕುಮಾರ್.
ಇದಾದ ಬಳಿಕ ಸಾಮಾಜಿಕ ಜಾಲತಾಣದಿಂದ ಫೋಟೋಗಳನ್ನು(Photos) ಡಿಲೀಟ್ ಮಾಡುವಂತೆ ವಿಜಯ್ ಕುಮಾರ್‌ಗೆ ಯುವತಿ ಕೇಳಿಕೊಂಡಿದ್ದರು. ಈ ವೇಳೆ ಐವತ್ತು ಸಾವಿರ ಹಣ(Money) ನೀಡುವಂತೆ ಆರೋಪಿ ಕೇಳಿದ್ದನು. ನಂತರ ಯುವತಿ ಫೋನ್ ಪೇ ಮೂಲಕ ವಿಜಯ್ ಕುಮಾರ್‌ಗೆ ಹಣ ನೀಡಿದ್ದಳು.
ಇಷ್ಟಕ್ಕೆ ಸುಮ್ಮನಾಗದ ಆರೋಪಿ ವಿಜಯ್ ಕುಮಾರ್ ಮತ್ತಷ್ಟು ಹಣ ನೀಡುವಂತೆ ಬೇಡಿಕೆ ಇಟ್ಟಿದ್ದನು. ಇವನ ಕಾಟದಿಂದ ಬೇಸತ್ತ ನೊಂದ ಯುವತಿ ನಗರದ ಈಶಾನ್ಯ ವಿಭಾಗ ಸಿಇಎನ್ ಪೊಲೀಸರಿಗೆ(Police) ದೂರು(Complaint) ನೀಡಿದ್ದಳು. ಕೇಸ್ ದಾಖಲು ಮಾಡಿಕೊಂಡ ಪೊಲೀಸರು ಆರೋಪಿ ವಿಜಯ್ ಕುಮಾರ್‌ನನ್ನ ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ ಎರಡು ಮೊಬೈಲ್ ಫೋನ್, ಡಾಂಗಲ್ ವಶಪಡಿಸಿಕೊಳ್ಳಲಾಗಿದೆ.
ಯುವತಿಯ ಹೆಸರಲ್ಲಿ ಪರಿಚಯ: ‘ಬೆತ್ತಲೆ ಗ್ಯಾಂಗ್’ ಹಾವಳಿಗೆ ವೈದ್ಯ ಬಲಿ
ಬೆಂಗಳೂರು: ಇತ್ತೀಚೆಗೆ ಸಾಮಾಜಿಕ ಜಾಲತಾಣದ(Social Media) ‘ಬೆತ್ತಲೆ ಗ್ಯಾಂಗ್’ ಬಲೆಗೆ ಸಿಲುಕಿ ವೈದ್ಯರೊಬ್ಬರು(Doctor) ಬಲಿಯಾಗಿರುವ(Death) ಸಂಗತಿ ತಡವಾಗಿ ಬೆಳಕಿಗೆ ಬಂದಿದೆ. ಕೆಲ ದಿನಗಳ ಹಿಂದೆ ಕೆಂಗೇರಿ ಬಳಿ ರೈಲಿಗೆ ಸಿಲುಕಿ ವೈದ್ಯ ಆತ್ಮಹತ್ಯೆ(Suicide) ಮಾಡಿಕೊಂಡಿದ್ದು, ಈ ಬಗ್ಗೆ ರೈಲ್ವೆ ಪೊಲೀಸರು(Raliway Police) ತನಿಖೆ ನಡೆಸಿದಾಗ ‘ಬೆತ್ತಲೆ ಗ್ಯಾಂಗ್’ನ ಬೆದರಿಕೆಗೆ ಹೆದರಿ ವೈದ್ಯ ಆತ್ಮಹತ್ಯೆ ಮಾಡಿಕೊಂಡ ಸಂಗತಿ ಬಯಲಾಗಿದೆ. ಈ ಸಂಬಂಧ ಮಧ್ಯಪ್ರದೇಶದ ಭೂಪಾಲ್‌ನಲ್ಲಿ ಒಬ್ಬನನ್ನು ರೈಲ್ವೆ ಪೊಲೀಸರು ವಶಕ್ಕೆ(Arrest) ಪಡೆದಿದ್ದಾರೆ.
