Asianet Suvarna News Asianet Suvarna News

ಲವ್ ಜಿಹಾದ್; ಇಡೀ ಕುಟುಂಬದ ಮೇಲೆ ಕೇಸ್, ಮಹಿಳೆಯರು ಸೇರಿ 6  ಜನರ ಬಂಧನ

ಉತ್ತರ ಪ್ರದೇಶದಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ/ ಮನೆಯಿಂದ ಹೊರಹೋದ ಹಿಂದೂ ಯುವತಿ ಮತಾಂತರ/ ಮದುವೆಯಾಗುವುದಕ್ಕಾಗಿಯೇ ಮತಾಂತರ/  ಇಡೀ ಕುಟುಂಬದ ಮೇಲೆ ಪ್ರಕರಣ ದಾಖಲು

Love jihad 11 of family booked in UP six in jail mah
Author
Bengaluru, First Published Dec 22, 2020, 9:45 PM IST

ಆಗ್ರಾ (ಡಿ. 22)  ಮನೆ ತೊರೆದ  21 ವರ್ಷದ ಮಹಿಳೆ ಸುಮಾರು ಒಂದು ತಿಂಗಳ ನಂತರ ಮುಸ್ಲಿಂಗೆ ಮತಾಂತರಗೊಂಡು ದೆಹಲಿಯಲ್ಲಿ ಮುಸ್ಲಿಂ ಯುವಕನನ್ನು ಮದುವೆಯಾಗುತ್ತಾರೆ.  ಉತ್ತರ ಪ್ರದೇಶದ ಪೊಲೀಸರು ಹೊಸ ಲವ್ ಜಿಹಾದ್ ಕಾನೂನಿನ ಅಡಿ ಮುಸ್ಲಿಂ  ಯುವಕ ಮತ್ತು ಆತನ ಇಡೀ ಕುಟುಂಣಬದ ಮೇಲೆ ಪ್ರಕರಣ ದಾಖಲಿಸುತ್ತಾರೆ.

 25 ವರ್ಷದ ಮೊಹಮ್ಮದ್ ಜಾವೇದ್ ನನ್ನು ಬಿಟ್ಟು  ಅವರ ಕುಟುಂಬದ ಮೂವರು ಮಹಿಳೆಯರು ಸೇರಿದಂತೆ 10  ಜನರ ಮೇಲೆ ಪ್ರಕರಣ ದಾಖಲಾಗಿದೆ..  ಇನ್ನು ನಾಲ್ಕು ಜನರನ್ನು ಬಂಧಿಸಬೇಕಿದ್ದು ಮಾಹಿತಿ ನೀಡಿದವರಿಗೆ  ಈಗ 25 ಸಾವಿರ ರೂ.ಗಳ ಬಹುಮಾನವನ್ನು ಪೊಲೀಸರು ಘೋಷಿಸಿದ್ದಾರೆ.

ಯುವತಿಯ ತಂದೆ ಗುರುವಾರ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಜಾವೇದ್ ಪರ ವಕೀಲರು ನ್ಯಾಯಾಲಯಕ್ಕೆ ಯುವತಿ ಮತಾಂತರ ಮತ್ತು ಮದುವೆಯ ಮಾಹಿತಿ ನೀಡಿದ್ದಾರೆ.

ಮದುವೆಗೆ ಮುನ್ನ ರಾಹುಲ್ ವರ್ಮಾ..ಮದುವೆ ನಂತರ ತೌಫೀಕ್

ಈ ಬಗ್ಗೆ ಮಾಹಿತಿ ನೀಡಿದ ಡಿಎಸ್ಪಿ ರಾಮ್ ನಿವಾಸ್ ಸಿಂಗ್, ಜಾವೇದ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಐಪಿಸಿ ಸೆಕ್ಷನ್ 366 ರ ಅಡಿಯಲ್ಲಿ (ಮಹಿಳೆಯನ್ನು ಅಪಹರಿಸುವುದು, ಅಪಹರಿಸುವುದು ಅಥವಾ ಅವಳ ಮದುವೆಯನ್ನು ಒತ್ತಾಯಿಸಲು ಪ್ರೇರೇಪಿಸುವುದು ಇತ್ಯಾದಿ)  ಆಧಾರದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದಿದ್ದಾರೆ.

ಪೊಲೀಸರು ಹೇಳುವಂತೆ  ನವೆಂಬರ್ 17 ರಿಂದ ಮಹಿಳೆ ಕಾಣೆಯಾಗಿದ್ದಳು. ಜಾವೇದ್ ಆಕೆಯ ಮನೆ ಸಮೀಪವೇ ವಾಸವಿದ್ದ. ಆದರೆ ಮಹಿಳೆ ಕುಟುಂಬದವರು ಆರಂಭದಲ್ಲಿ ದೂರು ದಾಖಲಿಸಿರಲಿಲ್ಲ.

ಕುಟುಂಬದವರ ವಿಚಾರಣೆ ನಡೆಸಿರುವ ಪೊಲೀಸರು ಬಲವಂತದ ಮತಾಂತರ ನಡೆದಿರುವ ಸಾಧ್ಯತೆ ಇದೆ ಎಂದಿದ್ದು ಕುಟುಂಬದ ಎಲ್ಲ ಸದಸ್ಯರು ಜಾವೇದ್ ನೊಂದಿಗೆ ನಿರಂತರ ಸಂಪರ್ಕದಲ್ಲಿಒದ್ದರು ಎಂಬ ಮಾಹಿತಿ ನೀಡಿದ್ದಾರೆ.

ನ್ಯಾಯಾಲಯದ ಆದೇಶದ ಮೇರೆಗೆ ಇವರೆಲ್ಲರನ್ನು ಜೈಲಿಗೆ ಕಳುಹಿಸಲಾಗಿದೆ. ಜಾವೇದ್ ಮತ್ತು ಪರಾರಿಯಾಗಿದ್ದ ಇತರ ನಾಲ್ವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.  ಬಂಧಿತ ಆರು ಜನರಲ್ಲಿ ಜಾವೇದ್ ಅವರ ಅತ್ತಿಗೆ. ಆತನ ಸಹೋದರಿ, ಇಬ್ಬರು ಸಹೋದರರು  ಸೇರಿದ್ದಾರೆ. 

 

Follow Us:
Download App:
  • android
  • ios