ಲಕ್ನೋ[ಫೆ.07]: ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ಗೋಮ್ತಿ ನಗರದಲ್ಲಿ ಆರನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ತನ್ನ ಮಗಳಿಗೆ ವ್ಯಾಬನ್ ಡ್ರೈವರ್ ನಿರಂತರ ಕಿರುಕುಳ ನೀಡುತ್ತಿದ್ದ, ಇದೇ ಕಾರಣದಿಂದ ತನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಬಾಲಕಿಯ ತಾಯಿ ಆರೋಪಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈ ಸಂಬಂಧ ತನಿಖೆ ಆರಂಭಿಸಿದ್ದು, ವ್ಯಾನ್ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

ಇನ್ನು ಘಟನಾ ಸ್ಥಳದಲ್ಲಿ ಯಾವುದೇ ಸೂಸೈಡ್ ನೋಟ್ ಲಭ್ಯವಾಗಿಲ್ಲ ಎನ್ನಲಾಗಿದ್ದು, ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ವೇಳೆ ಆಕೆಯ ತಾಯಿ ಶಾಲಾ ಆವರಣದಲ್ಲೇ ಇದ್ದರೆಂದು ಹೇಳಲಾಗಿದೆ. 

ಪ್ರೀತಿಸುವಂತೆ ಪದೇ ಪದೇ ಕಾಡಿದ ಆಟೋ ಚಾಲಕ : ಒಪ್ಪದಿದ್ದಾಗ ತಳ್ಳಿ ಕೊಲೆಗೈದ ?!

ಕಿರುಕಕುಳವೇ ಆತ್ಮಹತ್ಯೆಗೆ ಕಾರಣ?

ಗೋಮ್ತೀನಗರದ ವಿಶಾಲ್ ಖಂಡ್ ಪ್ರದೇಶದ ಶಾಲೆಯೊಂದರಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬಳ 13 ವರ್ಷದ ಮಗಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹೀಗಿರುವಾಗ ತಮ್ಮ ಮನೆ ಬಳಿ ವಾಸಿಸುತ್ತಿರುವ ಖಾಸಗಿ ವ್ಯಾನ್ ಚಾಲಕ ತನ್ನ ಮಗಳಿಗೆ ಕಿರುಕುಳ ನೀಡುತ್ತಿದ್ದ. ಮಾನ, ಮರ್ಯಾದೆಗೆ ಅಂಜಿ ತನ್ನ ಮಗಳು ಕಂಪ್ಲೇಂಟ್ ಮಾಡುವುದನ್ನೇ ಬಿಟ್ಟಿದ್ದಳು ಎಂಬುವುದು ಮಗಳನ್ನು ಕಳೆದುಕೊಂಡ ತಾಯಿಯ ಮಾತಾಗಿದೆ. 

ಪೋಕ್ಸೋ ಕಾಯ್ದೆಯಡಿ ವ್ಯಾನ್ ಚಾಲಕನ ವಿರುದ್ಧ ದೂರು ದಾಖಲು

ಪೊಲೀಸಡು ನಡೆಸಿರುವ ತನಿಖೆಯಲ್ಲಿ ಬೆಳಗ್ಗೆ ತಾಯಿ ಹಾಗೂ ಅಕ್ಕ ಮನೆಯಲ್ಲಿ ಇರಲಿಲ್ಲ. ಮನೆಯಲ್ಲಿ ಕೇವಲ ವಿದ್ಯಾರ್ಥಿನಿ ಹಾಗೂ ತಮ್ಮ ಹಾಗೂ ಮೂರು ವರ್ಷದ ತಂಗಿ ಮಾತ್ರ ಇದ್ದರು. ಮಧ್ಯಾಹ್ನ ಸುಮಾರು 12 ಗಂಟೆಗೆ ನೆರೆ ಮನೆಯ ಮಹಿಳೆಯೊಬ್ಬರು, ಇವರ ಮನೆಗೆ ಆಗಮಿಸಿದಾಗ ಬಾಲಕಿ ನೇಣಿಗೆ ಶರಣಾಗಿರುವುದು ಗಮನಿಸಿದ್ದಾರೆ. ಕೂಡಲೇ ಬಾಲಕಿಯ ತಾಯಿಗೆ ಮಾಹಿತಿ ನೀಡಿದ್ದಾರೆ. ಅತ್ತ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ತಾಯಿ ನೀಡಿದ ದೂರಿನನ್ವಯ ವ್ಯಾನ್ ಚಾಲಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ, ಕಿರುಕುಳ ನೀಡಿದ ಹಾಗೂ ಆತ್ಮಹತ್ಯೆಗೆ ಪ್ರೇರೇಪಿಸಿದ ಕೇಸ್ ದಾಖಲಿಸಿ ಬಂಧಿಸಿದ್ದಾರೆ.

ಟಿಕ್ ಟಾಕ್ ಮಾಡುತ್ತಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