Dowry Blackmail: ಶಿವಮೊಗ್ಗ, ವರದಕ್ಷಿಣೆ ಹಣ ತರದಿದ್ರೆ ಬೆತ್ತಲೆ ವಿಡಿಯೋ ಅಪ್ ಮಾಡ್ತೆನೆ..ಎಂಥಾ ಗಂಡ!
ಡೇಟಿಂಗ್ ಆ್ಯಪ್‌ನಲ್ಲಿ ವೈದ್ಯನಿಗೆ ಬಲೆ:
ಕೆಲ ದಿನಗಳ ಹಿಂದೆ ಡೇಟಿಂಗ್ ಆ್ಯಪ್‌ನಲ್ಲಿ(Dating App) ವೈದ್ಯನಿಗೆ ಯುವತಿ ಸೋಗಿನಲ್ಲಿ ಆರೋಪಿ ಪರಿಚಯವಾಗಿದ್ದಾನೆ. ಬಳಿಕ ನಾಜೂಕಿನ ಮಾತಿನ ಮೂಲಕ ತನ್ನ ವಂಚನೆ ಬಲೆಗೆ ಬೀಳಿಸಿಕೊಂಡ ಆತ, ಬಳಿಕ ವೈದ್ಯನೊಟ್ಟಿಗೆ ‘ಮುಕ್ತ’ ಸಂಭಾಷಣೆಯಲ್ಲಿ ತೊಡಗಿದ್ದಾನೆ. ಮೋಸ ಅರಿಯದ ವೈದ್ಯ, ಡೇಟಿಂಗ್ ಆ್ಯಪ್‌ನಲ್ಲಿ ಮಾತುಕತೆ ಮುಂದುವರೆಸಿದ್ದಾನೆ. ಆಗ ವೈದ್ಯನನ್ನು ಮಾತನಾಡಿಸುತ್ತಲೇ ಆತನಿಗೆ ನಗ್ನವಾಗುವಂತೆ ಆರೋಪಿ ಪ್ರಚೋದಿಸಿದ್ದಾನೆ. ಅಂತೆಯೇ ನಗ್ನನಾದ ವೈದ್ಯನ ವಿಡಿಯೋವನ್ನು ಆರೋಪಿ ಸೆರೆ ಹಿಡಿದಿದ್ದಾನೆ. ಈ ಬೆತ್ತಲೆ ವಿಡಿಯೋ ಮುಂದಿಟ್ಟು ವೈದ್ಯನಿಗೆ ಹಣಕ್ಕಾಗಿ ಕಿಡಿಗೇಡಿ ಬ್ಲ್ಯಾಕ್‌ಮೇಲ್(Blackmail) ಮಾಡಿದ್ದಾನೆ.
ಬೆದರಿಕೆ ಹೆದರಿದ ವೈದ್ಯ, ಒಂದು ಬಾರಿ .67 ಸಾವಿರ ಆರೋಪಿ(Accused) ಖಾತೆಗೆ ಆನ್‌ಲೈನ್ ಮೂಲಕ ಜಮೆ ಮಾಡಿದ್ದ. ಇದಾದ ಬಳಿಕ ಮತ್ತೆ ಮತ್ತೆ ಹಣಕ್ಕೆ ಆತ ಪೀಡಿಸಲು ಶುರು ಮಾಡಿದ್ದ. ಇದರಿಂದ ಬೇಸರಗೊಂಡ ವೈದ್ಯ, ಮರ್ಯಾದೆಗೆ ಅಂಜಿ ಕೊನೆಗೆ ಕೆಂಗೇರಿ ಸಮೀಪ ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಕೆಂಗೇರಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
