Asianet Suvarna News Asianet Suvarna News

ಕೊಟ್ಟಿಗೆಗೆ ನುಗ್ಗಿ ಗರ್ಭಿಣಿ ಹಸುವಿನ ಮೇಲೆ ರೇಪ್‌, ಬಂಗಾಳ ವ್ಯಕ್ತಿಯ ಬಂಧನ!

ಗರ್ಭಿಣಿ ಹಸುವಿನ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಬಂಗಾಳದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಘಟನೆಯ ನಂತರ ಅತಿಯಾದ ರಕ್ತಸ್ರಾವದಿಂದ ಹಸು ಸಾವನ್ನಪ್ಪಿದೆ ಎಂದು ದೂರುದಾರರು ತಿಳಿಸಿದ್ದಾರೆ.
 

man arrested and sent to jail for raping pregnant cow in Bengal South 24 Parganas district san
Author
First Published Aug 31, 2022, 2:56 PM IST

ಕೋಲ್ಕತ್ತಾ (ಆ.31): ಗರ್ಭಿಣಿಯಾಗಿದ್ದ ಹಸುವಿನ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ 29 ವರ್ಷದ ವ್ಯಕ್ತಿಯನ್ನು ಬಂಧಿಸಿ, ಜೈಲಿಗೆ ಹಾಕಲಾಗಿದೆ. ದಕ್ಷಿಣ 24 ಪರಗಣ ಜಿಲ್ಲೆಯ ನಮ್‌ಖಾನಾ ಬ್ಲಾಕ್‌ನ ಉತ್ತರ ಚಂದನ್‌ಪಿಡಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಹಸುವಿನ ಮಾಲೀಕರು ನೀಡಿದ ದೂರಿನ ಆರೋಪದ ಮೇಳೆ ಪ್ರದ್ಯುತ್‌ ಭೂಯಾನನ್ನು ಬಂಧಿಸಲಾಗಿದೆ. ಸ್ಥಳೀಯ ಮತ್ತು ಪೊಲೀಸ್ ಮೂಲಗಳ ಪ್ರಕಾರ, ಉತ್ತರ ಚಂದನಪಿಡಿ ನಿವಾಸಿ ಆರತಿ ಭೂಯಾ ಮತ್ತು ಅವರ ಕುಟುಂಬವು ಕೆಲವು ದಿನಗಳ ಹಿಂದೆ ಅವರ ನೆರೆಹೊರೆಯವರಾದ ಪ್ರದ್ಯುತ್ ಅವರು ತಮ್ಮ ಮನೆಯ ಹಿಂದಿನ ದನದ ಕೊಟ್ಟಿಗೆಗೆ ನುಗ್ಗಿ ತಮ್ಮ ಹಸುವಿನ ಮೇಲೆ "ಕ್ರೂರವಾಗಿ ಅತ್ಯಾಚಾರ" ಮಾಡಿದ್ದಾರೆ ಎಂದು ದೂರಿದ್ದಾರೆ. "ಮಧ್ಯರಾತ್ರಿಯ ಸುಮಾರಿಗೆ ಅತ್ಯಾಚಾರಕ್ಕೊಳಗಾದ ನಂತರ ಅತಿಯಾದ ರಕ್ತಸ್ರಾವದಿಂದ ಹಸು ಸಾವನ್ನಪ್ಪಿದೆ" ಎಂದು ದೂರುದಾರರು ತಿಳಿಸಿದ್ದಾರೆ. ಆರೋಪಿ ಪ್ರದ್ಯುತ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಂತರ ಮಂಗಳವಾರ ಕಾಕದ್ವೀಪ ಉಪವಿಭಾಗೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. "ಪ್ರದ್ಯುತ್ ವಿರುದ್ಧ ಲೆಕ್ಕವಿಲ್ಲದಷ್ಟು ಆರೋಪಗಳಿವೆ. ಈತ ಈ ಹಿಂದೆ ಮೇಕೆಗಳು, ವಾಹನಗಳು ಮತ್ತು ಹೊಲಗಳಲ್ಲಿ ತರಕಾರಿಗಳನ್ನು ಕಳ್ಳತನ ಮಾಡಿದ್ದ" ಎಂದು ಚಂದನಪಿಡಿ ಗ್ರಾಮದ ನಿವಾಸಿಯೊಬ್ಬರು ಹೇಳಿದರು.

