ಪ್ರೀತಿಸಿದ ಹುಡುಗ ಕೈಕೊಟ್ಟಿದ್ದಕ್ಕೆ ಯುವತಿ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಗೌಡಹಳ್ಳಿಯಲ್ಲಿ ನಡೆದಿದೆ.

ಕೆ.ಆರ್‌.ನಗರ (ಜು.24) : ಪ್ರೀತಿಸಿದ ಹುಡುಗ ಕೈಕೊಟ್ಟಿದ್ದಕ್ಕೆ ಯುವತಿ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಗೌಡಹಳ್ಳಿಯಲ್ಲಿ ನಡೆದಿದೆ.

ಗ್ರಾಮದ ನಿಸರ್ಗ (20) ಮೃತ ಯುವತಿ. ಕೆ.ಆರ್‌.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ಓದುತ್ತಿದ್ದ ನಿಸರ್ಗ ಅದೇ ಕಾಲೇಜಿನ ಸುಹಾಸ್‌ ರೆಡ್ಡಿ ಎಂಬ ಯುವಕನನ್ನು ಪ್ರೀತಿಸಿದ್ದಳು. ಇತ್ತೀಚೆಗೆ ಸುಹಾಸ್‌ ವರ್ತನೆಯಲ್ಲಿ ಬದಲಾವಣೆಯಾಗಿ, ಆತ ಮತ್ತೊಬ್ಬ ಯುವತಿ ಜೊತೆ ತಿರುಗಾಡುತ್ತಿರುವುದು ಈಕೆಗೆ ಗೊತ್ತಾಗಿದೆ. ಅಂದಿನಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ನಿಸರ್ಗ ಆ ಯುವತಿಯ ಪೋಷಕರಿಗೂ ಸುಹಾಸ್‌ ಜತೆಗಿನ ಮಗಳ ಸಲಿಗೆಯ ಬಗ್ಗೆ ತಿಳಿಸಿದ್ದಾಳೆ. ಈ ವೇಳೆ ನಿಸರ್ಗಳನ್ನು ಆ ಯುವತಿಯ ಮನೆಯವರು ನಿಂದಿಸಿದ್ದಾರೆ ಎನ್ನಲಾಗಿದೆ. ಇದರಿಂದ ಮನನೊಂದ ನಿಸರ್ಗ ಡೆತ್‌ನೋಟ್‌ ಬರೆದಿಟ್ಟು ಇಲಿ ಪಾಷಾಣ ಸೇವಿಸಿ ಮೃತಪಟ್ಟಿದ್ದಾಳೆ.

Bengaluru crime: ಕೈಕೊಡಲು ಯತ್ನಿಸಿದ ಪ್ರೇಮಿಗೆ ಇರಿದ ಪ್ರೇಯಸಿ!,ಇದೆಂಥ ಪ್ರೀತಿ?

ಬಸ್ಸಲ್ಲಿ ಲೈಂಗಿಕ ಕಿರುಕುಳ ಕೊಟ್ಟವಗೆ ಧರ್ಮದೇಟು

ಕೆ.ಆರ್‌.ಪೇಟೆ: ಇಲ್ಲಿನ ಬಸ್‌ ನಿಲ್ದಾಣದಲ್ಲಿ ಅಪ್ರಾಪ್ತೆ ತುಟಿ ಕಚ್ಚಿ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದವನಿಗೆ ಸಾರ್ವಜನಿಕರು ಧರ್ಮದೇಟು ನೀಡಿದ ಘಟನೆ ಭಾನುವಾರ ಸಂಜೆ ನಡೆದಿದೆ.

ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಲಕ್ಷ್ಮೀಪುರ ಗ್ರಾಮದ ನಿವಾಸಿ ನವೀನ್‌ (34) ಎಂಬಾತನೇ ಧರ್ಮದೇಟು ತಿಂದು ಈಗ ಪೊಲೀಸರ ಅತಿಥಿ ಯಾಗಿರುವ ಆರೋಪಿ. ಶೀಳನೆರೆ ಮಾರ್ಗದತ್ತ ಹೊರಡಲು ನಿಂತಿದ್ದ ಬಸ್ಸಿನೊಳಗೆ ಏಕಾಏಕಿ ಏರಿದವನೇ ಸೀಟಿನಲ್ಲಿ ಕುಳಿತಿದ್ದ ಅಪ್ರಾಪ್ತೆಯೊಬ್ಬಳ ಮೈ-ಕೈ ಮುಟ್ಟಿಲೈಂಗಿಕ ಕಿರುಕುಳ ನೀಡಿ ಎಳೆದಾಡಿದ್ದಾನೆ. ಈ ವೇಳೆ ಬಾಲಕಿ ರಕ್ಷಣೆಗಾಗಿ ಕಿರುಚಿಕೊಂಡಾಗ ಆರೋಪಿಯು ಬಾಲಕಿಯ ಬಾಯನ್ನು ಕಚ್ಚಿ ಗಾಯಗೊಳಿಸಿ ಅಲ್ಲಿಂದ ಕಾಲ್ಕೀಳಲು ಯತ್ನಿಸಿದ್ದಾನೆ. ಆಗ ಆರೋಪಿಯ ಬೆನ್ನಟ್ಟಿಹಿಡಿದ ಸಾರ್ವಜನಿಕರು ಆತನಿಗೆ ಧರ್ಮದೇಟು ನೀಡಿ ಪಟ್ಟಣ ಪೊಲೀಸರ ವಶಕ್ಕೆ ನೀಡಿದ್ದಾರೆ.

ಪ್ರೇಯಸಿಯ ಕಥೆ ಮುಗಿಸಿ ದೇಶ ಸುತ್ತಿದ ಕಿಲ್ಲರ್ ಪ್ರೇಮಿ: ಹೈದರಾಬಾದ್‌ ಟೆಕ್ಕಿಯನ್ನ ಡೆಲ್ಲಿ ಬಾಯ್ ಹೇಗೆಲ್ಲಾ ಕಾಡಿಬಿಟ್ಟ..?