Asianet Suvarna News Asianet Suvarna News

ತುಮಕೂರು: ಜಮೀನು ವಿವಾದ ಎರಡು ಕುಟುಂಬಗಳ ನಡುವೆ ಮಾರಾಮಾರಿ

ಜಮೀನು ವಿವಾದ ವಿಚಾರಕ್ಕೆ ಎರಡು ಕುಟುಂಬಗಳ ಪರಸ್ಪರ ಬಡಿದಾಡಿಕೊಂಡ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಸೊಂಡೆಮಾರ್ಗೋನಹಳ್ಳಿಯಲ್ಲಿ ನಡೆದಿದೆ. ಶಶಿಕುಮಾರ್, ಲಕ್ಷ್ಮಣಯ್ಯ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ, ಘಟನೆಯಲ್ಲಿ ಲಕ್ಷ್ಮಣಯ್ಯ ಗಂಭೀರ ಗಾಯಗೊಂಡಿದ್ದು

Land dispute issue  fight between two farmer families in turuvekere at tumakuru rav
Author
First Published Jul 5, 2024, 3:43 PM IST

\ತುಮಕೂರು (ಜು.5): ಜಮೀನು ವಿವಾದ ವಿಚಾರಕ್ಕೆ ಎರಡು ಕುಟುಂಬಗಳ ಪರಸ್ಪರ ಬಡಿದಾಡಿಕೊಂಡ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಸೊಂಡೆಮಾರ್ಗೋನಹಳ್ಳಿಯಲ್ಲಿ ನಡೆದಿದೆ.

ಶಶಿಕುಮಾರ್, ಲಕ್ಷ್ಮಣಯ್ಯ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ, ಘಟನೆಯಲ್ಲಿ ಲಕ್ಷ್ಮಣಯ್ಯ ಗಂಭೀರ ಗಾಯಗೊಂಡಿದ್ದು, ತುರುವೇಕೆರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಾಗೇಗೌಡನಪಾಳ್ಯದ ಮಂಜುನಾಥ್,ಗಂಗಮ್ಮ,ನಾಗಯ್ಯ,ಮಂಜುನಾಥ ನ ತಾಯಿ,ಪತ್ನಿ ಹಲ್ಲೆ ಮಾಡಿದವರು.

ಲಕ್ಷ್ಮಣಯ್ಯಗೆ ಸೇರಿದ ಸರ್ವೇ ನಂ.26 ರ ಜಮೀನಿನ‌ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ನಡೆದಿರುವ ಗಲಾಟೆ. ಲಕ್ಷ್ಮಣಯ್ಯಗೆ ಸೇರಿದ 1 ಎಕರೆ 10 ಗುಂಟೆಗೆ ಪಹಣಿ ಇದೆ. ಆದರೆ ಸರ್ವೆ ನಂ 26 ರಲ್ಲಿ ಇರುವ 15 ಗುಂಟೆ ಕರಾಬಿನ ವಿಚಾರಕ್ಕೆ ಗಲಾಟೆ ಮಾಡಿರುವ ಮಂಜುನಾಥ್ ಕುಟುಂಬಸ್ಥರು. 15 ಗುಂಟೆ ಕರಾಬು ನಮಗೆ ಸೇರಬೇಕೆಂದು ಪಕ್ಕದ ಜಮೀನಿನ ಮಂಜುನಾಥ ಕುಟುಂಬಸ್ಥರು ಜಗಳ ತೆಗೆದಿದ್ದಾರೆ. ಆದರೆ ನನಗೆ ಸೇರಿದ್ದು ಎಂದು ಲಕ್ಷ್ಮಣಯ್ಯ ವಾದಿಸಿದ್ದಾರೆ ಇದರಿಂದ ಮಾತಿಗೆ ಮಾತು ಬೆಳೆದು ಪರಸ್ಪರ ಬಡಿದಾಡಿಕೊಂಡಿರುವ ಎರಡು ಕುಟುಂಬಸ್ಥರು.

ಟಿಪ್ಪರ್-ಬೈಕ್ ಡಿಕ್ಕಿ: ಯುವಕ ಸ್ಥಳದಲ್ಲೇ ದುರ್ಮರಣ, ಯುವತಿಗೆ ಗಂಭೀರ ಗಾಯ

 ಲಕ್ಷ್ಮಣಯ್ಯ ಕುಟುಂಬಸ್ಥರು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ದಾಳಿ ಮಾಡಿರುವ ಮಂಜುನಾಥ್ ಕುಟುಂಬಸ್ಥರು ಲಕ್ಷ್ಮಣಯ್ಯರನ್ನ ನೀರಿನಲ್ಲಿ ಮುಳುಗಿಸಿ ಕುಡುಗೋಲು,ಕಲ್ಲಿನಿಂದ ಹೊಡೆದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದಾಗಿ ಲಕ್ಷ್ಮಣಯ್ಯ ಗಂಭೀರ ಗಾಯಗೊಂಡಿದ್ದು ಸದ್ಯ ತುರುವೇಕೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

Latest Videos
Follow Us:
Download App:
  • android
  • ios