Asianet Suvarna News Asianet Suvarna News

ಜಮೀನು ವಿವಾದ ಪರಸ್ಪರ ದೊಣ್ಣೆಗಳಿಂದ ಬಡಿದಾಡಿಕೊಂಡ ಕುಟುಂಬ!

ಜಮೀನು ವಿವಾದಿಂದ ಎರಡು ಕುಟುಂಬಗಳ ನಡುವೆ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಪರಸ್ಪರ ದೊಣ್ಣೆಗಳಿಂದ ಬಡಿದಾಡಿಕೊಂಡ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹಿಪ್ಪಾಡಿ ಗ್ರಾಮದಲ್ಲಿ ನೆಡದಿದೆ.

Land dispute two  family hit each other with sticks in hippadi village tumakur rav
Author
First Published May 27, 2024, 1:20 PM IST

ತುಮಕೂರು (ಮೇ.27): ಜಮೀನು ವಿವಾದಿಂದ ಎರಡು ಕುಟುಂಬಗಳ ನಡುವೆ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಪರಸ್ಪರ ದೊಣ್ಣೆಗಳಿಂದ ಬಡಿದಾಡಿಕೊಂಡ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹಿಪ್ಪಾಡಿ ಗ್ರಾಮದಲ್ಲಿ ನೆಡದಿದೆ.

ರಂಗಸ್ವಾಮಿ, ಪತ್ನಿ ಲೀಲಾವತಿ ಮೇಲೆ ಹಲ್ಲೆಗೊಳಗಾದವರು. ಮುದ್ದುರಂಗಚಾರ್ ಹಾಗೂ ಆತನ ಕುಟುಂಬದವರು ಹಲ್ಲೆ ದೊಣ್ಣೆಗಳಿಂದ ರಂಗಸ್ವಾಮಿ ದಂಪತಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ರಂಗಸ್ವಾಮಿ ತಲೆಗೆ ಗಂಭೀರ ಪೆಟ್ಟು ಬಿದ್ದು ಗಾಯಗೊಂಡಿದ್ದಾರೆ. ಇನ್ನು ಪತ್ನಿಯ ಮೇಲೆಯೂ ಮುದ್ದುರಂಗಾಚಾರ್ ದೊಣ್ಣೆಯಿಂದ ನಡೆಸಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಜಮೀನು ವಿವಾದ ಕಾಂಗ್ರೆಸ್ ಮುಖಂಡನ ಕಟ್ಟಿಹಾಕಿ ಮಾರಣಾಂತಿಕ ಹಲ್ಲೆ!

ಏನಿದು ವಿವಾದ?

ಗ್ರಾಮದ ಸರ್ವೆ ನಂಬರ್ 41-42 ರ ಜಮೀನು ‌ವಿಚಾರವಾಗಿ ರಂಗಸ್ವಾಮಿ ಕುಟುಂಬ ಹಾಗೂ ಮುದ್ದುರಂಗಚಾರ್ ಗಲಾಟೆಯಾಗಿತ್ತು. ಜಮೀನು ವಿವಾದ ಕೋರ್ಟ್‌ನಲ್ಲಿದೆ. ಕೋರ್ಟ್‌ನಲ್ಲಿದ್ದರೂ ಉಳುಮೆ ಮಾಡಲು ಬಂದಿದ್ದ ಮುದ್ದುರಂಗಾಚಾರ್ ಕುಟುಂಬ. ಕೋರ್ಟ್‌ನಲ್ಲಿ ವಿವಾದ ಇತ್ಯರ್ಥ ಆಗೋವರೆಗೆ ಉಳುಮೆ ಮಾಡುವಂತಿಲ್ಲ. ಇದನ್ನ ಪ್ರಶ್ನೆ ಮಾಡಲು ಜಮೀನಿಗೆ ಹೋಗಿದ್ದ ರಂಗಸ್ವಾಮಿ ದಂಪತಿ. ಜಮೀನು ಯಾರಿಗೆ ಸೇರಿದ್ದು ಎಂಬ ಬಗ್ಗೆ ಕೋರ್ಟ್ ನಲ್ಲಿ ಇತ್ಯರ್ಥದ ಬಳಿಕವೇ ಉಳುಮೆ ಮಾಡಿ. ವಿವಾದ ಕೋರ್ಟ್‌ನಲ್ಲಿರುವಾಗಲೇ ಉಳುಮೆ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದ್ದ ದಂಪತಿ. ಪ್ರಶ್ನಿಸಿದ ದಂಪತಿಗಳ ಮೇಲೆ ಏಕಾಏಕಿ ದೊಣ್ಣೆಗಳಿಗೆ ಅಟ್ಟಾಡಿಸಿ ಹೊಡೆದಿರುವ ಮುದ್ದುರಂಗಾಚಾರ್ ಕುಟುಂಬ. ರಂಗಸ್ವಾಮಿಗೆ ಹಲ್ಲೆ ನಡೆಸಿದ್ದಲ್ಲೆ ಆತನ ಪತ್ನಿ ಮೇಲೆ ದೊಣ್ಣೆಗಳಿಂದ ದಾಳಿ. ತಲೆ ಪೆಟ್ಟಾದರೂ ಬಿಡದ ಮುದ್ದುರಂಗಾಚಾರ್ ಕುಟುಂಬ. ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.

Latest Videos
Follow Us:
Download App:
  • android
  • ios