ಇದಕ್ಕೂ ಮುನ್ನ ರಾಜಸ್ಥಾನದಲ್ಲೂ (Rajasthan) ಕೂಡ ಇದೇ ರೀತಿಯ ಘಟನೆ ನಡೆದಿತ್ತು. ರಾಜಸ್ಥಾನದಲ್ಲಿ ಹಸುವಿನ (Rape On Cow) ಮೇಲೆ ಅತ್ಯಾಚಾರವೆಸಗಿರುವ ವಿಲಕ್ಷಣ ಮತ್ತು ಹೇಯ ಘಟನೆಯೊಂದು ನಡೆದಿತ್ತು. ಅಲ್ವಾರ್ (Alwar) ಜಿಲ್ಲೆಯ ಭಿವಾಡಿ ಪ್ರದೇಶದ ಚುಹಾದ್‌ಪುರ (Chuhadpur) ಪ್ರದೇಶದಲ್ಲಿ ಹಸುವಿನ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ನಾಲ್ವರು ಹಸುವಿನ ಜೊತೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಕ್ರಮ ಕೈಗೊಂಡಿದ್ದರು. ಅಲ್ವಾರ್ ಜಿಲ್ಲೆಯ ಚೌಪಾಂಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ನಾಲ್ವರು ಚುಹಾದ್‌ಪುರ ನಿವಾಸಿಗಳಾದ ವಾರಿಸ್, ಜುಬೇರ್, ಚುನಾ ಮತ್ತು ತಲೀಮ್ ವಿರುದ್ಧ ಪೊಲೀಸ್ ದೂರು ದಾಖಲಾಗಿತ್ತು. ಜುಬೇರ್ ಮತ್ತು ಚುನಾ ಅವರನ್ನು ತಕ್ಷಣವೇ ಬಂಧಿಸಲಾಗಿತ್ತು. 

ಫೆಬ್ರವರಿ 10 ರಂದು ಈ ನಾಲ್ವರು ಹಸುವನ್ನು ಹತ್ತಿರದ ಪರ್ವತದ ಇಳಿಜಾರಿಗೆ ಕೊಂಡೊಯ್ದ ರೇಪ್‌ ಮಾಡಿದ್ದಾರೆ ಮತ್ತು ಅವರಲ್ಲಿ ಮೂವರು ಹಸುವಿನ ಜೊತೆ ಅಸ್ವಾಭಾವಿಕ ಲೈಂಗಿಕತೆಯಲ್ಲಿ ತೊಡಗಿಸಿಕೊಂಡರು ಮತ್ತು ಇನ್ನೊಬ್ಬರು ವೀಡಿಯೊವನ್ನು ಚಿತ್ರೀಕರಿಸಿದರು. ವರದಿಯ ಪ್ರಕಾರ ಹಸುವಿನ ಮೇಲೆ ಅತ್ಯಾಚಾರ ಮಾಡುವ ಮೊದಲು ಶಬ್ದ ಮಾಡದಂತೆ ಕಾಲಿನಿಂದ ಅದರ ಬಾಯಿಯನ್ನು ಮುಚ್ಚಿದ್ದರು.

2018ರಲ್ಲಿ ನಡೆದಿತ್ತು ಪ್ರಕರಣ: ಇನ್ನು 2018ರಲ್ಲಿ ಮಧ್ಯಪ್ರದೇಶದ (Madya Pradesh) ಭೋಪಾಲ್‌ನಲ್ಲೂ (Bhopal) ಕೂಡ ಇದೇ ರೀತಿಯ ಘಟನೆ ನಡೆದಿತ್ತು. ಅಂದು 70 ವರ್ಷದ ವೃದ್ಧನೊಬ್ಬ ಹಸುವಿನ ಮೇಲೆ ಅತ್ಯಾಚಾರ ಮಾಡಿದ್ದ. ರಾಜಗರ್‌ ಜಿಲ್ಲೆಯಲ್ಲಿ ಈ ಘಟನೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಚೋಟೇ ಖಾನ್‌ರನ್ನು ಬಂಧಿಸಲಾಗಿತ್ತು. ಆತನ ವಿರುದ್ಧ ಸೆಕ್ಷನ್‌ 377 (ಪ್ರಕೃತಿಗೆ ವಿರುದ್ಧವಾದ ಲೈಂಗಿಕ ಕ್ರಿಯೆ) ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ಚೋಟೇ ಖಾನ್‌ನ ವಿರುದ್ಧ ಸ್ಥಳೀಯ ಉದ್ಯಮಿ ಮಹೇಶ್‌ ಅಗರ್ವಾಲ್‌ ನೀಡಿದ ದೂರಿನ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗಿತ್ತು. ಸುತಾಲಿಯಾ ಪೊಲೀಸ್‌ ಎಸ್‌ಎಚ್‌ಓ ಪರ್ಮಾರ್‌ ಪ್ರಕಾರ, ಚೋಟೇ ಖಾನ್‌ ಹಸುವಿನೊಂದಿಗೆ ಅಹಸಜ ಲೈಂಗಿಕ ಪ್ರಕ್ರಿಯೆಯಲ್ಲಿ ತೊಡಗಿದ್ದ ವೇಳೆ ಮಹೇಶ್‌ ಅಗರ್ವಾಲ್ ನೋಡಿದ್ದರು. ಅದರಂತೆ ಅವರು ದೂರು ದಾಖಲು ಮಾಡಿದ್ದರು. ಆದರೆ, ಆ ವೇಳೆ ಚೋಟೆ ಖಾನ್‌ನ ಕುಟುಂಬ ಮಾತ್ರ ಇದನ್ನು ನಿರಾಕರಿಸಿತ್ತು. ಜಮೀನಿನ ವಿವಾದದ ಕಾರಣಕ್ಕಾಗಿ ಅವರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎನ್ನಲಾಗಿತ್ತು

 

Follow Us:
Download App:
  • android
  • ios