ಬೆಂಗಳೂರು(ಮಾ. 16)  ಎನ್ಜಿಓಗೆ ದೇಣಿಗೆ ಸಂಗ್ರಹಿಸುವ ಸೋಗಿನಲ್ಲಿ ಬಂದು ಕಳ್ಳತನ  ಮಾಡಲಾಗಿದೆ. ಎಚ್ಎಎಲ್ ಸುತ್ತಮುತ್ತಲಿನ ಏರಿಯಾದ ಪಿಜಿಗಳಿಗೆ ಕಳ್ಳರ ಕಾಟ ಹೆಚ್ಚಾಗಿದೆ. 

ನಗರದಲ್ಲಿ ಹುಟ್ಟಿಕೊಂಡಿದ್ದೆ ಕಳ್ಳಿಯರ ಜಾಲ ಹುಟ್ಟಿಕೊಂಡಿದ್ದು ಅಪಾರ್ಟ್ ಮೆಂಟ್ ಗಳೆ ಇವರ ಟಾರ್ಗೆಟ್.  ಅಪಾರ್ಟ್  ಮೆಂಟ್ ನಲ್ಲಿರುವ ಪಿಜಿಗಳನ್ನೇ ಹುಡುಕುವ ಚಾಲಾಕಿಯರಿವರು.

ಗುಪ್ತಾಂಗದಲ್ಲಿ ಬಚ್ಚಿಟ್ಟಿದ್ದಳು 8 ಕೋಟಿ ಮೊತ್ತದ ಕೊಕೇನ್!

ಮಾರ್ಚ್.13 ರಂದು ಮಾರುತಿನಗರದ ಪಿಜಿಯಲ್ಲಿ ಕಳ್ಳತನ ನಡೆದಿದ್ದು ಬೆಳಕಿಗೆ ಬಂದಿದೆ. ಸಾಫ್ಟ್‌ವೇರ್ ಉದ್ಯೋಗಿಯ ಲ್ಯಾಪ್‌ಟಾಪ್ ಕದ್ದು ಕಳ್ಳಿ ಎಸ್ಕೇಪ್  ಆಗಿದ್ದಾಳೆ. ಸಾಮಾನ್ಯರಂತೆ ಪಿಜಿಗೆ ಎಂಟ್ರಿಕೊಟ್ಟಿದ್ದ ಅಪರಿಚಿತ ಮಹಿಳೆ  ಲ್ಯಾಪ್ ಟಾಪ್ ಕದ್ದು ಪರಾರಿಯಾಗಿದ್ದಾಳೆ.

ಎನ್ ಜಿಓದಿಂದ ಬಂದಿದ್ದು ಬಡಮಕ್ಕಳಿಗಾಗಿ ಸಹಾಯ ಮಾಡುವಂತೆ ಕೇಳಿದ್ದಳು. ಬಳಿಕ ನಾಲ್ಕನೇ ಮಹಡಿಗೆ ಹೋಗಿ ಬಾಗಿಲು ಲಾಕ್ ಮಾಡದಿರೋ ರೂಮಿನಲ್ಲಿ ಕಳ್ಳತನ ಮಾಡಿದ್ದಾಳೆ. ರೂಮಿನಲ್ಲಿ ವಾಸವಿದ್ದ ರಾಘವ್ ಎಂ.ನಾಯರ್ ರೂಮಿನಲ್ಲಿ ಲ್ಯಾಪ್ ಟಾಪ್  ಕದ್ದು ಪರಾರಿಯಾಗಿದ್ದಾಳೆ. ಸಿಸಿಟಿವಿಯಲ್ಲಿ ಕಳ್ಳಿಯ ಕೈಚಳಕ ದಾಖಲಾಗಿದ್ದು  ಎಚ್ಎಎಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.