Asianet Suvarna News Asianet Suvarna News

ಅಂಗಡಿ ಮೇಲ್ಚಾವಣಿ ಕೊರೆದು ಲಕ್ಷಾಂತರ ರೂ. ಮೊಬೈಲ್ ಕದ್ದೊಯ್ದ ಖದೀಮರು!

ಚಮೊಬೈಲ್‌ ಅಂಗಡಿವೊಂದರ ಮೇಲ್ಚಾವಣಿ ಕೊರೆದು ಒಳ ನುಗ್ಗಿ ಸುಮಾರು ಲಕ್ಷಾಂತರ ಮೌಲ್ಯದ ಓಪೋ, ವಿವೋ, ಸ್ಯಾಮ್‌ಸಂಗ್‌ ಮತ್ತು ಐಫೋನ್‌ ಸೇರಿ 42 ಮೊಬೈಲ್‌ಗಳು ಹಾಗೂ ಬ್ರಾಂಡೆಡ್‌ ವಾಚ್‌ಗಳನ್ನು ಕಳ್ಳರು ದೋಚಿದ ಘಟನೆ ಸಿಂದಗಿಯಲ್ಲಿ ನಡೆದಿದೆ.

Lakhs of Rs.Mobile theft in mobile shop at sindagi vijayapur rav
Author
First Published May 26, 2023, 6:35 AM IST

ಚಳ್ಳಕೆರೆ (ಮೇ.26) : ಚಳ್ಳಕೆರೆ ನಗರವೂ ಸೇರಿದಂತೆ ವಿವಿಧೆಡೆಗಳಲ್ಲಿ ಕಳ್ಳತನದಲ್ಲಿ ತೊಡಗಿದ್ದ ಮೋಟಾರ್‌ ಬೈಕ್‌ ಕಳ್ಳನನ್ನು ಮಾಲು ಸಹಿತ ಇಲ್ಲಿನ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಚಳ್ಳಕೆರೆ ಠಾಣಾ ಇನ್ಸ್‌ಪೆಕ್ಟರ್‌ ಆರ್‌.ಎಫ್‌ ದೇಸಾಯಿ ಮಾರ್ಗದರ್ಶನದಲ್ಲಿ ಪಿಎಸ್‌ಐ ಕೆ.ಸತೀಶ್‌ನಾಯ್ಕ ಮತ್ತು ತಂಡ ಪಾವಗಡ ರಸ್ತೆಯ ಡಿ.ಉಪ್ಪಾರಹಟ್ಟಿಗೇಟ್‌ ಬಳಿ ಅನುಮಾನಸ್ಪದವಾಗಿ ಓಡಾಡುತ್ತಿದ್ದ ಬೈಕ್‌ ತಡೆದು ಪರಿಶೀಲಿಸಿದಾಗ, ದಾಖಲಾತಿ ಇಲ್ಲದ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶದ ಶೆಟ್ಟೂರು ಮಂಡಲದ ತಿಪ್ಪನಹಳ್ಳಿ ಗ್ರಾಮದ ವಿ. ವಿರೂಪಾಕ್ಷನನ್ನು(22) ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಚಳ್ಳಕೆರೆ ಠಾಣೆಯ ನಾಲ್ಕು, ಪರಶುರಾಮಪುರ ಠಾಣೆಯ ಎರಡು, ಚಿತ್ರದುರ್ಗ ಠಾಣೆ ವ್ಯಾಪ್ತಿಯ ಒಂದು ಮೋಟಾರ್‌ ಬೈಕ್‌ ಸೇರಿದಂತೆ ಒಟ್ಟು 2.55 ಲಕ್ಷ ರು.ಮೌಲ್ಯದ 7 ಬೈಕ್‌ಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಹೊನ್ನಾವರ: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕು ತುಂಬಿದ ಲಾರಿ...

ಪೊಲೀಸರ ಕಾರ್ಯಚರಣೆಯ ಬಗ್ಗೆ ಜಿಲ್ಲಾರಕ್ಷಣಾಧಿಕಾರಿ ಕೆ.ಪರಶುರಾಮ್‌, ಹೆಚ್ಚುವರಿ ರಕ್ಷಣಾಧಿಕಾರಿ ಕುಮಾರಸ್ವಾಮಿ, ಉಪವಿಭಾಗದ ಡಿವೈಎಸ್ಪಿ ರಮೇಶ್‌ಕುಮಾರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದು, ಬಹುಮಾನವನ್ನು ಘೋಷಿಸಿದ್ದಾರೆ. ಸಿಬ್ಬಂದಿ ಬಿ.ಆರ್‌ ಸತೀಶ್‌, ಕೆ.ಹಾಲೇಶ್‌, ಶ್ರೀಧರ ವಸಂತ ಧರಣೆಯ್ಯನವರ್‌, ಶಿವರಾಜ್‌, ಮಂಜುನಾಥ ಮುಡುಕೆ, ಕೆ.ಮಂಜುನಾಥ ಇದ್ದರು.

ಅಂಗಡಿ ಮೇಲ್ಚಾವಣಿ ಕೊರೆದು ಲಕ್ಷಾಂತರ ರೂ. ಮೊಬೈಲ್ ಕಳ್ಳತನ

ಸಿಂದಗಿ: ಮೊಬೈಲ್‌ ಅಂಗಡಿವೊಂದರ ಮೇಲ್ಚಾವಣಿ ಕೊರೆದು ಒಳ ನುಗ್ಗಿ ಸುಮಾರು ಲಕ್ಷಾಂತರ ಮೌಲ್ಯದ ಓಪೋ, ವಿವೋ, ಸ್ಯಾಮ್‌ಸಂಗ್‌ ಮತ್ತು ಐಫೋನ್‌ ಸೇರಿ 42 ಮೊಬೈಲ್‌ಗಳು ಹಾಗೂ ಬ್ರಾಂಡೆಡ್‌ ವಾಚ್‌ಗಳನ್ನು ಕಳ್ಳರು ದೋಚಿದ್ದಾರೆ. ಹಲವು ವಸ್ತುಗಳನ್ನು ಕಳ್ಳತನ ಮಾಡಿದ್ದಲ್ಲದೆ, ಅಲ್ಲಿದ್ದ ಕೆಲವು ಮೊಬೈಲ್‌ಗಳನ್ನು ನಾಶಪಡಿಸಿದ್ದಾರೆ. ಅಂಗಡಿ ಒಳಗಿಳಿದ ತಕ್ಷಣವೇ ಖದೀಮ ಕೆಳಗಡೆಯಿದ್ದ ಸಿಸಿ ಕ್ಯಾಮರಾ ಬಂದ್‌ ಮಾಡಿದ್ದಾರೆ. ಹಲವು ದಿನಗಳಿಂದ ಹೊಂಚು ಹಾಕಿ ಕಳ್ಳತನ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಅಂಗಡಿ ಮಾಲೀಕ ಅನಿಲ ಕೆಂಭಾವಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಸಿಂದಗಿ ಪೊಲೀಸ್‌ ಠಾಣೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಲವು ದಿನಗಳ ಹಿಂದೆ ಹಾಡಹಗಲೇ ಔಷಧಿ ಅಂಗಡಿಯಲ್ಲಿ ಹಣ ದೋಚಿದ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿತ್ತು.

ಹಾಡಹಗಲೇ ಮನೆಯ ಬೀಗ ಮುಗಿದು ಚಿನ್ನ ಕದ್ದವನ ಸೆರೆ

Follow Us:
Download App:
  • android
  • ios