ಬೆಂಗಳೂರು(ಸೆ. 20)  ಪ್ರೀತಿ ಮಾಡಿದ್ದೇ ಯುವಕನಿಗೆ ಮುಳುವಾಯ್ತಾ?  ಪ್ರಿಯತಮ ಪ್ರೀತಿ ನಿರಾಕರಣೆ ಮಾಡಿದ್ದಕ್ಕೆ  ಪ್ರಿಯತಮೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.  ಇದನ್ನು ನೋಡಿದ ಹುಡುಗಿಯ ಅಣ್ಣ ಸಿಟ್ಟಿನಿಂದ ಪ್ರಿಯತಮನ ಹತ್ಯೆ ಮಾಡಿದ್ದಾನೆ.

ಬೆಂಆರೋಪಿಯನ್ನು  ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಸ್ಥಳಕ್ಕೆ ಡಿಸಿಪಿ ದೇವರಾಜ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ತಂಗಿ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಸಿಟ್ಟಾದ ಅಣ್ಣ, ನನ್ನ ತಂಗಿಯ ಬಾಳು ಈತನಿಂದಲೇ ಹಾಳಾಯ್ತು ಎಂದು ಯುವಕ ರಾಜೇಶ್ ನನ್ನು ಕೊಚ್ಚಿಕೊಲೆ ಮಾಡಿದ್ದಾನೆ. ಮಧ್ಯಾಹ್ನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ರಾಜೇಶ್‍ನನ್ನು ಅಣ್ಣ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಕೊಲೆಯ ಬಳಿಕ ಆರೋಪಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. 

ಬಟ್ಟೆ ಬಿಚ್ಚಿ ಮಂಚ ಏರಲು ಕರೆದಿದ್ದ ನಿರ್ದೇಶಕ

ಪ್ರಕರಣದ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ನೀಡಿಲ್ಲ. ಆದರೆ ಎರಡು ಜೀವಗಳು ಬಲಿಯಾಗಿದ್ದು ಆಯಾ ಕುಟುಂಬಗಳು ನೋವು ಅನುಭವಿಸಬೇಕಾಗಿದೆ.