ಬೆಂಗಳೂರು: ಆನ್‌ಲೈನ್‌ನಲ್ಲಿ ಗಾಂಜಾ ಖರೀದಿಸಿ ಮಾರಾಟ ಮಾಡುತ್ತಿದ್ದವನ ಬಂಧನ
ಕೇರಳದ ಶಿವಕೃಷ್ಣ ಹಾಗೂ ರೋಷನ್ ಸೇರಿ ಐವರು ಬಂಧಿತರಾಗಿದ್ದು, ಆರೋಪಿಗಳಿಂದ 5.180 ಕೇಜಿ ಗಾಂಜಾ ಸೇರಿ ಒಟ್ಟು ₹16.5 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ. ನಗರದ ಮೈಕೋ ಲೇಔಟ್, ಬಾಗಲೂರು ಹಾಗೂ ರಾಮಮೂರ್ತಿ ನಗರ ಠಾಣೆಗಳ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರಾಟ ಜಾಲದ ಮೇಲೆ ಸಿಸಿಬಿ ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸಿದೆ.
ಬೆಂಗಳೂರು(ಏ.03): ರಾಜಧಾನಿಯ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಮೂವರು ವಿದೇಶಿ ಪ್ರಜೆಗಳು ಸೇರಿದಂತೆ ಐದು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೇರಳದ ಶಿವಕೃಷ್ಣ ಹಾಗೂ ರೋಷನ್ ಸೇರಿ ಐವರು ಬಂಧಿತರಾಗಿದ್ದು, ಆರೋಪಿಗಳಿಂದ 5.180 ಕೇಜಿ ಗಾಂಜಾ ಸೇರಿ ಒಟ್ಟು ₹16.5 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ. ನಗರದ ಮೈಕೋ ಲೇಔಟ್, ಬಾಗಲೂರು ಹಾಗೂ ರಾಮಮೂರ್ತಿ ನಗರ ಠಾಣೆಗಳ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರಾಟ ಜಾಲದ ಮೇಲೆ ಸಿಸಿಬಿ ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸಿದೆ.
ಸಿಗ್ನಲ್ ಆ್ಯಪ್ ಮೂಲಕ ಸಂಪರ್ಕ
‘ವಿದೇಶಿ ಪೆಡ್ಲರ್‌ವೊಬ್ಬನನ್ನು ಸಿಗ್ನಲ್ ಆ್ಯಪ್ ಮೂಲಕ ಸಂಪರ್ಕಿಸುತ್ತಿದ್ದ ಶಿವಕೃಷ್ಣ, ಆನ್‌ಲೈನ್ ಮೂಲಕ ಹಣ ವರ್ಗಾಯಿಸಿ ಗಾಂಜಾ ಖರೀದಿಸುತ್ತಿದ್ದ. ಬಳಿಕ ದುಬಾರಿ ಬೆಲೆಗೆ ಗ್ರಾಹಕರಿಗೆ ಆತ ಮಾರುತ್ತಿದ್ದ. ಶಿವಕೃಷ್ಣ ಬಳಿ 5.180 ಕೇಜಿ ಗಾಂಜಾ ಜಪ್ತಿ ಮಾಡಲಾಗಿದೆ. ಮತ್ತೊಂದು ದಾಳಿಯಲ್ಲಿ ಗುಜರಿ ವ್ಯಾಪಾರಿ ರೋಷನ್ ಸಿಕ್ಕಿಬಿದ್ದಿದ್ದಾನೆ. ತನ್ನ ಗುಜರಿ ಮಳಿಗೆಯಲ್ಲಿ ಗಾಂಜಾ ಸಂಗ್ರಹಿಸಿಟ್ಟುಕೊಂಡು ಆತ ಮಾರುತ್ತಿದ್ದ. ಈ ಇಬ್ಬರು ಮೈಕೋ ಲೇಔಟ್ ವ್ಯಾಪ್ತಿಯಲ್ಲಿ ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಇನ್ನು ಬಾಗಲೂರು ಹಾಗೂ ರಾಮಮೂರ್ತಿ ನಗರ ವ್ಯಾಪ್ತಿಯಲ್ಲಿ ನೆಲೆಸಿದ್ದ ವಿದೇಶಿ ಪಡ್ಲರ್‌ಗಳನ್ನು ಸಿಸಿಬಿ ಸೆರೆ ಹಿಡಿದಿದೆ.
ಬೆಂಗಳೂರು: ನಿಮ್ಮ ಹೆಸರಿಗೆ ಡ್ರಗ್ಸ್ ಬಂದಿದೆ ಎಂದು 1.8 ಕೋಟಿ ಸುಲಿಗೆ: 8 ಖದೀಮರು ಅರೆಸ್ಟ್..!
ಮನೆಗಳ ಮೇಲೆ ದಿಢೀರ್ ದಾಳಿ
ನಗರದಲ್ಲಿ ಅನಧಿಕೃತವಾಗಿ ನೆಲೆಸಿದ್ದ ವಿದೇಶಿ ಪ್ರಜೆಗಳ ವಿರುದ್ಧ ರಾಮಮೂರ್ತಿ ನಗರ, ಸೋಲದೇವನಹಳ್ಳಿ, ಕೆ.ಆರ್.ಪುರ, ಹೆಣ್ಣೂರು, ಕೆ.ಜಿ.ಹಳ್ಳಿ ಹಾಗೂ ಆರ್.ಟಿ.ನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸಿಸಿಬಿ ವಿಶೇಷ ಕಾರ್ಯಾಚರಣೆ ನಡೆಸಿದೆ. ಈ ದಾಳಿ ವೇಳೆ 10 ವಿದೇಶಿ ಪ್ರಜೆಗಳು ಹಾಗೂ ಓರ್ವ ಸ್ಥಳೀಯನನ್ನು ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿದ್ದಾರೆ.
ಅಲ್ಲದೆ ಓರ್ವ ವಿದೇಶಿ ಪ್ರಜೆ ಬಳಿ ₹22 ಲಕ್ಷ ಮೌಲ್ಯದ 105 ಗ್ರಾಂ ಕೊಕೇನ್, 110 ಗ್ರಾಂ ಎಡಿಎಂಎ ಕ್ರಿಸ್ಟೆಲ್ ಜಪ್ತಿಯಾಗಿದೆ. ಈತನ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇನ್ನುಳಿದವರನ್ನು ವಿದೇಶಿಯರ ನಿರ್ಬಂಧನಾ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.