ಹಿಮಾಚಲಪ್ರದೇಶ ಮೂಲದ ಕಾನೂನು ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು (ಆ.7) : ಹಿಮಾಚಲಪ್ರದೇಶ ಮೂಲದ ಕಾನೂನು ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಶ್ರೀಗಂಧದ ಕಾವಲು ‘ಡಿ’ಗ್ರೂಪ್ ಲೇಔಟ್‌ನ ಪೇಯಿಂಗ್ ಗೆಸ್ಟ್(ಪಿಜಿ) ನಿವಾಸಿ ಆರ್ಯ ಕುಮಾರ್ ನಡ್ಡಾ (23) ಆತ್ಮಹತ್ಯೆ ಮಾಡಿಕೊಂಡವನು. ಭಾನುವಾರ ಮಧ್ಯಾಹ್ನ ಸ್ನೇಹಿತರು ಪಿಜಿಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಹಿಮಾಚಲಪ್ರದೇಶದಲ್ಲಿ ಇರುವ ಮೃತನ ಕುಟುಂಬಕ್ಕೆ ಮಾಹಿತಿ ನೀಡಿದ್ದು, ಅವರು ನಗರಕ್ಕೆ ಬಂದ ಬಳಿಕ ಮರಣೋತ್ತರ ಪರೀಕ್ಷೆ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪತ್ನಿ ಹಾಗೂ ಪೋಷಕರ ಕಿರುಕುಳಕ್ಕೆ ಬೇಸತ್ತು ನವವಿವಾಹಿತ ಆತ್ಮಹತ್ಯೆಗೆ ಶರಣು!
ಮೃತ ಆರ್ಯ ಕುಮಾರ್ ನಡ್ಡಾ ನಾಗರಬಾವಿಯ ಕೆಎಲ್‌ಇ ಸೊಸೈಟಿ ಕಾನೂನು ಕಾಲೇಜಿನಲ್ಲಿ ಮೂರನೇ ವರ್ಷದ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದ. ‘ಡಿ’ ಗ್ರೂಪ್ ಲೇಔಟ್‌ನ ಪಿಜಿಯಲ್ಲಿ ನೆಲೆಸಿದ್ದ. ಭಾನುವಾರ ರೂಮ್‌ನಲ್ಲಿ ಯಾರು ಇಲ್ಲದ ಸಮಯದಲ್ಲಿ ಸ್ಕಿಪಿಂಗ್ ಹಗ್ಗದಿಂದ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇತ್ತೀಚೆಗೆ ಆರ್ಯ ಕುಮಾರ್ ತೀವ್ರವಾದ ಮೈಗ್ರೇನ್ ತಲೆನೋವಿನಿಂದ ಬಳಲುತ್ತಿದ್ದ ಎಂದು ತಿಳಿದು ಬಂದಿದೆ. ಘಟನಾ ಸ್ಥಳದಲ್ಲಿ ಸದ್ಯಕ್ಕೆ ಯಾವುದೇ ಮರಣಪತ್ರ ಸಿಕ್ಕಿಲ್ಲ. ಈ ಸಂಬಂಧ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುವಕನ ಅನುಮಾನಾಸ್ಪದ ಸಾವು
ಕಡೂರು: ಹನುಮನಹಳ್ಳಿ ಕೆರೆಯ ಸಮೀಪದ ದೊಡ್ಡ ಗುಂಡಿಗೆ ಬಿದ್ದು ಯುವಕನ ಮೃತಪಟ್ಟಿರುವ ಬಗ್ಗೆ ಯಗಟಿ ಪೋಲೀಸ್ ಠಾಣೆಯಲ್ಲಿ ಅನುಮಾನಸ್ಪದ ಸಾವು ಎಂದು ದೂರು ದಾಖಲಾಗಿದೆ.
ಹೊಸ ಟ್ರ್ಯಾಕ್ಟರ್ ಪಲ್ಟಿ; ಮನೆಯವರಿಗೆ ಹೆದರಿ ಮಾಲೀಕ ನೇಣಿಗೆ ಶರಣು!
ಯಗಟಿ ಸಮೀಪದ ಹನುಮನಹಳ್ಳಿ ಗ್ರಾಮದ ನವೀನ್(28) ಭಾನುವಾರ ಯಗಟಿ-ಹನುಮನಹಳ್ಳಿ ಕೆರೆಯ ಸಮೀಪದ ದೊಡ್ಡ ಗುಂಡಿಗೆ ಬಿದ್ದು ಮೃತಪಟ್ಟಿದ್ದು, ಹನುಮನಹಳ್ಳಿ ಗ್ರಾಮದ ಕೃಷ್ಣಮೂರ್ತಿ ಎಂಬುವರ ಮಗ ನವೀನ್ ಈತನ ಬೈಕ್ ಮತ್ತು ಚಪ್ಪಲಿ ಕೆರೆ ಏರಿಯ ಮೇಲೆ ದೊರೆತಿದೆ. ಶವ ಕೆರೆಯ ಪಕ್ಕದಲ್ಲಿರುವ ದೊಡ್ಡಗುಂಡಿಯಲ್ಲಿ ಸಿಕ್ಕಿದೆ. ಕೃಷ್ಣಮೂರ್ತಿ ಅವರ ದೂರನ್ನು ಪೋಲೀಸರು ದಾಖಲಿಸಿಕೊಂಡಿದ್ದಾರೆ. ಮೃತನಿಗೆ ಪತ್ನಿ ಇದ್ದಾರೆ.
