ಗುವಾಹಟಿ(ಜೂ.01): ಮೈತುಂಬಾ ಒಡವೆ, ದುಬಾರಿ ಉಡುಪುಗಳನ್ನು ಧರಿಸಿ ಟಿಕ್‌ಟಾಕ್‌ ವಿಡಿಯೋವನ್ನು ಅಪ್‌ಲೋಡ್‌ ಮಾಡುತ್ತಿದ್ದ ಮಹಿಳೆಯ ವಿಡಿಯೋವನ್ನು ನೋಡಿದ ಅಸ್ಸಾಂ ಪೊಲೀಸರು ಆಕೆಯ ಕೈಗೆ ಬೇಡಿ ತೊಡಿಸಿದ ವಿಚಿತ್ರ ಘಟನೆ ನಡೆದಿದೆ.

ಅಸ್ಸಾಂನ ಜೊರ್ಹಾಟ್‌ ಜಿಲ್ಲೆಯ ಸುರುಜ್‌ ನಗರ ನಿವಾಸಿ ನಬಜ್ಯೋತಿ ಪಾಯೆಂಗ್‌ ಎನ್ನುವವರು ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಕಾಣೆಯಾಗಿದ್ದ ಬಗ್ಗೆ ದೂರು ನೀಡಿದ್ದರು. ಅಲ್ಲದೇ ಮನೆಯಲ್ಲಿ ಇಟ್ಟಿದ್ದ ಪತ್ನಿಯ ಒಡವೆ ಹಾಗೂ ಉಡುಪುಗಳು ಕಾಣೆ ಆಗಿರುವ ಸಂಗತಿಯನ್ನೂ ಪೊಲೀಸರ ಗಮನಕ್ಕೆ ತಂದಿದ್ದರು.

ಆದಾದ ಕೆಲ ದಿನಗಳ ಬಳಿಕ ಮನೆಗೆಲಸದಾಕೆ ಕಾಣೆಯಾದ ಆಭರಣ ಹಾಗೂ ಉಡುಪು ಧರಿಸಿದ ಟಿಕ್‌ಟಾಕ್‌ ವಿಡಿಯೋವನ್ನು ಹಾಕಿದ್ದು, ಗಮನಕ್ಕೆ ಬಂದಿತ್ತು. ಇದರ ಜಾಡು ಹಿಡಿದು ಪೊಲೀಸರು ಮನೆಗೆಲಸದ ಮಹಿಳೆಯನ್ನು ಬಂಧಿಸಿದ್ದಾರೆ.