ಯುವತಿಯ ಜೊತೆಗಿನ ಖಾಸಗಿ ವಿಡಿಯೋ ಮಾಧ್ಯಮಗಳಿಗೆ ನೀಡುವುದಾಗಿ ಯುವಕನಿಗೆ ಬ್ಲ್ಯಾಕ್ ಮೇಲ್ ಪ್ರಕರಣ/ ಹುಬ್ಬಳ್ಳಿಯ ಯುವಕ ಹನಿ ಟ್ರ್ಯಾಪ್ ಪ್ರಕರಣಕ್ಕೆ ಹೊಸ ತಿರುವು/ ಯುವತಿ ವಿರುದ್ಧ‌ ದೂರು ದಾಖಲಿಸುತ್ತಿದ್ದಂತೆ, ಪ್ರತ್ಯಕ್ಷಳಾದ ಯವತಿ ಮದುವೆಯಾಗುವುದಾಗಿ ವಂಚಿಸಿ ಬಳಸಿಕೊಂಡಿದ್ದಾನೆ ಎಂದು ದೂರು ನೀಡಿದ‌ ಯುವತಿ/ 

ಹುಬ್ಬಳ್ಳಿ(ಮಾ. 14) ಯುವತಿಯ ಜೊತೆಗಿನ ಖಾಸಗಿ ವಿಡಿಯೋ ಮಾಧ್ಯಮಗಳಿಗೆ ನೀಡುವುದಾಗಿ ಯುವಕನಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಪ್ರಕರಣಕ್ಕೆ ತಿರುವು ಸಿಕ್ಕಿದೆ.

ಹುಬ್ಬಳ್ಳಿಯ ಯುವಕನ ಹನಿ ಟ್ರ್ಯಾಪ್ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು ಯುವತಿ ವಿರುದ್ಧ‌ ದೂರು ದಾಖಲಿಸುತ್ತಿದ್ದಂತೆ ಆಕೆ ಪ್ರತ್ಯಕ್ಷಳಾಗಿದ್ದಾಳೆ.

ಮದುವೆಯಾಗುವುದಾಗಿ ವಂಚಿಸಿ ಬಳಸಿಕೊಂಡಿದ್ದಾನೆ ಎಂದು ದೂರು ನೀಡಿದ್ದಾರೆ. ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ದಾಖಲು ಮಾಡಿದ ಯುವತಿ ದೂರು ನೀಡಿದ್ದಾರೆ.

ಶನಿವಾರ ಯುವತಿ ಸೇರಿ 10 ಜನರ ವಿರುದ್ಧ ಅಪಹರಣ, ಬ್ಲ್ಯಾಕ್ ಮೇಲ್ ಪ್ರಕರಣವನ್ನು ಯುವಕ ದಾಖಲಿಸಿದ್ದ. ಐದು ಲಕ್ಷ ಹಣ ನೀಡುವಂತೆ ಅಪಹರಿಸಿ, ಹಲ್ಲೆ ನಡೆಸಿದ್ದರು ಎಂದು ಆರೋಪಿಸಿದ್ದ. ಪ್ರಕರಣ ದಾಖಲಾದ ಬೆನ್ನಲ್ಲೆ ಯುವತಿ ಸಹ ಪ್ರತಿದೂರು ನೀಡಿದ್ದಾರೆ.

ರಮೇಶ್ ವಿರುದ್ಧ ವಿಡಿಯೋ ಮಾಡಿದ ಯುವತಿ ಹೇಳಿದ ಮಾತುಗಳು

ವಿಡಿಯೋ ಶೂಟ್ ಮಾಡಿ ಅದನ್ನು ಇಟ್ಟುಕೊಂಡು ಹಣಕ್ಕೆ ಬೇಡಿಕೆ ಇಡಲಾಗುತ್ತಿದೆ. 5 ಲಕ್ಷ ರೂಪಾಯಿ ಹಣ ನೀಡಲು ಒಪ್ಪದಿದ್ದಾಗ ಥಳಿಸಲಾಗಿದೆ ಎಂದು ಯುವಕ ಆರೋಪಿಸಿದ್ದ.

ನರ್ಸ್ ಕೋರ್ಸ್ ಮಾಡುವ ವೇಳೆ ಬಿಸಿಎಂ ಹಾಸ್ಟಲ್ ನಲ್ಲಿ ರೂಂ ಹುಡುಕಾಟದಲ್ಲಿದ್ದಾಗ ಯುವಕನ ಪರಿಚಯವಾಗಿತ್ತು. ಯುವಕ ತನಗೆ ಬಿಸಿಎಂ ಹಾಸ್ಟಲ್ ನಲ್ಲಿರುವ ಅಧಿಕಾರಿಗಳು ಪರಿಚಯ ಇದ್ದಾರೆ ಎಂದು ನಂಬಿಸಿದ್ದ. ನಂತರ ಹಾಸ್ಟೆಲ್ ವಿಚಾರ ಮಾತನಾಡುವುದು ಇದೆ ಎಂದು ಹೇಳಿ ತನ್ನ ಅಂಗಡಿಗೆ ಕರೆಯಿಸಿಕೊಂಡು ಪ್ರೀತಿ ಮಾಡುವುದಾಗಿ ಹೇಳಿದ್ದ.‌ ಮನೆಗೆ ಬಾ ಎಂದು ಕರೆಸಿಕೊಂಡು ಬಲವಂತವಾಗಿ ಲೈಂಗಿಕವಾಗಿ ಬಳಸಿಕೊಂಡಿದ್ದು ಅದನ್ನು ರೆಕಾರ್ಡ್ ಮಾಡಿಕೊಂಡಿದ್ದಾನೆ ಎನ್ನುವುದು ಯುವತಿ ಕಡೆಯ ಆರೋಪ.